spot_img
spot_img

ಬುದ್ದನ ಕವಿತೆಗಳು ಕವನ ಸಂಕಲನ;‌ ಮಾಸ್ತಿ ವೆಂಕಟೇಶ ಅಯ್ಯಂಗಾರ್

Must Read

- Advertisement -

ಬುದ್ಧ ಜಗವ ಗೆದ್ದ
ಜಗವೆಲ್ಲ ಮಲಗಿರಲು ಅವನೊಬ್ಬ
ಎದ್ದ ಗೌತಮ ಬುದ್ಧ

(ಮಾಸ್ತಿ ವೆಂಕಟೇಶ ಅಯ್ಯಂಗಾರ್)

ಪ್ರಸ್ತುತ ಈ ಕವಿತೆಯ ಸಾಲುಗಳು ಇಂದಿನ ಪ್ರಬಂಧ ರಚನೆಗೆ ಸೂಕ್ತ ಎನಿಸುತ್ತದೆ. ಕಾರಣ ಗೌತಮ ಬುದ್ಧ ಈ ಜಗತ್ತನ್ನು ಬೆಳಗಲು ಉದಯಿಸಿದ ನವಸೂರ್ಯನಂತೆ ಬೆಳಗಿದವನು.‌ ತನ್ನ ಐಶಾರಾಮಿ ಜೀವನ ಶೈಲಿಯನ್ನು ಮಾನವನ ಜೀವನದ ಪ್ರಮುಖ ನಾಲ್ಕು ಘಟ್ಟಗಳನ್ನು (ರೋಗಿ,ವೃದ್ದ,ಶವ, ಸನ್ಯಾಸಿ) ನೋಡಿ ಐಹಿಕ ಸುಖ ಕೇವಲ ಕ್ಷಣಿಕ ಎಂದು ತಿಳಿದು ಜಗತ್ತನ್ನು ಬೆಳಗಲು ಬಂದ. ಅವನು ಜಗತ್ತನ್ನು ನೋಡುವ ದೃಷ್ಟಿ ಬೇರೆಯಿತ್ತು. ಒಮ್ಮೆ ಅವಲೋಕಿಸೋಣ.

ಭಾರತ ಸಾಧುಗಳ ಸಂತರ ಪುಣ್ಯ ಕ್ಷೇತ್ರ. ಸಾವಿರ ವರ್ಷಗಳ ಇತಿಹಾಸದಲ್ಲಿ ಒಂದೊಂದು ಕಾಲವೂ ಸುವರ್ಣ ಯುಗ.‌ಅಂತಹ ಒಂದು ಸುವರ್ಣ ಯುಗದಲ್ಲಿ ಹುಟ್ಟಿದ ಒಂದು ಅನರ್ಘ್ಯ ರತ್ನ ಗೌತಮ ಬುದ್ಧ.

- Advertisement -

ಗೌತಮ ಬುದ್ಧನೆಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಬೌದ್ಧ ಧರ್ಮದ ಸಂಸ್ಥಾಪಕ, ದಾರ್ಶನಿಕ. ಈತ ಜನಿಸುವ ಮೊದಲೇ ಜ್ಯೋತಿಷ್ಯರು
ಶುದ್ಧೋದನನಿಗೆ ಜನಿಸುವ ಮಗುವು ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿ, ಮಹಾಪುರುಷನಾಗಿ ಅಜರಾಮರನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದರಂತೆ.

