spot_img
spot_img

ಹೆಚ್ ಎನ್ ನಂಜೇಗೌಡರ ಸ್ಮರಣಾರ್ಥ ಕೃತಿ ಬಿಡುಗಡೆ ಕವಿ ಕಾವ್ಯ ಕುಂಚ ಕಾರ್ಯಕ್ರಮ

Must Read

spot_img
- Advertisement -

ಹಾಸನ – ಅರಕಲಗೂಡು ಪಟ್ಟಣದ ಶಿಕ್ಷಕರ ಭವನದಲ್ಲಿ ಹಾಸನ ಜಿಲ್ಲಾ ಬರಹಗಾರರ ಸಂಘ(ರಿ)ದ ಅಧ್ಯಕ್ಷ ಸಂಘಟಕರು ಸುಂದರೇಶ್ ಡಿ ಉಡುವೇರೆ ಅವರ ಸಾರಥ್ಯದಲ್ಲಿ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ರಾಜಕೀಯ ಧುರೀಣ, ನೀರಾವರಿ ತಜ್ಞ ಹೆಚ್. ಎನ್. ನಂಜೇಗೌಡರ ಸ್ಮರಣಾರ್ಥ ಆವರಣದ ಮುಂಭಾಗ ಕನ್ನಡ ಧ್ವಜಾರೋಹಣ ಚುಟುಕು ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ದಿವಾಕರ್ ಯುವ ಮುಖಂಡರು ಗಾಂಧಿನಗರ ಶಶಿಕುಮಾರ್ ಕಾರ್ಯದರ್ಶಿ ದೂಡ್ಡಮ್ಮ ಸೇವಾ ಸಮಿತಿ ಅರಕಲಗೂಡು ಜಿ ಟಿ ಕುಮಾರಸ್ವಾಮಿ ಗಂಗೂರು. ನರಸೇಗೌಡರು ವಡ್ಡರ ಹಳ್ಳಿ . ಸ್ವಾಮಿ ನಾಯಕ್ ಹಿರಿಯ ವಿಜ್ಞಾನಿಗಳು ಡಿ ಆರ್ ಡಿ ಓ ಬೆಂಗಳೂರು . ಕೆ ಪಿ ನಾರಾಯಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅರಕಲಗೂಡು ಧ್ವಜಾರೋಹಣ ನೇರವೇರಿಸಿದರು

ಹೆಚ್. ಎನ್ ನಂಜೇಗೌಡರ ಕುರಿತ ಎರಡು ಕೃತಿಗಳ ಮರು ಲೋಕಾರ್ಪಣೆಯನ್ನು ಅರಕಲಗೂಡಿನ ಶಾಸಕರು ಎ.ಮಂಜು ಉದ್ಘಾಟಿಸಿದರು. ಎಚ್. ಎನ್.ಎನ್ ಅವರ ಬದುಕು, ರಾಜಕೀಯ ನಡೆ, ರೈತಪರ ಸೇವೆ ಕುರಿತು ಡಾ.ನಿಂಬೆಹಳ್ಳಿ ಚಂದ್ರಶೇಖರ್. ಹೆಚ್. ಎಸ್. ಗೋವಿಂದೇಗೌಡರ ಕೃತಿಗಳನ್ನು ಜಿ.ಎನ್.ಅನಸೂಯ, ನಿವೃತ್ತ ಪ್ರಾಂಶುಪಾಲರು ಹಾಗೂ ಮಹೇಶ್ ಪ್ರಾಂಶುಪಾಲರು ಪರಿಚಯ ಮಾಡಿದರು. ಹೆಚ್. ಈ. ಅಶೋಕ್.ಯೋಗೇಶ್ ಕಾರ್ಗಿಲ್ ಉದ್ಯಮಿಗಳು ಅರಕಲಗೂಡು.ಹೆಚ್ ಎನ್ ವಿಜಿ ಕುಮಾರ್ ಅಧ್ಯಕ್ಷರು ಹಿರಿಯ ವಿದ್ಯಾರ್ಥಿಗಳ ಬಳಗ ಹನ್ಯಾಳು ಸ್ಮರಿಸಿ ಶಾಲಾ ಕಾಲೇಜು ಮಕ್ಕಳಿಗೆ ತಿಳುವಳಿಕೆ ಹೇಳಿದರು.

