- Advertisement -
ಹಲಗಾ( ಬೆಳಗಾವಿ)- ಇಲ್ಲಿನ ಶ್ರೀಮತಿ ಜೆ. ಆರ್. ದೊಡ್ಡಣ್ಣವರ ಹೈಸ್ಕೂಲಿನ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಈಚೆಗೆ ಜರುಗಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಹಾವೀರ ಬೆಲ್ಲದ, ನಿವೃತ್ತ ಅಶೋಕ ಜಕ್ಕಣ್ಣವರ ಆಗಮಿಸಿದ್ದರು. ಬಾಹುಬಲಿ ಕಡೇಮನಿ ಅವರು ಅಧ್ಯಕ್ಷತೆ ವಹಿಸಿದ್ದರು.
- Advertisement -
ಎಸ್ಎಸ್ಎಲ್’ಸಿ ಪರೀಕ್ಷೆಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ತಲಾ 1000ರೂ. ನಗದು ಬಹುಮಾನ ನೀಡುವುದಾಗಿ ಅಶೋಕ ಜಕ್ಕಣ್ಣವರ ಅವರು ಘೋಷಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ, ಪತ್ರಕರ್ತ ಹಾಗೂ ಸ್ಪರ್ಧಾತ್ಮಕ ಪುಸ್ತಕಗಳ ಮಾರ್ಗದರ್ಶಕರಾಗಿರುವ ಅಶೋಕ ಚಿಕ್ಕಪರಪ್ಪಾ ಅವರು ಉಡುಗೊರೆಯಾಗಿ ಕೊಟ್ಟ ಪುಸ್ತಕಗಳನ್ನು 8, 9 ಹಾಗೂ 10ನೇ ತರಗತಿಯ 286 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಮುಖ್ಯಾಧ್ಯಾಪಕಿ ನಳಿನಿ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕ ಪ್ರಶಾಂತ ಪಾಟೀಲ ಕಾರ್ಯಕ್ರಮ ನಡೆಸಿಕೊಟ್ಟರು.