ಇದನ್ನು ತಿಳಿದುಕೊಂಡ ಶುದ್ದೋಧನನು ತನ್ನ ಮಗನು ಚಕ್ರವರ್ತಿ ಆಗಬೇಕೆಂದು ಬಯಸುತ್ತಾನೆ‌. ಯಾವ ದುಃಖ ನೋವುಗಳು ಈತನನ್ನು ಭಾಧಿಸದಿರಲಿ ಹಾಗೂ ಜಗತ್ತಿನ ಎಲ್ಲಾ ಕಷ್ಟ ಕಾರ್ಪಣ್ಯಗಳಿಂದ ಈತ ದೂರ ಇರಲಿ ಎಂದು ಪ್ರಯತ್ನಿಸುತ್ತಾನೆ ಹಾಗೂ ತನ್ನ ಮಗ ಇದಾವುದರ ವಿಚಾರಕ್ಕೆ ಸಿಲುಕಬಾರದೆಂದು ಯಾವುದೇ ಧಾರ್ಮಿಕ ಭೋಧನೆಯನ್ನು ಆತನಿಗೆ ಮಾಡುವುದಿಲ್ಲ.

ಅಲ್ಲದೇ ಆತ ಯಾವುದೇ ಹೊರಗಿನ ಪ್ರಪಂಚಕ್ಕೆ ಮೋಹಿತನಾಗಬಾರದೆಂಬ ಭಯದಿಂದ ಶುದ್ಧೋದನನು ತನ್ನ ಮಗನಿಗಾಗಿ ಎಲ್ಲಾ ರೀತಿಯ ಸಕಲ ಸೌಕರ್ಯಗಳನ್ನು ಒಳಗೊಂಡ ವೈಭವದಿಂದ ಕೂಡಿದ ಮೂರು ಅರಮನೆಗಳನ್ನು ಕಟ್ಟಿಸುತ್ತಾನೆ.

- Advertisement -

ಹೀಗಾಗಿ ಗೌತಮ ಬುದ್ಧನು ಹೊರಗಿನ ಜಗತ್ತಿನ ಅರಿವಿಲ್ಲದೆಯೇ ಅರಮನೆಯಲ್ಲಿ ಬಂಧನಕ್ಕೆ ಒಳಗಾದಂತೆ ಬದುಕುತ್ತಾನ ಆದರೆ ಬುದ್ಧನು ಯಾವುದೇ ಧಾರ್ಮಿಕವಾದ ಭೋಧನೆಗಳನ್ನು ಪಡೆದುಕೊಳ್ಳದಿದ್ದರೂ ಕೂಡ ಒಂದು ದಿನ ಜಗತ್ತೇ ಮೆಚ್ಚುವಂತಹ ಮಹಾಪುರುಷನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುತ್ತಾನೆ.

ಅತ್ಯಂತ ಸರಳ ಜೀವನವನ್ನು ನಡೆಸಿದ ಈತ ನೇಪಾಳದ ಶಾಕ್ಯ ಕುಲದ ರಾಜ ಶುದ್ಧೋದನ ಹಾಗೂ ರಾಣಿ ಮಾಯಾದೇವಿಯ ಪುತ್ರನಾದರೂ ಕೂಡ ಅಲ್ಲಿಯ ಜನರಿಗೆ ಈ ವಿಚಾರದ ಬಗೆಗೆ ಮಾಹಿತಿ ಇರುವುದಿಲ್ಲ. ನೇಪಾಳದ ಲುಂಬಿನಿ ಗ್ರಾಮದಲ್ಲಿ ಜನಿಸಿದ ಗೌತಮನು ಯಶೋಧರೆಯನ್ನು ಮದುವೆಯಾಗಿ ರಾಹುಲ ಎಂಬ ಪುತ್ರನ ತಂದೆಯಾಗುತ್ತಾನೆ.

ಆಧ್ಯಾತ್ಮದತ್ತ ಒಲವು

ತಾನು ಒಬ್ಬ ಮಹಾ ಯೋಗಿಯಾಗಬೇಕು, ಜ್ಞಾನಿಯಾಗಬೇಕೆಂಬ ತುಡಿತ ಇದ್ದುದರಿಂದ ಗೌತಮ ಬುದ್ದನು ಈ ವೈಭೋಗದ ಜೀವನದಿಂದ ಮುಕ್ತಿ‌ ಪಡೆಯಲು ಹಾತೊರೆಯುತ್ತಾನೆ.

