spot_img
spot_img

ಕಲಿಕೆ ಫಲಪ್ರದಯುಕ್ತವಾಗುವ ನಿಟ್ಟಿನಲ್ಲಿ ಬಿಆರ್ ಸಿ ಹಾಗೂ ಸಿಆರ್ ಪಿ ಗಳು ಕೆಲಸ ಮಾಡಬೇಕು

Must Read

spot_img
- Advertisement -

ಮೂಡಲಗಿ: ಶಿಕ್ಷಕರ ಹೊಂದಾಣಿಕೆ, ಶಾಲಾ ಮೌಲ್ಯಮಾಪನ, ವಿದ್ಯಾ ಪ್ರವೇಶ, ಶೈಕ್ಷಣಿಕ ಕಾರ್ಯಚಟುವಟಿಕೆಗಳ ಅನುಷ್ಠಾನ ಹಾಗೂ ಸರಕಾರಿ ಶಾಲೆಗಳ ಸಬಲೀಕರಣಗೊಳಿಸುವಲ್ಲಿ ಮಾರ್ಗದರ್ಶಕರ ಹಾಗೂ ಮೇಲಾಧಿಕಾರಿಗಳ ಪಾತ್ರ ಅಗತ್ಯವಾಗಿದೆ ಎಂದು ಚಿಕ್ಕೋಡಿ ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ ಅನಿಲಕುಮಾರ ಗಂಗಾಧರ ಹೇಳಿದರು.

ಅವರು ಬುಧವಾರ ಪಟ್ಟಣದ ಬಿಇಒ ಕಛೇರಿಯಲ್ಲಿ ಜರುಗಿದ ಸಿ.ಆರ್.ಪಿಗಳ ಹಾಗೂ ಬಿ.ಆರ್.ಸಿಯಲ್ಲಿ ಜರುಗಿದ ಸರಕಾರಿ ಪ್ರಾಥಮಿಕ ಅತಿಥಿ ಶಿಕ್ಷಕರ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಕಲಿಕಾ ಚೇತರಿಕೆ ತರಬೇತಿಯಲ್ಲಿ ಬಾಗವಹಿಸಿ ಮಾತನಾಡಿ, ಗುಣಮಟ್ಟದ ಸಂದರ್ಶನ ನೀಡುವ ಮೂಲಕ ಅಗತ್ಯ ಮಾರ್ಗದರ್ಶನ ನೀಡಿ ಕಲಿಕೆ ಫಲಪ್ರದವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಶೈಕ್ಷಣಿಕವಾಗಿ ಮೌಲ್ಯಯುಕ್ತ ಕಲಿಕೆ ಕಡೆ ಗಮನ ಹರಿಸಬೇಕು. ಓದು, ಬರಹ, ಲೆಕ್ಕಾಚಾರ ಪ್ರತಿ ಮಗುವಿಗೂ ಅರ್ಥೈಸಬೇಕು. ಮಗು ಕೇಂದ್ರಿತವಾದ ಕಲಿಕಾ ವಾತಾವರಣ ನಿರ್ಮಾಣವಾಗಬೇಕು ಎಂದು ಸಭೆಯಲ್ಲಿ ತಿಳಿಸಿದರು.

- Advertisement -

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮದ್ಯಾಹ್ನ ಉಪಹಾರ ಯೋಜನೆಯ ಶಿಕ್ಷಣಾಧಿಕಾರಿ ಶರೀಫ್‌ಸಾಹೇಬ ನದಾಫ್ ಮಾತನಾಡಿ, ಪ್ರತಿ ಮಗುವಿಗೆ ಗುಣಮಟ್ಟಾದ ಅಚ್ಚುಕಟ್ಟಾದ ಪೌಷ್ಠಿಕಾಂಶಯುಳ್ಳ ಆಹಾರ ನೀಡಬೇಕು. ಎಸ್.ಎ.ಟಿ.ಎಸ್ ನಲ್ಲಿ ಪ್ರತಿದಿನವು ಮಾಹಿತಿ ಸಲ್ಲಿಸಬೇಕು. ಕ್ಷೀರ ಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ಮಕ್ಕಳ ಆರೋಗ್ಯ ವೃದ್ಧಿಯಲ್ಲಿ ಸಹಕರಿಸಬೇಕು. ಅಡುಗೆ ಕೊಠಡಿ, ದಾಸ್ತಾನು ಹಾಗೂ ಪಾತ್ರೆ ಪರಿಕರಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ನೋಡಿಕೊಳ್ಳಬೇಕು. ಮಕ್ಕಳ ಕಲಿಕೆ ಉತ್ತಮ ಗುಣಮಟ್ಟದಾಗಲು ಗುಣಮಟ್ಟದ ಆಹಾರ ನೀಡುವಿಕೆ ಅತ್ಯಾವಶ್ಯಕವಾಗಿದೆ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೂಡಲಗಿ ಬಿಇಒ ಅಜಿತ ಮನ್ನಿಕೇರಿ, ಸಿ.ಆರ್.ಪಿಗಳು, ಬಿಇಒ, ಬಿಆರ್.ಸಿ ಕೇಂದ್ರಗಳ ಸಿಬ್ಬಂದಿ ಕಾರ್ಯವೈಕರಿ ಹಾಗೂ ಸರಕಾರಿ ಪ್ರಾಥಮಿಕ ಅತಿಥಿ ಶಿಕ್ಷಕರ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು ಅಚ್ಚುಕಟ್ಟಾಗಿ ಕಾರ್ಯನಿರ್ವಹಣೆ ಕುರಿತು ವಿವರಿಸಿದರು.

ಸಭೆಯಲ್ಲಿ ಬಿಇಒ ಕಛೇರಿ ಪಂತ್ರಾoಕಿತ ವ್ಯವಸ್ಥಾಪಕ ಪಿ.ಎಚ್ ಒಂಟಿ, ಶಿಕ್ಷಣ ಸಂಯೋಜಕ ಸತೀಶ ಬಿ.ಎಸ್, ಅಧಿಕ್ಷಕ ರವೀಂದ್ರ ತಳವಾರ, ಚೇತನ ಕುರಿಹುಲಿ, ಎಸ್.ವಿ ಸೋಮವ್ವಗೋಳ, ಜಿ.ಆರ್ ಪತ್ತಾರ, ಎಸ್.ವಾಯ್ ಮೂಡಲಗಿ, ಎಸ್.ಕೆ ಭಜಂತ್ರಿ ಕಛೇರಿ ಸಿಬ್ಬಂದಿ ಹಾಗೂ ತರಬೇತಿದಾರರು ಹಾಜರಿದ್ದರು.

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group