spot_img
spot_img

ಜೆಡಿಎಸ್ ನಿಂದ ರೈತರಿಗೆ ಬಂಪರ್ ಕೊಡುಗೆ – ವಿಶಾಲಾಕ್ಷಿ ಪಾಟೀಲ

Must Read

ಸಿಂದಗಿ: ಜೆಡಿಎಸ್ ಪಕ್ಷಕ್ಕೆ ಅನ್ನದಾತನೇ ಜೀವಾಳ ಆ ಕಾರಣಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಾಗೊಮ್ಮೆ ರೈತರಿಗೆ ಬಂಪರ ಕೊಡುಗೆ ನೀಡಿದ ಇತಿಹಾಸವಿದೆ ಅದಕ್ಕೆ ಕೃಷಿಕರು ಆರ್ಥಿಕವಾಗಿ ಸದೃಢವಾಗಿ ಮುಂದೆ ಬರಲು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಕ್ಷೇತ್ರದ ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಸೋಮಜ್ಯಾಳ ಹೇಳಿದರು.

ಮಂಗಳವಾರ ಸಮೀಪದ ಭಂಟನೂರ ಹಾಗೂ ಕೆರೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಜೆಡಿಎಸ್ ನಡೆ ಹಳ್ಳಿಯ ಕಡೆ  ಕಾರ್ಯಕ್ರಮದಲ್ಲಿ  ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಈ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಹತ್ತು ಹಲವಾರು ಜನಪರ ಯೋಜನೆಗಳನ್ನು ಪ್ರಾಮಾಣಿಕವಾಗಿ ಕೊಟ್ಟಿದ್ದಾರೆ ಅದಲ್ಲದೆ ಅನ್ನದಾತನಿಗೆ ಆಸರೆಯಾಗಿ ಎರಡು ಲಕ್ಷದ ವರೆಗೆ ರಾಷ್ಟ್ರೀಕೃತ ಬ್ಯಾಂಕಿನ ಸಾಲ ಕೂಡ ಕೊಟ್ಟ ಮಾತಿನಂತೆ ಮನ್ನಾ ಮಾಡಿದ್ದಾರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಹೇಳಿ ಕುಮಾರ ಸ್ವಾಮೀಯವರನ್ನು ಮುಖ್ಯಮಂತ್ರಿಯನ್ನಾಗಿಸಲು ಕೈಜೋಡಿಸಿ ಎಂದು ಕೈ ಮುಗಿದು ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಪ್ರಮುಖರಾದ ನಾನಗೌಡ ಜಾಟ್ನಳ, ರೇವಣಸಿದ್ಧ ಬಿರಾದಾರ, ಚಿನ್ನು ಬಿರಾದಾರ, ಪ್ರಾಸಾದ ಬಿರಾದಾರ, ಕುಮಾರ ಬಿರಾದಾರ, ಬಸಣ್ಣ ದಳಪತಿ, ಮಲ್ಲಿಕಾರ್ಜುನ ಬಿರಾದಾರ, ಜಯಪ್ಪಗೌಡ ಬಿರಾದಾರ ಸೇರಿದಂತೆ ಕಾರ್ಯಕರ್ತರು ಇದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!