spot_img
spot_img

ಸಿಂದಗಿ ಉಪಚುನಾವಣೆ ; ನಾಮಪತ್ರ ಪ್ರಕ್ರಿಯೆ ಆರಂಭ

Must Read

spot_img
- Advertisement -

ಸಿಂದಗಿ: ಸಿಂದಗಿ ಮತಕ್ಷೇತ್ರದ ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಸೆ.28 ರಂದು ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು ಅ. 1 ರಿಂದಲೇ ನಾಮಪತ್ರ ಸಲ್ಲಿಕೆ ಪ್ರಾರಂಭಗೊಳ್ಳಲಿವೆ ಅ. 8 ರಂದು ನಾಮಪತ್ರ ಸಲ್ಲಿಸುವುದು ಕೊನೆಯ ದಿನವಾಗಿದೆ. 11 ರಂದು ನಾಮಪತ್ರ ಪರಿಷ್ಕರಣೆ ನಡೆಲಿದೆ. 13 ರಂದು ನಾಮಪತ್ರ ಹಿಂಪಡೆದುಕೊಳ್ಳುವದಾಗಿದೆ. ಅ. 30 ರಂದು ಮತದಾನ ನಡೆಲಿದೆ. ನ. 2 ರಂದು ಜಿಲ್ಲಾ ಕೇಂದ್ರದಲ್ಲಿ ಮತ ಏಣಿಕೆ ಕಾರ್ಯ ನಡೆಲಿದೆ ಇದರಿಂದ ಮತಕ್ಷೇತ್ರದಾದ್ಯಂತ ನೀತಿ ಸಂಹಿತೆ ಜಾರಿಗೆಯಾಗಿದೆ ಎಂದು ಇಂಡಿ ಉಪವಿಬಾಗಾಧಿಕಾರಿ ವ ಚುನಾವಣಾಧಿಕಾರಿ ರಾಹುಲ ಸಿಂಧೆ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ 1,20,949 ಪುರುಷರು, 1.13.327 ಮಹಿಳೆಯರು, 33 ಇತರೆ ಸೇರಿದಂತೆ ಒಟ್ಟು 2.34.309 ಮತದಾರಿದ್ದು ಒಟ್ಟು 297 ಮತಗಟ್ಟೆಗಳಲ್ಲಿ 22 ಸೆಕ್ಟರ ಅಧಿಕಾರಿಗಳು ಅಲ್ಲದೆ 18 ಟೀಮ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಮತದಾನಕ್ಕೆ 11 ತರಹದ ಗುರುತಿನ ಚೀಟಿಗಳನ್ನು ಗುರುತಿಸಬಹುದಾಗಿದೆ. ಒಟ್ಟು 696 ಬ್ಯಾಲೇಟ್ ಯುನಿಟ್, 687 ಕಂಟ್ರೋಲ್ ಯುನಿಟ್, 686 ವಿವಿ ಪ್ಯಾಟಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಬೇರೆ ಬೇರೆ ಸ್ಥಳಗಳಿಂದ ಬರುವಂಥ ಅನಧಿಕೃತ ವ್ಯವಹಾರಗಳನ್ನು ತಡೆಗಟ್ಟಲು ಮೋರಟಗಿ, ಕನ್ನೋಳ್ಳಿ, ತಾಂಬಾ, ದೇವಣಗಾಂವ ಗೋಲಗೇರಿ, ಹಂದಿಗನೂರ ಸೇರಿದಂತೆ 7 ಚೆಕ್ ಪೋಸ್ಟಗಳನ್ನು ನಿರ್ಮಿಸಲಾಗಿದ್ದು. ಮತದಾನಕ್ಕೆ ವಿವಿ ಮಶೀನ್ ಅಳವಡಿಸಲಾಗಿದೆ. ಅಲ್ಲದೆ ಅ. 30 ರಂದು ನಡೆಯುವ ಮತದಾನಕ್ಕೆ ಬೆಳಿಗ್ಗೆ 7 ರಿಂದ ಸಾಯಂಕಾಲ 7 ವರೆಗೆ ಸಮಯ ನಿಗದಿ ಪಡಿಸಲಾಗಿದೆ. ಈ ಕುರಿತು ಯಾವುದೇ ರೋಡ ಶೋ ಮೆರವಣಿಗೆಗಳು ಇರುವುದಿಲ್ಲ. ಸಭೆ ಸಮಾರಂಭಗಳನ್ನು ಸಮಯಕ್ಕೆ ತಕ್ಕಂತೆ ಅನ್ವಯಿಸುತ್ತವೆ. ಮನೆ ಮನೆ ತೆರಳಿ ಮತಯಾಚಿಸಲು 5 ಜನರು ಮಾತ್ರ ಸಂಪರ್ಕ ಮಾಡಬಹುದಾಗಿದೆ. ಕೊವಿಡ್ ನಿಯಮಗಳು ಅನ್ವಯವಾಗುತ್ತವೆ. ಕ್ಷೇತ್ರದಲ್ಲಿ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಇನ್ನೂ ಗುರುತಿಸಿಲ್ಲ. ಇದರ ಬಗ್ಗೆ ತಾಲೂಕಿನ ಎಲ್ಲ ಅಧಿಕಾರಿಗಳ ಸಭೆ ಕರೆಯಲಾಗಿದ್ದಲ್ಲದೆ ರಾಜಕೀಯ ಮುಖಂಡರ ಸಭೆಯು ಕೂಡಾ ನಡೆಸಲಾಗಿದ್ದು ಇನ್ನೂ ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಚುನಾವಣೆ ಅಚ್ಚುಕಟ್ಟಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮಕ್ಕಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ವ ಸಹಾಯಕ ಚುನಾವಣಾಧಿಕಾರಿ ಸಂಜೀವಕುಮಾರ ದಾಸರ ಇದ್ದರು.

- Advertisement -
- Advertisement -

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group