ಮಕ್ಕಳು ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಪ್ರಶಂಸೆ ಪಡೆದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಕವಿ ಎನ್. ಎಲ್.ಚನ್ನೇಗೌಡರ ಅಧ್ಯಕ್ಷತೆಯಲ್ಲಿ, ಸಾಹಿತಿ ಗೊರೂರು ಅನಂತರಾಜು ಉಪಸ್ಥಿತಿಯಲ್ಲಿ ಕವಿ ಕಾವ್ಯ ಗಾಯನ ಮತ್ತು ಕಲಾಕುಂಚ ಕಾರ್ಯಕ್ರಮವು ಜರುಗಿತು.

- Advertisement -

ಕವಿ ತನ್ನ ಭಾವನೆಗಳ ಹೋಳಿಗೆಯೊಳಗಿನ ಹೂರಣದಂತೆ ಹುದುಗಿಸಿಟ್ಟ ಕವಿತೆಗಳಿಗೆ ದಿಬ್ಬೂರು ರಮೇಶ್, ವಾಣಿ ನಾಗೇಂದ್ರ ಮೊದಲಾದ ಗಾಯಕರು ರಾಗ ಸಂಯೋಜನೆ ಮಾಡಿ ರಚನೆಕಾರರ ಉಪಸ್ಥಿತಿಯಲ್ಲಿ ಸುಶ್ರಾವ್ಯವಾಗಿ ಹಾಡುವಾಗಲೇ ಮತ್ತೊಂದೆಡೆ ಚಿತ್ರ ರಚನೆಕಾರರಾದ ಆರ್. ಶಿವಕುಮಾರ್ ತಂಡದವರು ಕವಿತೆಯ ಭಾವಾಭಿವ್ಯಕ್ತಿಯನ್ನು ಬಿಂಬಿಸುವ ಚಿತ್ರವನ್ನು ಬಿಡಿಸಿ ತಮ್ಮ ಪ್ರತಿಭೆ ತೋರ್ಪಡಿಸುತ್ತಿದ್ದರು. ಕವಿಯ ಕವಿತೆಗೆ ಗಾಯನ ಮತ್ತು ಚಿತ್ರಾಭಿವ್ಯಕ್ತಿಯು ಒಮ್ಮೆಲೇ ಸೃಷ್ಟಿಯಾಗುವುದನ್ನು ಸಭಿಕರು ಕಂಡು ಮೆಚ್ಚಿದರು. ಎನ್. ಎಲ್. ಚನ್ನೇಗೌಡರು ಮಾತನಾಡಿ “ಒಂದು ಕವಿತೆ ಜನಸಾಮಾನ್ಯರ ಸ್ಮೃತಿ ಪಟಲದಲ್ಲಿ ಉಳಿದು, ಕವಿಗೆ ಜನಪ್ರಿಯತೆ ತಂದು ಕೊಡಬೇಕೆಂದರೆ ಸಂಗೀತಗಾರರ ಸಂಯೋಜನೆಯ ಸೆಳೆತಕ್ಕೆ ಸಿಲುಕಿದಾಗ ಮಾತ್ರ ಸಾಧ್ಯ. ಅದಕ್ಕೆ ಕುವೆಂಪು, ದ.ರಾ.ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ, ಕೆ.ಎಸ್. ನಿಸಾರ್ ಅಹಮ್ಮದ್ , ಡಿ.ಎಸ್. ಕರ್ಕಿ ಮುಂತಾದವರ ಕವಿತೆಗಳು ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್ ರಂತಹವರ ಸ್ವರ ಸಂಯೋಜನೆಯಿಂದ ಡಾ.ರಾಜ್ ಕುಮಾರ್, ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಂತಹ ಕಂಠಸಿರಿಯಲ್ಲಿ ನಾಡಿನ ಸಂಗೀತ ರಸಿಕರ ಕರ್ಣಾನಂದದ ಸವಿಯನುಭವ ನೀಡಲು ಸಾಧ್ಯವಾಗಿದೆ. ಸಂದರೇಶ್ ಅವರು ಪರಿಶ್ರಮದ ಈ ಕಾರ್ಯಕ್ರಮವು ಸಾರ್ಥಕತೆ ಪಡೆದಿದೆ. ಇಂತಹ ಕಾರ್ಯಕ್ರಮ ಎಲ್ಲೆಡೆ ಕಸಾಪ ಮತ್ತು ಇತರೆ ಜವಾಬ್ದಾರಿಯುತ ಕನ್ನಡ ಸಂಘ ಸಂಸ್ಥೆಗಳ ಮುಖೇನ ನಡೆದರೆ ಯುವ ತಲೆಮಾರಿನಲ್ಲಿ ಸಂಸ್ಕೃತಿ, ಪರಂಪರೆಯ ತುಡಿತ ಹೆಚ್ಚು ಮಾಡಬಹುದು ಎಂದರು.

