Homeಸುದ್ದಿಗಳುಸಹೋದರರ ರಾಜಕೀಯ ಕಚ್ಚಾಟ : ಲಗಾಮಿಲ್ಲದಂತಾದ ಅಧಿಕಾರಿ ವರ್ಗ

ಸಹೋದರರ ರಾಜಕೀಯ ಕಚ್ಚಾಟ : ಲಗಾಮಿಲ್ಲದಂತಾದ ಅಧಿಕಾರಿ ವರ್ಗ

ಬೀದರ – ಗಂಡ ಹೆಂಡಿರ ಜಗಳದಲ್ಲಿ ಕೂಸ ಬಡವಾಯಿತು ಎಂಬ ಗಾದೆ ಮಾತಿದೆ ಅದೇ ರೀತಿ ಬೀದರನಲ್ಲಿ ಅಣ್ಣ ತಮ್ಮರ ಜಗಳದಲ್ಲಿ ಹುಮನಾಬಾದ ಜನರು ಸಂಕಟ ಅನುಭವಿಸುವಂತಾಗಿದೆ.

ಹೌದು, ಮೊನ್ನೆ ರಾಮನವಮಿ ಸಂದರ್ಭದಲ್ಲಿ ಹುಮನಾಬಾದ ಪಟ್ಟಣದಲ್ಲಿ ನಡೆದ ಸಹೋದರರ ನಡುವಿನ ಗಲಾಟೆ ಇಡೀ ರಾಜ್ಯದಲ್ಲಿ ಮುಜುಗರ ಪಡುವಂತಾಗಿದ್ದು ಪಾಟೀಲ ಕುಟುಂಬದ ಒಳ ಜಗಳಗಳಿಗೆ ಹುಮನಾಬಾದ ಜನರು ಬಲಿಯಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಹಂದಿಗಳ ಮಾರಣ ಹೋಮ !

ಮೂರುನಾಲ್ಕು ವರ್ಷಗಳ ಹಿಂದೆ ಇಡಿ ರಾಜ್ಯಕ್ಕೆ ಮಾದರಿ ಕುಟಂಬವಾಗಿದ್ದು ಹುಮನಾಬಾದ ಪಾಟೀಲ ಪರಿವಾರದ ಸದಸ್ಯರ ನಡುವೆ ಅಧಿಕಾರದ ಆಸೆ ತೋರಿಸಿ ಕಾಂಗ್ರೆಸ್ ಭದ್ರ ಕೋಟೆ ಯಾದ ಹುಮಾನಾಬಾದ ಕ್ಷೇತ್ರ ವನ್ನು ತನ್ನ ವಶ ಪಡಿಸಿ ಕೊಳ್ಳುವುದು ದಕ್ಕೆ ಭಾರತೀಯ ಜನತಾ ಪಕ್ಷದ ತನ್ನ ಕುಟಿಲ ನೀತಿ ಉಪಯೋಗಿಸಿದೆಯೆಂಬುದಾಗಿ ಜನ ಹೇಳುತ್ತಿದ್ದಾರೆ.

ಪಾಟೀಲ ಪರಿವಾರದ ಸಹೋದರ ಸಂಬಂಧಿಯಾದ ಸಿದ್ದಲಿಂಗಪ್ಪ ನಾಗಭೂಷಣ ಪಾಟೀಲ ಅವರನ್ನು ರಾಜಶೇಖರ ಪಾಟೀಲ ಅವರ ವಿರುದ್ಧ ಎತ್ತಿಕಟ್ಟಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ರಾಮ ಲಕ್ಷ್ಮಣರಂತಿದ್ದ ಪಾಟೀಲ ಸಹೋದರರನ್ನು ರಾಜಕೀಯಕ್ಕೆ ಒಬ್ಬರಿಗೊಬ್ಬರು ಕಿತ್ತಾಡುವಂತೆ ಮಾಡಿದ್ದರಿಂದ ಇಲ್ಲಿಯವರೆಗೆ ಪಾಟೀಲ್ ಕುಟುಂಬದ ಹೆಸರು ಕೇಳಿದರೆ ಬಾಲ ಮುದುರಿಕೊಂಡು ತನ್ನ ಕರ್ತವ್ಯವನ್ನು ಚಾಚೂ ತಪ್ಪದೆ ನಿರ್ವಹಿಸುತ್ತಿದ್ದ ಅಧಿಕಾರಿಗಳು ಈಗ ಲಗಾಮು ಇಲ್ಲದ ಕುದುರೆಗಳಂತಾಗಿದ್ದಾರೆ ಎಂದರೆ ತಪ್ಪಾಗಲಾರದು.

