spot_img
spot_img

ಕೊರೊನ ಮೂರನೆ ಅಲೆ ಯಾರಿಂದ? ಎಲ್ಲಿಂದ? ಯಾಕೆ ?

Must Read

spot_img
- Advertisement -

ಕೊರೊನ ಪ್ರಾರಂಭವಾಗಿ ಒಂದು ವರ್ಷ ವಾದರೂ ಅದರ ಅಲೆಯನ್ನು ಮಾತ್ರ ಮಾನವನಿಗೆ ತಡೆಯಲಾಗದೆ ಅಲೆ ಬರದಿದ್ದರೂ ಬರುತ್ತದೆ ಬರುತ್ತಿದೆ ಬಂದಿದೆ ಎಂದು ಮನೆ ಮನೆಗೆ ತಲುಪಿಸುವುದರಲ್ಲಿಯೇ ಸುದ್ದಿ ಮಾಧ್ಯಮಗಳು ಅಲೆಯನ್ನು ಹೆಚ್ಚಿಸುತ್ತಿದ್ದಾರೆ.

ಮೊದಲ ಅಲೆ ಹಿರಿಯರಿಗೆ,ವಯಸ್ಸಾದವರಿಗೆ ಬಂದು ಕೆಲವರು ತಿಳಿದುಕೊಳ್ಳುವ ಹೊತ್ತಿಗೆ ಮರಣಹೊಂದಿದರು. ನಂತರ ಎರಡನೆ ಅಲೆ ಮಧ್ಯವಯಸ್ಸಿನವರಿಗೆ ಬಂದು ಹೋಯಿತು.ಈಗ ಮಕ್ಕಳ ಸರದಿ. ಇದಕ್ಕಾಗಿಯೇ ಸರ್ಕಾರ ಸಾಕಷ್ಟು ಬೆಲೆ ತೆತ್ತಿದೆ ಆದರೂ ಅಲೆಗಳು ಹೆಚ್ಚುತ್ತಿದೆ.

ಜನಸಾಮಾನ್ಯರ ಜೀವನ ಹದಗೆಡುತ್ತಿದೆ.ಮಕ್ಕಳ ಶಿಕ್ಷಣ ತಡೆದಿದೆ. ಸಂಸಾರದಲ್ಲಿ ಸಮಸ್ಯೆಗಳು ಬೆಳೆಯುತ್ತಿದೆ. ಹೀಗೇ ಅಲೆ ಅಲೆಯಾಗಿ ಹೆಚ್ಚಾಗುತ್ತಿರುವ ಸಮಸ್ಯೆಗಳನ್ನು ತಡೆಯಲು ಸರ್ಕಾರದಿಂದ ಕಷ್ಟವಿದೆ. ಆದರೆ ನಮ್ಮ ಸಹಕಾರದಿಂದ ಸಾಧ್ಯವಿದೆ.

- Advertisement -

ಇದಕ್ಕೆ ಬೇಕಿತ್ತು ಸತ್ಯಜ್ಞಾನ. ವಿಜ್ಞಾನದ ಔಷಧವೇನೂ ಜನರಿಗೆ ಕೊಟ್ಟಿದ್ದರೂ ಅದೂ ಯಾವುದೇ ಶಾಶ್ವತ ಪರಿಹಾರವಲ್ಲ. ಜನರಲ್ಲಿ ತುಂಬಿರುವ. ನಕಾರಾತ್ಮಕ ಶಕ್ತಿಯನ್ನು ಹೊರಗಿನ ಔಷಧ ಹೋಗಲಾಡಿಸಲು ಅಸಾಧ್ಯ. ಜನರ ಜೀವವನ್ನು ಒಂದು ಲಸಿಕೆ ತಾತ್ಕಾಲಿಕವಾಗಿ ತಡೆಯಬಹುದು. ಹಾಗೆ ನಮ್ಮ ಜೀವಕ್ಕೆ ನಮ್ಮ ಸಕಾರಾತ್ಮಕ ಜ್ಞಾನವೂ ಹೆಚ್ಚು ಬಲ ನೀಡುತ್ತದೆ.

