ಬೆಳಗಾವಿ – ಬೆಳಗಾವಿ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 28 ಜನವರಿ 2025 ರಂದು ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಹಮ್ಮಿಕೊಳ್ಳಲು ಯೋಜಿಸಿದ್ದು ಈಗಾಗಲೇ ಸಮ್ಮೇಳನದ ತಯಾರಿ ಭರದಿಂದ ನಡೆದಿದೆ
ಆ ನಿಟ್ಟಿನಲ್ಲಿ ಬೆಳಗಾವಿ ತಾಲೂಕಿನ ಸಾಹಿತಿಗಳು, ಲೇಖಕರು ತಮ್ಮ ನೂತನ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ,ಚುಟುಕು ಕವನಗಳು ಹೀಗೆ ವಿವಿಧಪಸ್ತಕಗಳನ್ನು ಯಾರಾದರೂ ಈ ವರ್ಷ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಇಚ್ಚಿಸುತ್ತಿದ್ದರೆ ತಮ್ಮ ಒಂದು ಪುಸ್ತಕದ ಪ್ರತಿ ಕಳುಹಿಸುವುದರ ಜೊತೆಗೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.
ಮಹಾಂತೇಶ ವೈ. ಮೆಣಸಿನಕಾಯಿ. ಕಾರ್ಯದರ್ಶಿಗಳು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೆಳಗಾವಿ. ವಿಳಾಸ : ಪ್ಲಾಟ್ ಸಂಖ್ಯೆ -೭೩೬೦, ಸೆಕ್ಟರ್ ಸಂ -೧೦, ಆಂಜನೇಯನಗರ, ಬೆಳಗಾವಿ. ವಾಟ್ಸಪ್ಪ್ ….೯೭೪೨೧೯೨೬೧೫….. .ಮೊಬೈಲ್ ಸಂ.-೯೪೪೯೨೦೯೫೭೦