spot_img
spot_img

ಹಸಿರು ಟಾವೆಲ್‌ಗೆ ಉಸಿರು ತಂದರು

Must Read

ಅಂದು ಗಾಂಧೀಜಿ ಬ್ರೀಟಿಷ್ ಸಾಮ್ರಾಜ್ಯದ ವಿರುದ್ದ ಅಹಿಂಸೆ ಅಸಹಕಾರ ಸತ್ಯಾಗ್ರಹದ ಹೋರಾಟದ ಮೂಲಕ ಇಡೀ ಬ್ರಿಟೀಷರಿಗೆ ಕಂಟಕವಾಗಿ ಕೊನೆಗೆ ಬ್ರಿಟೀಷರು ದೇಶವನ್ನು ಬಿಟ್ಟು ಹೋದರು. ಸ್ವಾತಂತ್ರ್ಯೋತ್ತರ ತಮ್ಮ ಹಕ್ಕುಗಳಿಗೆ ದೀನದಲಿತರು ಕಾರ್ಮಿಕರು ಹೋರಾಟ ಮಾಡತೊಡಗಿದರು.

ಇದರಲ್ಲಿ ರೈತರನ್ನು ಒಡಗೂಡಿಸಿ ಅವರ ಬೆವರ ಹನಿಗೆ ಫಲ ನೀಡದವರು ಕರ್ನಾಟಕದ ರೈತನಾಯಕರು ಹಾಗೂ ಈ ದೇಶದ ಬೆನ್ನೆಲಬು ರೈತ ಎಂದು ತೋರಿಸಿದ್ದು ನಾಯಕರಾದ ನಂಜುಂಡಸ್ವಾಮಿ, ಬಾಬಾಗೌಡ ಪಾಟೀಲ, ಸುಂದರೇಶ, ಪಟ್ಟಣ್ಣಯ್ಯ, ರುದ್ರಪ್ಪನವರು ಹೀಗೆ ಅನೇಕರು ಒಡಗೂಡಿ ಆಳುವ ಸರಕಾರಕ್ಕೆ ಚಾಟಿ ನೀಡುವ ಮೂಲಕ ರೈತನ ರೆಟ್ಟೆಗೆ ಬಲಕೊಡಿಸುವಲ್ಲಿ ಹೋರಾಟ ನಿರತರಾಗಿದ್ದರು.

ಅಂತಹ ನಾಯಕರಲ್ಲಿ ನಮ್ಮ ಉತ್ತರಕರ್ನಾಟಕದ ಪ್ರಬಲ ರೈತ ಹೋರಾಟಗಾರ ಸಾಮಾನ್ಯ ರೈತ ಕುಟುಂಬದಿಂದ ಬಂದ ಪ್ರಬಲ ವಾಗ್ಮಿಗಳಾದ ಬಾಬಾಗೌಡ ಪಾಟೀಲರು ಇಂದು ಅವರು ನಮ್ಮನ್ನು ಅಗಲಿ ಒಂದು ವರ್ಷವಾಯಿತು ಆದರೆ ಅವರು ಬಿತ್ತಿದ ಬೀಜಗಳು ಹೆಮ್ಮರವಾಗಿ ರೈತಪರ ಕೂಗಿಗೆ ಶಕ್ತಿಯಾಗಿವೆ.