ಸಾವು ನಿಶ್ಚಿತವಾದರೂ ಸಾವನ್ನು ಸಂತೋಷದಿಂದ ಸ್ವೀಕರಿಸುವ ಆತ್ಮಜ್ಞಾನ ಮಾನವನಿಗೆ ಹಿಂದೆ ಇತ್ತು. ಹಿಂದಿನ ಧರ್ಮ ಯುದ್ದಗಳಲ್ಲಿ ಆತ್ಮರಕ್ಷಣೆ ಮುಖ್ಯವಾಗಿ ಜೀವತ್ಯಾಗಮಾಡಿರುವ ಮಹಾತ್ಮರ ದೇಶ ಭಾರತ.

ಸ್ವಾತಂತ್ರ್ಯ ಹೋರಾಟಗಾರರನ್ನೇ ನಾವು ಇಲ್ಲಿ ಸ್ಮರಿಸಬಹುದು. ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳ ಜೀವ ಉಳಿಸುವುದು ಸರ್ಕಾರದ ಕೆಲಸವೆ? ಅಥವಾ ಸರ್ಕಾರದ ಜೀವ ಉಳಿಸುವುದು ಪ್ರಜೆಗಳ ಕೆಲಸವೆ? ಜೀವದ ಹಂಗು ತೊರೆದು ದೇಶರಕ್ಷಣೆ ಮಾಡುತ್ತಿರುವ ಸೈನಿಕರನ್ನು ನಾವು ಮರೆತಿದ್ದೇವೆ.

- Advertisement -

ನಮ್ಮ ಜೀವಕ್ಕಾಗಿ ದೇಶವನ್ನೇ ಮರೆತಿರುವಾಗ. ಸೈನಿಕರು ನಮಗೆ ಕಾಣೋದಿಲ್ಲ. ಇಲ್ಲಿ ಕೊರೊನ ವನ್ನು ಆಧ್ಯಾತ್ಮದ ಪ್ರಕಾರ ತಿಳಿಯದೆ ಮಹಾಮಾರಿ ಎನ್ನುವ ಭಯದಲ್ಲಿ ತಮ್ಮ ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳದೆ, ಬೌತಿಕಾಸಕ್ತಿ ಬೆಳೆಸಿಕೊಂಡು ಸೋಮಾರಿಗಳಾದವರು ಹೆಚ್ಚು. ಶ್ರಮ ಜೀವಿಗಳಿಗೆ ಕೆಲಸವಿಲ್ಲದೆ ಅಲೆಯುವಂತಾಯಿತು.

ಶ್ರೀಮಂತ ವರ್ಗ ಹಣದಿಂದ ತಮ್ಮ ಜೀವರಕ್ಷಣೆ ಮಾಡಿಕೊಂಡರೆ ಬಡವರ ಗತಿ ಅಧೋಗತಿ. ದೇಶದ ಭವಿಷ್ಯವಿರೋದು ಮಕ್ಕಳಲ್ಲಿ ಈಗ ಮಕ್ಕಳಿಗೂ ಮೂರನೆ ಅಲೆಯ ಭೀತಿ ಹರಡುತ್ತಿರುವುದರಿಂದ ಪೋಷಕರಿಗೂ ಭಯದ ವಾತಾವರಣ. ಭಯವೇ ಎಲ್ಲದ್ದಕ್ಕೂ ಕಾರಣವೆನ್ನಬಹುದು. ಇಷ್ಟಕ್ಕೂ ಈವರೆಗೆ ಸತ್ತವರಿಗಿಂತ ಗುಣಮುಖರಾಗಿರುವವರೆ ಹೆಚ್ಚು.