ಅಲ್ಲದೇ ತಾನಿರುವ ಅರಮನೆಯ ಹೊರಗೆ ಏನಿದೆ ಎಂಬ ಕೌತುಕ‌ವೂ ತನ್ನಲ್ಲಿ ಹುಟ್ಟಿಕೊಳ್ಳಲಾರಂಭಿಸುತ್ತದೆ. ಹೀಗಿರುವಾಗ ಒಂದು ದಿನ ತನ್ನ 29 ನೇ ವಯಸ್ಸಿನಲ್ಲಿ ವಾಯುವಿಹಾರಕ್ಕಾಗಿ ಅರಮನೆಯಿಂದ ಹೊರಗಡೆ ಬಂದಾಗ ಅಲ್ಲಿ ನಾಲ್ಕು ವಿಚಾರಗಳನ್ನು ನೋಡಿ ಜೀವನದಲ್ಲಿ ತನಗರಿವಿಲ್ಲದೆಯೇ ಮೊದಲ ಬಾರಿಗೆ ಜಿಗುಪ್ಸೆಗೊಳ್ಳುತ್ತಾನೆ.

ಅದೇನೆಂದರೆ ಓರ್ವ ಮುದುಕ, ರೋಗಿ, ಶವಯಾತ್ರೆ ಹಾಗೂ ಅಲೆದಾಡುವ ಓರ್ವ ತಪಸ್ವಿಯನ್ನು ಕಂಡು ದಿವ್ಯದರ್ಶನವಾಗುತ್ತದೆ. ಈ ನಾಲ್ಕು ವಿಚಾರಗಳನ್ನು ಕಂಡ ಕೂಡಲೇ ಗೌತಮನು ಕುತೂಹಲಕ್ಕೆ ಒಳಗಾಗುತ್ತಾನೆ.

ನಂತರ ಅರಮನೆಗೆ ಹಿಂತಿರುಗಿ ನಿಜ ಜೀವನದ ಬಗೆಗೆ ತಿಳಿದುಕೊಳ್ಳಲು ಗುರುಗಳ ಹುಡುಕಾಟ ಮಾಡಲು ಬಹಳಷ್ಟು ಕಷ್ಟಪಡುತ್ತಾನೆ.ಆದರೆ ಯಾರೂ ಕೂಡ ಗೌತಮನಿಗೆ ಜೀವನದ ಬಗೆಗೆ ಸತ್ಯ ವಿಚಾರಗಳನ್ನು ತಿಳಿಸದೇ ಇದ್ದುದರಿಂದ ಬೇಸರಗೊಂಡ ಬುದ್ಧ ಸಂಸಾರ ಹಾಗೂ ಅರಮನೆಯನ್ನು ತ್ಯಾಗ ಮಾಡಿ ಜೀವನದ ಬಗೆಗೆ ತನಗಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಒಂಟಿಯಾಗಿ ತೆರಳುತ್ತಾನೆ.

ಆಧ್ಯಾತ್ಮಕ್ಕಾಗಿ ಸರ್ವಪರಿತ್ಯಾಗ

ಆ ನಾಲ್ಕು ವಿಚಾರಗಳನ್ನು ಕಂಡ ನಂತರ ಬುದ್ಧನಿಗೆ ಜೀವನದ ಸತ್ಯತೆಯನ್ನು ತಿಳಿದುಕೊಳ್ಳುವ ಕುತೂಹಲ ಆತನ ಮನಸ್ಸನ್ನು ಬೆಂಬಿಡದೆ ಕಾಡಲಾರಂಭಿಸುತ್ತದೆ. ಹೀಗಾಗಿ ಜೀವನದ ಬಗೆಗೆ ಸಾಕ್ಷಾತ್ಕಾರ ಮಾಡಲು ತಾನು ಸನ್ಯಾಸಿಯಾಗುವ ವಿಚಾರವನ್ನು ತನ್ನ ತಂದೆ ಶುದ್ಧೋದನ ಹಾಗೂ ಮಡದಿ ಯಶೋಧರೆಗೆ ತಿಳಿಸಿ ಮನ‌ ಒಲಿಸಲು ಪ್ರಯತ್ನಿಸುತ್ತಾನೆ. ಅಲ್ಲದೇ ಆತನ ಮಗ ರಾಹುಲನು ಕೂಡ ತನ್ನ ಏಳನೇಯ ವಯಸ್ಸಿಗೆ ಸನ್ಯಾಸಿಯಾಗಲು ತಂದೆಯೊಂದಿಗೆ ತೆರಳುತ್ತಾನೆ.