ಅದಕ್ಕೆ ಉದಾಹರೆಣೆ ಎಂಬಂತೆ ಪಟ್ಟಣದ ಹೊರವಲಯದಲ್ಲಿನ ಕೆಮಿಕಲ್ ಕಾರ್ಖಾನೆಯ ಆಡಳಿತ ಮಂಡಳಿಯವರು ತಮ್ಮ ಕಾರ್ಖಾನೆಗಳಲ್ಲಿನ ವಿಷಯುಕ್ತ ತ್ಯಾಜ್ಯ ನಿರ್ವಹಣೆ ಮಾಡದೆ ರಸ್ತೆಯಲ್ಲಿ ಬಿಸಾಡಿದ್ದರಿಂದ ವಿಷಯುಕ್ತ ತ್ಯಾಜ್ಯಗಳನ್ನು ಸೇವಿಸಿದ ಮೂಕ ಪ್ರಾಣಿಗಳಾದ ಹಂದಿಗಳ ಮಾರಣ ಹೋಮವಾಗಿರುವದೇ ಸಾಕ್ಷಿ ಯಾಗಿದೆ. ಸದ್ಯ ಕುಟುಂಬದ ರಾಜಕೀಯ ಕಲಹಕ್ಕೆ ಮೂಕ ಜಾನುವಾರು ಬಲಿಯಾಗಿದೆ ಎಂದು ಹೇಳಬಹುದು.

ಆದರೆ ಈ ಕೌಟುಂಬಿಕ ಕಲಹ ಇದೇ ರೀತಿ ಮುಂದುವರೆದರೆ ಇನ್ನೆಷ್ಟು ಜನರು ಬಲಿಯಾಗುವರೋ ಏನೋ ಎಂದು ಒಬ್ಬರು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡರು. ಪಾಟೀಲ ಸಹೋದರರು ತಮ್ಮ ದಯಾದಿಗಳ ಕಲಹ ಬದಿಗೆ ಇಟ್ಟು ಇಂದು ಕಾರ್ಖಾನೆಗಳ ಆಡಳಿತಾಧಿಕಾರಿಗಳ ನಿರ್ಲಕ್ಷ್ಯ ದಿಂದ ಮೂಕ ಜಾನುವಾರುಗಳ ಮಾರಣ ಹೋಮಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿ ಮುಂಬರುವ ದಿನಗಳಲ್ಲಿ ತಾಲೂಕಿನ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟು ಕೊಂಡು ಮುಂದೆ ಹುಮನಾಬಾದ ನಲ್ಲಿ ಎಂದಿನಂತೆ ಶಾಂತಿ ಕದಡದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೊ ಅಥವಾ ವಿರೋಧಿಗಳು ಹಾಕಿದ ಅಧಿಕಾರದ ಮಾಯಾಜಾಲಕ್ಕೆ ಸಿಲುಕಿ ಹಮನಾಬಾದ ಜನತೆಯನ್ನು ಬಲಿ ಕೊಡುವರೊ ಕಾದು ನೋಡಬೇಕು


ವರದಿ: ನಂದಕುಮಾರ ಕರಂಜೆ,ಬೀದರ

RELATED ARTICLES

Most Popular

error: Content is protected !!
Join WhatsApp Group