ಗುಣಮುಖರಾಗಲು ದಾರಿಯಿದೆ ಎಂದಾಗ ಎಲ್ಲಿಯ ಭಯ? ಸರ್ಕಾರದ ಲಸಿಕೆ ಅಭಿಯಾನ ಅಪೂರ್ಣವಾಗೋದಕ್ಕೆ ಕಾರಣ ಜನರ ಅಸಹಕಾರ, ವಿರೋಧಿಗಳ ಪ್ರಚಾರ. ಲಸಿಕೆ ಪಡೆಯದವರಿಗೆಲ್ಲರಿಗೂ ಸೋಂಕು ಬಂದಿಲ್ಲ ಎಂದರೆ ನಮ್ಮೊಳಗೇ ಅಡಗಿರುವ ಸಕಾರಾತ್ಮಕ ಶಕ್ತಿ ಕಾರಣ. ಮಕ್ಕಳಿಗೆ ಹೆದರಿಸಿ, ಬೆದರಿಸಿದರೆ ಅದೇ ರೋಗ ವಾಗಿ ಕಾಡುತ್ತದೆ.

ಹಾಗಂತ ಸ್ವೇಚ್ಚಾಚಾರಕ್ಕೆ ಅವಕಾಶ ನೀಡಿದರೂ ಜೀವಕ್ಕೆ ಅಪಾಯ. ನಮ್ಮ ಜೀವಕ್ಕೆ ನಾವೇ ಕಾವಲುಗಾರರು. ಶುದ್ದವಾದ ಆಹಾರ, ಶಿಕ್ಷಣ, ಸಂಸ್ಕಾರ ನೀಡುವ ಮೂಲಕ ಪೋಷಕರಾದವರು ಮಕ್ಕಳ ಆರೋಗ್ಯ ಹೆಚ್ಚಿಸಿಕೊಳ್ಳಲು ಮನೆಯೊಳಗೆ ಸಾಧ್ಯ.

ಇನ್ನೂ ಶಾಲಾ ಕಾಲೇಜುಗಳು ಪ್ರಾರಂಭವಾಗದ ಕಾರಣ ಯಾವ ಅಲೆಯೂ ಹೊರಗೆ ಹೆಚ್ಚಾಗುವುದಕ್ಕೆ ಅವಕಾಶ ಕೊಡಬಾರದು. ಪೋಷಕರಾದವರು ಮಕ್ಕಳ ಜೊತೆಗೆ ತಮ್ಮ ಮನಸ್ಸನ್ನೂ ಹಿಡಿತದಲ್ಲಿಟ್ಟುಕೊಂಡು ಸದ್ವಿಚಾರ ಸತ್ಸಂಗ,ಸದಾಚಾರದ ಕಡೆಗೆ ನಡೆದರೆ ಕೊರೊನ ಮಾಯ.

ಮಾನವನ ಅತಿಯಾದ ಸ್ವೇಚ್ಚಾಚಾರಕ್ಕೆ ಜೀವಬಲಿ,ಪ್ರಾಣಿಬಲಿಗಳಾದರೂ ಯಾರೂ ಏನೂ ಮಾಡಲಾಗದ ಪರಿಸ್ಥಿತಿಯನ್ನು ಸುಧಾರಿಸಲು ಕೊರೊನ ಮಧ್ಯೆ ಪ್ರವೇಶಮಾಡಿ ಸ್ವಚ್ಚತೆ ಕಡೆಗೆ ನೆಡೆದರೆ ಜೀವರಕ್ಷಣೆ ಎನ್ನುವ ಸಂದೇಶಕೊಟ್ಟರೂ ಕೇಳದೆ ಅದೇ ಮಾರ್ಗದಲ್ಲಿ ನಡೆದರೆ ಬಿಡುವುದೆ?

ಹೊರಗಿನಿಂದ ಸ್ವಚ್ಚ ಭಾರತದ ಕನಸು, ಒಳಗಿನ ಮನಸ್ಸೇ ಕೊಳಕಾಗಿದ್ದರೆ ರೋಗ ಹರಡುವುದು ಸಹಜ.ಅಜ್ಜನಂತೆ ಅಪ್ಪ,ಅಪ್ಪನಂತೆ ಮಗ. ಇದು ಸತ್ಯಜ್ಞಾನದೆಡೆಗೆ ನಡೆಯದೆ ಮಿಥ್ಯಜ್ಞಾನದೆಡೆಗೆ ನಡೆಯುತ್ತಾ ವಿದೇಶವನ್ನು ಸುತ್ತಿಕೊಂಡು ಅವರ ರೋಗವನ್ನು ದೇಶದಲ್ಲಿ ಹರಡಿದರೆ ಇದಕ್ಕೆ ಪರಿಹಾರ ನಮ್ಮೊಳಗೆ ಇದೆ.

