spot_img
spot_img

ಬದನೆಕಾಯಿ ನೆನೆಸಿದ ನೀರು ಕುಡಿದ್ರೆ, ದೇಹದ ಕೊಬ್ಬು ಕರಗುವುದು..!!

Must Read

- Advertisement -

ಇಂದಿನ ದಿನಗಳಲ್ಲಿ ದೇಹದಲ್ಲಿ ಕೊಬ್ಬು ಆವರಿಸಿ ಕೊಂಡಿರುವ ಜನರು ಹೆಚ್ಚಾಗುತ್ತಲೇ ಇದ್ದಾರೆ. ಇದನ್ನು ಕರಗಿಸಲು ನೈಸರ್ಗಿಕವಾದ ವಿಧಾನ ಅನುಸರಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಬದನೆಕಾಯಿಯನ್ನು ಹೆಚ್ಚಿನವರು ಅದರಲ್ಲಿ ಇರುವಂತಹ ನಂಜಿನ ಅಂಶದಿಂದಾಗಿ ಇಷ್ಟ ಪಡುವವರು ಇದ್ದಾರೆ. ಆದರೆ ಬದನೆಕಾಯಿಯು ಹಲವಾರು ಪೋಷಕಾಂಶಗಳನ್ನು ಹೊಂದಿದ್ದು, ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದು ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳ ಜತೆಜತೆಗೆ ಆಂಟಿ ಆಕ್ಸಿಡೆಂಟ್ ಮತ್ತು ನಾರಿನಾಂಶವನ್ನು ಹೊಂದಿದ್ದು ತೂಕ ಇಳಿಕೆಗೆ ತುಂಬಾ ಸಹಕಾರಿ ಆಗಿರುವುದು. ಬದನೆಯು ಕೊಬ್ಬು ಕರಗಿಸುವಂತಹ ಕೆಲವು ಗುಣ ಹೊಂದಿದೆ. ಇದು ದೇಹಕ್ಕೆ ಪೋಷಕಾಂಶ ವನ್ನು ನೀಡುವ ಜತೆ ಜತೆಗೆ ಕೊಬ್ಬನ್ನು ಕೂಡ ಕರಗಿಸುವುದು. ಹೀಗಾಗಿ ಆರೋಗ್ಯ ಕಾರಿ ಆಗಿ ಕೊಬ್ಬು ಕರಗಿಸಲು ಇದು ತುಂಬಾ ನೆರವಾಗಲಿದೆ.

ತೂಕ ಇಳಿಸಲು ಬದನೆ ಹೇಗೆ ನೆರವಾಗಲಿದೆ ?

- Advertisement -

ಬದನೆಯಲ್ಲಿ ಉನ್ನತ ಮಟ್ಟದ ಪೋಷಕಾಂಶಗಳು ಇವೆ ಮತ್ತು ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ. ಇದು ಮೂತ್ರವರ್ಧಕವಾಗಿ ಕೆಲಸ ಮಾಡು ವುದು, ದೇಹದಲ್ಲಿ ದ್ರವಾಂಶವು ಹೆಚ್ಚಾಗದಂತೆ ತಡೆಯುವುದು ಮತ್ತು ನಿಮಗೆ ತೃಪ್ತಿಯನ್ನು ಉಂಟು ಮಾಡುವುದು.

ಕೊಬ್ಬು ಕರಗಿಸಬೇಕು ಎಂದಾಗಿದ್ದರೆ ಆಗ ನೀವು ಜೀವನ ಶೈಲಿಯಲ್ಲಿ ಕೂಡ ಕೆಲವು ಬದಲಾವಣೆ ಮಾಡಿ ಕೊಳ್ಳಬೇಕು. ಬದನೆಕಾಯಿ ನೀರು ಆಹಾರ ಕ್ರಮದಲ್ಲಿ ಸಮತೋಲನ ಕಾಪಾಡಲು ನೆರವಾಗುವುದು ಮತ್ತು ನೀವು ದಿನನಿತ್ಯವೂ ಅರ್ಧ ಗಂಟೆ ಕಾಲ ವ್ಯಾಯಾಮ ಮಾಡಬೇಕು.

ಬದನೆ ನೀರಿನಲ್ಲಿ ಉನ್ನತ ಮಟ್ಟದ ನಿರ್ವಿಷಕಾರಿ ಹಾಗೂ ಶುದ್ಧೀಕರಿಸುವಂತಹ ಗುಣವು ಇದೆ. ಇದು ಕೊಬ್ಬಿನಿಂದ ಮುಕ್ತ ಮತ್ತು ಕ್ಯಾಲರಿ ತುಂಬಾ ಕಡಿಮೆ ಹೊಂದಿದೆ. ಇದು ದೇಹಕ್ಕೆ ಒಳ್ಳೆಯ ಪೋಷಕಾಂಶಗಳನ್ನು ನೀಡುವುದು ಮತ್ತು ಆಹಾರದ ಸಮತೋಲನ ಕಾಪಾಡುವುದು.