ಬೇರೆ ಬೇರೆ ಭಾಗಗಳಿಂದ ಆಗಮಿಸಿದ ಕವಿಗಳು ಭಾಗವಹಿಸಿ ಮೆರುಗು ನೀಡಿದರು. ವಿಶೇಷವಾಗಿ ಈ ದಿನದ ಕಾರ್ಯಕ್ರಮದ ಮುಖ್ಯ ವಿಷಯ ಹೆಚ್. ಎನ್. ನಂಜೇಗೌಡರ ಬಗೆಗಿನ ಕವಿತೆಯನ್ನು ಹೊ.ರಾ.ಪರಮೇಶ್ ಹೊಡೇನೂರು ಅವರು ಸ್ವತಃ ಹಾಡಿ ಆರ್. ಶಿವಕುಮಾರ್ ಅವರು ರಚಿಸಿದ ಭಾವಚಿತ್ರ ಗಮನ ಸೆಳೆಯಿತು. ಈ ಕಾರ್ಯಕ್ರಮ ವೀಕ್ಷಿಸಿ ಲೇಖಕರೂ ಆದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಪ್ರಶಂಸೆ ವ್ಯಕ್ತಪಡಿಸಿದರು.
ಕವಿಗಳಾದ ಗೊರೂರು ಅನಂತರಾಜು ಸಾಹಿತಿಗಳು ಬೋರೇಗೌಡರು ಅರಸೀಕೆರೆ ಸಾವಿತ್ರಮ್ಮ ಅರಸೀಕೆರೆ, ಪ್ರೇಮಾ ಪ್ರಶಾಂತ್, ಬರಾಳು ಶಿವರಾಮ್ ಪ್ರದೀಪ್ ಕುಮಾರ್, ಗಿರಿಜಾ ನಿರ್ವಾಣಿ, ಸವಿತಾ ಶ್ರೀಧರ ಮಂಜು ಮೋಕಲಿ,ವಸಂತ ಹುಲ್ಲೇರ ,ಪದ್ಮ ಹೆಚ್ ಕೆ, ಕಿರಣ್ ಕುಮಾರ್ ಬೇಲೂರು ಯೋಗರಾಜ್ ಶಿಕ್ಷಕರು,ಬೀರಲಿಂಗಪ್ಪ,ಬಿ ಎಂ ಭಾರತಿ ಅರಕಲಗೂಡು, ಸುಬ್ರಹ್ಮಣ್ಯ, ಸತೀಶ್ ಪೋಲೀಸ್ ವಡ್ಡರ ಹಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group