ಕೆಲಸಕಾರ್ಯ ಬಿಟ್ಟು ಮನೆಯಲ್ಲಿ ಕುಳಿತರೆ ಸಂಸಾರ ಸಾಗಿಸೋದು ಕಷ್ಟ. ಈ ಕಷ್ಟದಿಂದ ಮನಸ್ಸು ಕುಸಿಯುತ್ತದೆ. ಮಾನಸಿಕ ರೋಗಕ್ಕೆ ಯೋಗದ ಜೀವನವೆ ಮದ್ದು. ಭಾರತೀಯರ ಮೂಲ ಔಷಧವನ್ನು, ಶಿಕ್ಷಣವನ್ನು, ಧರ್ಮ, ಕರ್ಮವನ್ನು ಮರೆತು ಹೊರಬಂದವರಿಗೆ ವಿದೇಶಿ ಮದ್ದೇ ಬೇಕು. ಇದರಲ್ಲಿಯೂ ದೇಶ ಸಾಲ ಮಾಡುತ್ತಿದ್ದರೆ ಆತ್ಮನಿರ್ಭರ ಭಾರತವಾಗದು.

ಭಾರತೀಯರೆ ಕಂಡುಹಿಡಿದ ಲಸಿಕೆ ಭಾರತೀಯರಿಗೆ ಸರಿಯಾಗಿ ಬಳಸಿಕೊಳ್ಳಲಾಗದೆ ವಿದೇಶಿ ಲಸಿಕೆಯನ್ನು ಪಡೆದು ಸರ್ಕಾರ ಜನರ ಜೀವ ಉಳಿಸುತ್ತಿದೆ. ಆದರೆ ದೇಶದ ಪ್ರಜೆಗಳಿಗೆ ಇದರ ಬಗ್ಗೆ ಚಿಂತನೆ ನಡೆಸೋ ಆಸಕ್ತಿಯಿಲ್ಲದೆ ಕೇವಲ ನಕಾರಾತ್ಮಕ ವಿಚಾರಗಳಿಂದ ಜನರನ್ನು ಹೆದರಿಸುತ್ತಾ ಮಕ್ಕಳವರೆಗೆ ಅಲೆಗಳು ಹರಡುತ್ತಿರೋದು ಯಾವ ಸಾಧನೆಯೋ?

ಮಾಧ್ಯಮಗಳಲ್ಲಿ ಪ್ರಸಾರ ಮಾಡುವ‌ ಮನರಂಜನೆ ಪ್ರಜೆಗಳ ಜೀವ ಉಳಿಸುವುದೆ? ಆತ್ಮ ಜ್ಞಾನದಿಂದ ಭಾರತ ಆರೋಗ್ಯವಂತ ಪ್ರಜೆಗಳನ್ನು ಹೊಂದಿತ್ತು. ಈಗ ವೈದ್ಯಕೀಯ ಕ್ಷೇತ್ರದಲ್ಲಿ ಅಂಗಾಂಗ ಜೋಡಣೆಯವರೆಗೆ ಸಂಶೋಧನೆ ಆಗಿದೆ, ಒಬ್ಬರ ಜೀವಕ್ಕೆ ಬೆಲೆಕಟ್ಟಿ ಕೊಳ್ಳುವ. ಶ್ರೀಮಂತ ವರ್ಗದವರು ಬಡವರ ಜೀವಕ್ಕೆ ಬೆಲೆಕೊಡದೆ ರಾಜಕೀಯ ನಡೆಸಿದರೆ ಮಹಾಮಾರಿಗೆ ಎಲ್ಲರ ಜೀವವೂ ಸರಿಸಮಾನ.