- Advertisement -

ಬದನೆ ನೀಡುವಂತಹ ಆರೋಗ್ಯ ಲಾಭಗಳು ಯಾವುದು ?

♦ ಕೊಲೆಸ್ಟ್ರಾಲ್ ನಿಯಂತ್ರಿಸಲು ಇದು ನೆರವಾಗುವುದು. ಬದನೆಕಾಯಿ ಜತೆಗೆ ನೀವು ತಿನ್ನುವಂತಹ ಆಹಾರದಲ್ಲಿ ಇರುವಂತಹ ಕೊಬ್ಬ ನ್ನು ಅದು ಹೀರಿಕೊಳ್ಳುವುದು ಮತ್ತು ಇದನ್ನು ಕರುಳಿಗೆ ಕಳುಹಿಸುವುದು.

♦ ದೇಹದಲ್ಲಿ ವಿಷವನ್ನು ತೆಗೆದುಹಾಕುವುದು ಮತ್ತು ಕರುಳಿನ ಕ್ರಿಯೆ ಸರಾಗವಾಗಿಸುವುದು. ಇದರಿಂದ ಮಲಬದ್ಧತೆ ವಿರುದ್ಧ ಹೋರಾಡ ಬಹುದು.

♦ ಇದರಲ್ಲಿ ವಿಟಮಿನ್ ಇ ಮತ್ತು ಆಂಥೋಸಯಾನಿನ್ ಗುಣಗಳು ಇರುವ ಕಾರಣದಿಂಧಾಗಿ ಇದು ಆಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುವುದು. ಈ ಆಂಟಿ ಆಕ್ಸಿಡೆಂಟ್ ಗಳು ವಿವಿಧ ರೀತಿಯ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ ನೀಡುವುದು.

♦ ಬದನೆಯಲ್ಲಿ ಉತ್ತಮ ಪ್ರಮಾಣದ ಪೊಟಾಶಿಯಂ ಮತ್ತು ಸ್ವಲ್ಪ ಸೋಡಿಯಂ ಇದ್ದು. ಇದು ನರಗಳು ಮತ್ತು ಅಪಧಮನಿ ವ್ಯವಸ್ಥೆಗೆ ನೆರವಾಗುವುದು.

♦ ಬದನೆಯಲ್ಲಿ ಇರುವಂತಹ ನಾರಿನಾಂಶವು ದೇಹವನ್ನು ಶುದ್ಧೀಕರಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡುವುದು.

♦ ಮೂಳೆಗಳಿಗೆ ನೆರವಾಗುವಂತಹ ಫಾಲಿಕ್ ಆಮ್ಲವು ಇದರಲ್ಲಿದೆ.

♦ ಯಕೃತ್ ಸಮಸ್ಯೆಯಿಂದ ಬಳಲುವಂತಹ ಜನರಿಗೆ ಬದನೆ ತುಂಬಾ ಪರಿಣಾಮಕಾರಿ. ಇದು ಯಕೃತ್ ಪಿತ್ತರಸ ಉತ್ಪತ್ತಿಯನ್ನು ಉತ್ತೇಜಿಸು ವುದು.

♦ ಇದರಲ್ಲಿ ಮೆಗ್ನಿಶಿಯಂ ಮತ್ತು ಕಬ್ಬಿನಾಂಶವು ಉತ್ತಮವಾಗಿದೆ. ಇದು ರಕ್ತಹೀನತೆ ತಡೆಯು ವುದು ಮತ್ತು ರಕ್ಷಣಾತ್ಮಕವಾಗಿ ಕೆಲಸ ಮಾಡು ವುದು.

ತೂಕ ಇಳಿಸಲು ಬದನೆಕಾಯಿ ನೀರು ಬಳಕೆ ಹೇಗೆ ? ಇದರ ಸೇವನೆ ಹೇಗೆ ?

♦ ಇದನ್ನು 7 ದಿನಗಳ ಕಾಲ ಕುಡಿಯಬೇಕು. ಹೀಗೆ ನೀವು ತಿಂಗಳಲ್ಲಿ 1 ವಾರ ಮಾಡಬೇಕು. ಯಾಕೆಂದರೆ ಇದರಿಂದ ಹೊಟ್ಟೆಯ ಕೊಬ್ಬು ಕರಗಿಸಲು ನೆರವಾಗುವುದು ಮತ್ತು ದೇಹವು ಶುದ್ಧೀಕರಿಸಲ್ಪಡುವುದು.