ಸತ್ಯ ಶೋಧಕ್ಕಾಗಿ ಪ್ರಪಂಚ ಪರ್ಯಟನೆ

ಜೀವನದ ಸತ್ಯತೆಯನ್ನು ತಿಳಿಯುವುದಕ್ಕಾಗಿ ಬುದ್ಧನು ತನ್ನ ಎಂಭತ್ತು ವರ್ಷದವರೆಗೆ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಪರ್ಯಟನೆಯ ಜೊತೆಜೊತೆಗೆ ಸತ್ಯ ದರ್ಶನದ ಬಗೆಗೆ ಜನರಿಗೆ ಭೋಧನೆಗಳನ್ನು ನಿರಂತರವಾಗಿ ಮಾಡುತ್ತಾನೆ ಹಾಗೂ ಬಡವ ಹಾಗೂ ದುರ್ಬಲರ ಸೇವೆಯನ್ನು ಮಾಡುತ್ತಾನೆ.ವಿಮೋಚನೆಗಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು ಹಾಗೂ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಹಾಗಾಗಿ ನಾವು ಪರರಿಗೆ ಹಾಗೂ ಮಾನವೀಯತೆಗೆ ಬೆಲೆ ಕೊಡಬೇಕು ಎಂಬುವುದು ಗೌತಮ ಬುದ್ಧನು ಭೋಧಿಸಿದ ಮುಖ್ಯ ತತ್ವಗಳು.

ಬುದ್ಧನು ಇಹ ಲೋಕವನ್ನು ತ್ಯಜಿಸುವಾಗ ಎಂಭತ್ತು ವರುಷಗಳಾಗಿದ್ದರೂ ಕೂಡ ಯಾವುದೇ ದಣಿವಿಲ್ಲದೇ ಸತ್ಯ ದರ್ಶನಕ್ಕಾಗಿ ನಿರಂತವಾದ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಕೊನೆಗೆ ತನ್ನ ಅನುಯಾಯಿಗಳಿಗೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತ ಅಲ್ಲ.ಹಾಗಾಗಿ ನಿಮ್ಮ ವಿಮೋಚನೆಗಾಗಿ‌ ಮಾತ್ರ ಕೆಲಸ ಮಾಡಿ ಎಂಬ ಕೊನೆಯ ನುಡಿಗಳನ್ನು ನೀಡಿ ಲೋಕದಲ್ಲಿ ಅಜರಾಮರನಾಗುತ್ತಾನೆ.

ಹೀಗೆ ಜಗತ್ತಿನಲ್ಲಿ ಯಾರಾದರೂ ಒಬ್ಬ ಐಶಾರಾಮಿ ಜೀವನ ಬಿಟ್ಟು ಜಗತ್ತನ್ನು ಬೆಳಗಿಸಲು ಹೊರ ಬಂದಿದ್ದರೆ,ಅವನು ಬುದ್ಧ ಮಾತ್ರ. ಬುದ್ದನು ತನ್ನ ಇಡೀ ಜೀವನವನ್ನು ಸಂಘರ್ಷದಲ್ಲಿ ಕಳೆದ.ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಆ ಚಂದ್ರಾರ್ಕರಿರುವವರೆಗೂ ಅಜರಾಮರವಾಗಿರುತ್ತಾನೆ. ಇದು ಈ ಮಣ್ಣಿನ ಗುಣ.


ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group