ಮುದುಕರಾದರೇನು ಮಕ್ಕಳಾದರೇನು ಜೀವ ಜೀವವೆ. ಜೀವ ಬಂದಿರೋದೆ ಆತ್ಮಸಾಕ್ಷಾತ್ಕಾರಕ್ಕಾಗಿ. ಇದನ್ನು ಆತ್ಮಹತ್ಯೆ ಕಡೆಗೆ ನಡೆಸೋ  ಅಜ್ಞಾನವನ್ನು ಹೆಚ್ಚಿಸಿರೋದೆ ಶಿಕ್ಷಣ. ಅಲೆಗೆ ಬೆಲೆ ಕಟ್ಟುವ ಬದಲಾಗಿ ಮಕ್ಕಳೊಳಗಿನ ಕಲೆಗೆ ಬೆಲೆ ಕಟ್ಟಿ ಬೆಳೆಸಿ ಜ್ಞಾನ ಹೆಚ್ಚಿಸಿ,ಸ್ವಾಭಿಮಾನ, ಸ್ವಾವಲಂಬನೆ ಕಡೆಗೆ ಪೋಷಕರಾದವರು ನಡೆದರೆ ಯಾವುದೇ ಅಲೆ ಇರಲ್ಲ.

ಒಟ್ಟಿನಲ್ಲಿ ಇದೊಂದು ಸಾಂಕ್ರಾಮಿಕ ಮಾನಸಿಕ ರೋಗ ಆಗೋ ಮೊದಲು ಎಲ್ಲಾ ಎಚ್ಚರವಾದರೆ ಉತ್ತಮ. ಕೊರೊನ ಅಲೆಅಲೆಯಾಗಿ ಸುಳ್ಳುಸುದ್ದಿ ಮಾಧ್ಯಮಗಳ ಬಂಡವಾಳ ಶಾಹಿಗಳ,ಭ್ರಷ್ಟಾಚಾರಿಗಳ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವ ಮಧ್ಯವರ್ತಿಗಳ ಜೀವನಕ್ಕೆ ಶಕ್ತಿ ನೀಡಿದರೆ ಜೀವ ಶಾಶ್ವತವಲ್ಲ ಆತ್ಮ ಶಾಶ್ವತ. ಆತ್ಮಶಕ್ತಿ ಇರೋದು ಒಳಗೆ.

ಆದರೆ ಮಾನವ ಮನೆಯೊಳಗಿದ್ದು ಹೊರಗಿನ ರಾಜಕೀಯದಲ್ಲಿ ಮುಳುಗಿದ್ದರೆ ಗಾಳಿಸುದ್ದಿ ಜೊತೆಗೆ ಗಾಳಿಯಿಂದ ಹರಡುವ ಸೋಂಕಿನ ಅಲೆಗಳೂ ಹೆಚ್ಚಾಗುವುದು ಸಹಜ. ಕ್ಷಣಕ್ಷಣವನ್ನೂ ವ್ಯರ್ಥ ಮಾಡದೆ ಜೀವನದ ಸತ್ಯ ತಿಳಿದು ನಡೆದ ಹಿಂದಿನ ಮಹಾತ್ಮರೆಲ್ಲಿ? ಅವರುಗಳ ಶಕ್ತಿ ಮಕ್ಕಳೊಳಗಿದ್ದರೂ ಪೋಷಕರೆ ಗಮನಿಸದೆ ಮನೆಯೊಳಗೆ ಅನಾವಶ್ಯಕ ವಿಚಾರಗಳನ್ನು ತುಂಬಿ ಬೆಳೆಸಿದರೆ ಹೊರಗೆ ಬಂದ ಮಕ್ಕಳಿಗೆ ಸೋಂಕು ಸುಲಭವಾಗಿ ಹರಡುವ ಸಾಧ್ಯತೆ ಇದೆ.

ಭಯಬಿಟ್ಟು ಜೀವನ ಸತ್ಯ ತಿಳಿಸಿ ಮಕ್ಕಳ ಆತ್ಮಶಕ್ತಿ ಹೆಚ್ಚಿಸುವ ಶಿಕ್ಷಣವನ್ನು ಮನೆ ಮನೆಯೊಳಗೆ ಹೆಚ್ಚಿಸಿದರೆ ಭಾರತ ಆತ್ಮನಿರ್ಭರ ಆಗಬಹುದು. ಇದಕ್ಕಾಗಿಯೇ ಇಂದು ಆ ಮಹಾಶಕ್ತಿ ಮನೆಯೊಳಗಿರುವ ಅವಕಾಶ ನೀಡಿರುವುದಾಗಿದೆ. ಶಿಕ್ಷಣ ನೀಡುವುದಕ್ಕಾಗಿಯೇ ಪೋಷಕರು ಹೆಚ್ಚಿನ ಹಣ ಸಂಪಾದನೆಗಿಳಿದಿರೋದು.

