ಬೆಳಗಾವಿ – ರಾಮತೀರ್ಥ ನಗರದ ಹೊಂಬೆಳಕು ಸಾಹಿತ್ಯಸಂಘ ಹಾಗೂ ಧಾರವಾಡ ಕಲ್ಯಾಣ ನಗರ ಚೆನ್ನಲೀಲಾ ಟ್ರಸ್ಟ್ ಸಹಯೋಗದಲ್ಲಿ ಆಗಸ್ಟ್ 11ರಂದು 10:30ಕ್ಕೆ ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರ್ರದಾನ ಹಾಗೂ ಲೀಲಾ ಕಲಕೋಟಿ ವಿರಚಿತ ಮಹಾಮಹಿಮ ಮಲ್ಲನಗೌಡರು ಕೃತಿ ಲೋಕಾರ್ಪಣೆ ಕವಿ ಗೋಷ್ಠಿ ಸಮಾರಂಭ ಏರ್ಪಡಿಸಲಾಗಿದೆ.
ಸಾಹಿತಿ ಸ ರಾ ಸುಳಕೊಡೆ ಸಮಾರಂಭದ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ, ಮುಂಬೈಯ ವಿದ್ಯಾಧರ ಮುತಾಲಿಕ್ ದೇಸಾಯಿ ಅವರು ರಾಷ್ಟ್ರಕೂಟ ಸಾಹಿತ್ಯಶ್ರೀ, ಪ್ರಶಸ್ತಿ ಪ್ರದಾನ ಮಾಡುವರು.
ಅತಿಥಿಗಳಾಗಿ ಧಾರವಾಡದ ಹಿರಿಯ ಸಾಹಿತಿ ಲೀಲಾ ಕಲಕೋಟಿ, ಡಾ.ಬಿ ಜಿ ಕಾಲಿ ಮಿರ್ಚಿ, ಡಾಕ್ಟರ್ ಅನುಪಮಾ ಖೋತ ಆಗಮಿಸುವರು.
ಇದೇ ಸಂದರ್ಭದಲ್ಲಿ ಕಲಕೋಟಿ ವಿರಚಿತ ಮಹಾಮಹಿಮ ಶ್ರೀ ಮಲ್ಲನಗೌಡರು ಕೃತಿ ಲೋಕಾರ್ಪಣೆಗೊಳ್ಳಲಿದೆ ಆಯ್ದ 15 ಜನ ಕವಿಗಳು ಮತ್ತು ಕವಯಿತ್ರಿಯರು ಕವಿತೆ ವಾಚಿಸಲಿದ್ದಾರೆ ನಿವೃತ್ತ ಉಪನ್ಯಾಸಕಿ ಶಶಿಕಲಾ ಪಾವಸೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು ನಿವೃತ್ತ ಪ್ರಾಚಾಯೆ೯ ಡಾಕ್ಟರ್ ಸರಸ್ವತಿ ಕಳಸದ ಕೃತಿ ಪರಿಚಯ ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