ರೈತ ಹಾಗೂ ಅವನ ಅವಲಂಬಿತನ ಕುಟುಂಬ ನೆಮ್ಮದಿಯಾಗಿ ಬದುಕಬೇಕೆಂದರೆ ಆತ ಬಿತ್ತಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ರೈತವಿರೋಧಿ ಕಾನೂನುಗಳಿಗೆ ಮನ್ನಣೆ ಸಿಗಬಾರದು.ಆತನು ಈ ದೇಶದಲ್ಲಿ ಗೌರವಯುತ ಜೀವನ ನಡಸೇಕು ಎಂದು ಬೀದಿಗಿಳಿದು ಚಳವಳಿ ಮಾಡಿದರು. ಜನ ಬುತ್ತಿಗಂಟು ಸಮೇತ ಬಾಬಾಗೌಡರ ಜೊತೆಯಾದರು.ರೈತನ ಕಷ್ಟಗಳಿಗೆ ಕೇಂದ್ರದಲ್ಲಿ ಮಂತ್ರಿಯಾದ ಸಂದರ್ಭದಲ್ಲಿ ಗ್ರಾಮಸಡಕ್ ಯೋಜನೆಯನ್ನು ಜಾರಿಗೆ ತಂದರು.ಮರಣ ಹೊಂದುವ ಮುನ್ನಾ ವರ್ಷಗಳಲ್ಲಂತೂ ರೈತಸಂಘದ ಹಿಂದಿನ ಹೋರಾಟಗಳನ್ನು ನೆನಪಿಸುವಂತಹ ಪ್ರತಿಭಟನೆ ಹಾಗೂ ಭಾಷಣಗಳನ್ನು ಮಾಡುವ ಮೂಲಕ ರೈತನ ಕೂಗಿಗೆ ಧ್ವನಿಯಾಗಿದ್ದರು.ಕೇಂದ್ರದಲ್ಲಿ ದಿವಗಂತ ಪ್ರಧಾನ ಮಂತ್ರಿ ವಾಜಪೇಯಿಯವರ ಸಂಪುಟದಲ್ಲಿ ಅಷ್ಟು ದೊಡ್ಡ ಹುದ್ದೆಯಲ್ಲಿದ್ದು ಬಂದಿದ್ದರೂ ಹಳ್ಳಿಯ ತಮ್ಮ ನಿತ್ಯ ಕಾಯಕ ಕೃಷಿಯಲ್ಲಿ ನಿರತರಾಗಿದ್ದರು.ಕೃಷಿಯಲ್ಲಿ ಪ್ರಯೋಗಗಳನ್ನು ಮಾಡುತ್ತಾ ಹೋರಾಟಗಳನ್ನು ಮುಂದುವರೆಸಿದ್ದರು.

ನಮ್ಮೂರಿನ ಹೆಮ್ಮೆಯ ಪುತ್ರ:

ಇಂದು ನಮ್ಮೂರು ಚಿಕ್ಕಬಾಗೇವಾಡಿಯಲ್ಲಿ ಸೂತಕದ ದಿನ. ಇಡೀ ಗ್ರಾಮ ಹೆಮ್ಮೆಯ ಪುತ್ರ ಬಾಬಾಗೌಡರನ್ನು ಕಳದುಕೊಂಡ ದಿನ.ಅವರು ಈ ಗ್ರಾಮದ ಪ್ರತಿ ಮನೆಯಲ್ಲೂ ಆರಾಧಿಸುವ ದೇವರು.ನಮ್ಮೂರ ಹೆಸರನ್ನು ದೆಹಲಿಯ ಸಂಸತ್ತಿನಲ್ಲಿ ಮೊಳಗಿಸಿದವರು.ಈ ದಿನ ನಮ್ಮೂರಿಗೆ ಅನೇಕ ರೈತನಾಯಕರು ಬಂದು ಅವರ ಪುತ್ಥಳಿಗೆ ನಮನ ಸಲ್ಲಿಸಿ ಹೋರಾಟದ ಹಾದಿಯನ್ನು ನೆನೆಯುತ್ತಾರೆ.ಈ ಧೀಮಂತನ ಆದರ್ಶಗಳನ್ನು ಅಳವಡಿಸಿಕೊಂಡ ಅನೇಕರ ಕಣ್ಣಂಚಲಿ ನೆನಿಕೆಯ ಹನಿ ಕಾಣುವದು.


ವಿನೋದ ಪಾಟೀಲ, ಚಿಕ್ಕಬಾಗೇವಾಡಿ

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!