♦ ಈ ಒಂದು ವಾರದಲ್ಲಿ ನೀವು ಸಲಾಡ್ ಮತ್ತು ಜ್ಯೂಸ್ ನ್ನು ಆಹಾರವಾಗಿ ಸೇವಿಸಬೇಕು. ಸಂಸ್ಕರಿತ ಕೊಬ್ಬು ಮತ್ತು ರಿಫೈನ್ಡ್ ಹಿಟ್ಟನ್ನು ಬಳಸಬೇಡಿ.

♦ ½ ಲೀಟರ್ ನಷ್ಟು ಬದನೆಕಾಯಿ ನೀರು ಕುಡಿಯಿರಿ. 2 ಸಲ ಊಟ ಮಾಡುವ ಮೊದಲು 2 ಲೋಟ ಕುಡಿಯಿರಿ.

♦ ಒಂದು ವಾರದಲ್ಲಿ 2 ಕೆ.ಜಿ. ಕಡಿಮೆ ಮಾಡ ಬಹುದು. ಪ್ರತಿಯೊಬ್ಬ ವ್ಯಕ್ತಿಯ ಚಯಾಪಚಯ ಕ್ರಿಯೆಯು ಭಿನ್ನವಾಗಿ ಇರುವ ಕಾರಣದಿಂದಾಗಿ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು.

♦ ಬದನೆಕಾಯಿ ನೀರಿನ ಜತೆಗೆ ನೀವು ಬದನೆ ಯನ್ನು ಸುಟ್ಟು, ಬೇಯಿಸಿ ತಿನ್ನಬಹುದು. ಆದರೆ ಇದನ್ನು ಹಸಿಯಾಗಿ ತಿನ್ನಲು ಹೋಗಬೇಡಿ. ಹಸಿ ಬದನೆಕಾಯಿಯು ಸೋಲನೈನ್ ಎನ್ನುವ ಅಲ್ಕಲೈಯ್ಡ್ ಅಂಶವನ್ನು ಹೊಂದಿರುವ ಕಾರಣ ದಿಂದಾಗಿ ಇದು ವಿಷಕಾರಿ ಆಗಿರುವುದು. ಇದರಿಂದ ವಾಂತಿ ಮತ್ತು ಬೇಧಿ ಕಾಣಿಸಬಹುದು.

ಬದನೆಕಾಯಿ ನೀರು ತಯಾರಿಸವುದು ಹೇಗೆ ?

♦ ಒಂದು ಮಧ್ಯಮ ಗಾತ್ರದ ಬದನೆಕಾಯಿ ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಸರಿಯಾಗಿ ತೊಳೆಯಿರಿ ಮತ್ತು ವೃತ್ತಾಕಾರದಲ್ಲಿ ತುಂಡು ಮಾಡಿಕೊಳ್ಳಿ.

♦ ಇದರ ಬಳಿಕ 1 ಜಗ್ ತೆಗೆದುಕೊಂಡು ಅದಕ್ಕೆ ½ ಲೀಟರ್ ನೀರು ಹಾಕಿ. ಇದಕ್ಕೆ ಬದನೆಕಾಯಿ ತುಂಡುಗಳನ್ನು ಹಾಕಿ. ಇದು ರಾತ್ರಿಯಿಡಿ ಹಾಗೆ ಇರಲಿ.

♦ ಸ್ವಲ್ಪ ಲಿಂಬೆರಸ ಹಾಕಿಕೊಂಡು ಇದನ್ನು ನೀವು ಕುಡಿಯಿರಿ. ಇದರಿಂದಾಗಿ ರುಚಿ ಸ್ವಲ್ಪ ಒಳ್ಳೆಯ ದಾಗುವುದು ಮತ್ತು ಆಂಟಿ ಆಕ್ಸಿಡೆಂಟ್ ಕೂಡ ಸಿಗುವುದು. ಇದನ್ನು ನೀವು ಎರಡು ಸಲ ಊಟ ಮಾಡುವ ಮೊದಲು 2 ಲೋಟ ಕುಡಿಯಿರಿ. 1 ವಾರ ಕಾಲ ಬಿಡದೆ ಹೀಗೆ ಮಾಡಿ. ಪ್ರತೀ ತಿಂಗಳು ಒಂದು ವಾರ ಹೀಗೆ ಮಾಡಿ. ಇದರಿಂದ ಉತ್ತಮ ಫಲಿತಾಂಶ ಸಿಗಲಿ.( ಇಲ್ಲಿನ ಮಾಹಿತಿ ಲೇಖಕರ ಅಭಿಪ್ರಾಯವಾಗಿದ್ದು ಓದುಗರು ತಮ್ಮ ವಿವೇಚನೆಗೆ ತಕ್ಕಂತೆ ಬಳಸಬಹುದು)

ಪವಿತ್ರ ಬಾಗಲಕೋಟೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group