ಮಧುರ ಸೋದರ ಬಂಧವು
ರಕ್ತದಿಂದಲೆ ಬಂಧವಾದರೆ
ಸ್ನೇಹಕೆಲ್ಲಿದೆ ಅರ್ಥವು
ಸಿಕ್ತವಾಗಲು ಸೋದರತೆಯೇ
ಮುಖ್ಯವಾದರೆ ತೀರ್ಥವು
ಭಕ್ತಿಯಿಂದಲಿ ಕಾಯ್ದುಕೊಂಡರೆ
ಸೋದರತೆಯಾ ನಿತ್ಯವು
ಮುಕ್ತವಾಗಿಸಿ ತ್ವೇಷವನ್ನೇ
ಉಕ್ತ ಬಂಧುರ ಸತ್ಯವು
ಹುಟ್ಟಿನಿಂದಲೆ ಮೆಟ್ಟಿ ನಿಲ್ಲುವ
ಎರೆದು ಪ್ರೀತಿಯ ಬಂಧವ
ಗಟ್ಟಿಯಾಗಿಸಿ ನೆಟ್ಟ ಮನದೊಳ್
ಅಣ್ಣ ತಮ್ಮರ ಬಂಧುರ
ತ್ಯಾಗವಿದ್ದರೆ ಸೋದರತೆಗೇ
ಅರ್ಥ ಬಪ್ಪುದು ತಪ್ಪದೆ
ಭೋಗವಿದ್ದರೆ ಅರ್ಥಹೀನವು
ಅಳಸಿ ಹೂರಣ ತೀಡದೆ
ಜನ್ಮ ಜನ್ಮದ ಪುಣ್ಯವಾಗಿದೆ
ಅಣ್ಣ ತಮ್ಮರ ಜೀವನ
ಹಮ್ಮಿನಿಂದಲೆ ಮೆಚ್ಚಿ ನೆಚ್ಚಿದೆ
ಅಕ್ಕ ತಂಗಿಯ ಭಾವನ
ಸೋದರೆಲ್ಲರು ಕೂಡಿ ಬಾಳಲು
ನವ್ಯವಾಗಿಪ ತಾಣವು
ತೀಡಿ ತಿದ್ದಿದ ನತ್ತಿನಂದದಿ
ಮಧುರ ಸೋದರ ಬಂಧವು
ಮಾಲತೇಶ ನಾ ಚಳಗೇರಿ
ಬ್ಯಾಡಗಿ