ಬೀದರ – ಬೀದರ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ದಿಂದ ಲೇಔಟ್ ಸೈಟ್ ಗಳನ್ನು ರಿಲೀಸ್ ಮಾಡಲು ರೂ. 50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬುಡಾ ಆಯುಕ್ತ ಶ್ರೀಕಾಂತ್ ಚಿಮ್ಮಕೊಡೆ ಹಾಗೂ ಬುಡಾ ಸದಸ್ಯ ಚಂದ್ರಕಾಂತ್ ರೆಡ್ಡಿ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.
ಬೇಡಿಕೆಯಿಟ್ಟ ರೂ. 50 ಲಕ್ಷದ ಪೈಕಿ ರೂ. 10 ಲಕ್ಷ ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತರು ದಾಳಿ ಮಾಡಿದ್ದು ಬುಡಾ ಆಯುಕ್ತ ಶ್ರೀಕಾಂತ ಚಿಮಕೊಡೆ ಮತ್ತು ಯೋಜನಾ ಸದಸ್ಯರಾದ ಚಂದ್ರಕಾಂತ ರೆಡ್ಡಿ ಸೂಚನೆ ಮೇರೆಗೆ ಲಂಚದ ಹಣ ತೆಗೆದುಕೊಳ್ಳುತ್ತಿದ್ದ ಆಪ್ತ ಸಿದ್ದು ಹೂಗಾರ ರೆಡ್ ಹ್ಯಾಂಡಾಗಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಬೀದರ್ ನ ಪ್ರತಾಪ್ ನಗರದ ಬಳಿ ದಾಳಿ ಮಾಡಿ ರೂ. 10 ಲಕ್ಷ ಹಣ ಜಪ್ತಿ ಮಾಡಿಕೊಂಡು ಲೋಕಾಯುಕ್ತ ಪೊಲೀಸರು
ಬೀದರ್ ನಗರದ ಸ್ವಪ್ನ ಹೋಟಲ್ ಬಳಿ ಆಯುಕ್ತ ಮತ್ತು ಯೋಜನಾ ಸದಸ್ಯರನ್ನು ಬಂಧಿಸಿ ಲೋಕಾಯುಕ್ತ ಕಚೇರಿಗೆ ಕರೆದುಕೊಂಡು ಬಂದರು.
ಸತೀಶ್ ನೌಬಾದೆ ಎಂಬುವವರಿಂದ ಲೋಕಾಯುಕ್ತಕ್ಕೆ ದೂರು ಬಂದಿದ್ದ ಹಿನ್ನೆಲೆ ಈ ದಾಳಿ ನಡೆದಿತ್ತು.
ಈ ಬಗ್ಗೆ ವರದಿಗಾರರಿಗೆ ಮಾಹಿತಿ ನೀಡಿದ ಲೋಕಾಯುಕ್ತ ಎಸ್ ಪಿ ಉಮೇಶ ಬಿ ಕೆ ರವರು, ನನ್ನ ಹಾಗೂ ಲೋಕಾಯುಕ್ತ ಡಿಎಸ್ ಪಿ ಹಣಮಂತರಾಯ ರವರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಸಂತೋಷ ರಾಠೋಡ, ಬಾಬಾಸಾಹೇಬ ಪಾಟೀಲ, ಅರ್ಜುನಪ್ಪ ಹಾಗೂ ಸಿಬ್ಬಂದಿಗಳಿಂದ ಯಶಸ್ವಿ ಕಾರ್ಯಾಚರಣೆ ನಡೆಸಲಾಯಿತು ಎಂದರು.
ವರದಿ : ನಂದಕುಮಾರ ಕರಂಜೆ, ಬೀದರ