ಅದೇ ಶಿಕ್ಷಣವನ್ನು ಸರ್ಕಾರ ಉಚಿತವಾಗಿ ನೀಡಿದ್ದರೂ ನಿರ್ಲಕ್ಷ್ಯ ಮಾಡುವ ಪ್ರಜೆಗಳಿಂದ ವಿದೇಶ ಬೆಳೆಯಿತೆ? ಸ್ವದೇಶವೆ? ಒಟ್ಟಿನಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಲಾಭ. ಸರ್ಕಾರ ದೇಶದ ಪರವಿದ್ದರೂ ಪ್ರಜೆಗಳೆ ವಿದೇಶದ ಪರ ನಿಂತರೆ ಅಧರ್ಮಕ್ಕೆ ತಕ್ಕಂತೆ ಪ್ರತಿಫಲ.

ಈಗಲೂ ಇದೇ ರಾಜಕೀಯತೆ ಶಿಕ್ಷಣ ಕ್ಷೇತ್ರದಲ್ಲಿದೆ.ಇಲ್ಲಿ ಸ್ವದೇಶ ಶಿಕ್ಷಣ. ನೀಡದ ಖಾಸಗಿ ಶಿಕ್ಷಣಕ್ಷೇತ್ರಗಳಿಗೆ ಲಕ್ಷ ಕೊಟ್ಟು ಮಕ್ಕಳ ಒಳಗೇ ಇದ್ದ ಸ್ವದೇಶಿ ಜ್ಞಾನವನ್ನು ನಿರ್ಲಕ್ಷ್ಯ ಮಾಡಿದ ಪೋಷಕರಿಗೆ ಕೊನೆಗಾಲದಲ್ಲಿ ನಮ್ಮ ಸರ್ಕಾರ ಸಾಕಬೇಕೆಂದರೆ ತಪ್ಪು ಯಾರದ್ದು?

ಆತ್ಮಾವಲೋಕನಕ್ಕೆ ಇನ್ನೂ ಅವಕಾಶವಿದೆ.ಸಮಯವಿದೆ.ಮಕ್ಕಳ ಭವಿಷ್ಯ ಸರ್ಕಾರದ ಕೈಯಲ್ಲಿ ಇಲ್ಲ. ಪೋಷಕರ ಜ್ಞಾನದಲ್ಲಿದೆ. ಜೀವ ಇದ್ದರೆ ಜೀವನ. ಆತ್ಮಜ್ಞಾನವಿದ್ದರೆ ಆತ್ಮನಿರ್ಭರ ಭಾರತ. ನಿಂತಿರುವ ಶಿಕ್ಷಣವನ್ನು ಪುನರಾರಂಭಿಸೋ ಮೊದಲು ಮಕ್ಕಳ ಸುಜ್ಞಾನ ಬೆಳೆಸೋ ಸದ್ವಿಚಾರ ವುಳ್ಳ ಸ್ವದೇಶದ ಧರ್ಮ ಸಂಸ್ಕೃತಿ ಸದಾಚಾರ,ಸತ್ಯವನ್ನು ಎತ್ತಿ ಹಿಡಿಯೋ ವಿಷಯಗಳನ್ನು ಪಠ್ಯಪುಸ್ತಕ ದಲ್ಲಿ ಸೇರಿಸಿ ಕಲಿಸಿ,ಬೆಳೆಸಿ.

ವಿದೇಶ ಭಾರತವನ್ನು ವಿಶ್ವಗುರು ಎಂದು ನೋಡಲು ನಮ್ಮ ಗುರಿ ಆಧ್ಯಾತ್ಮದ ಕಡೆ ಇರಬೇಕಷ್ಟೆ. ಇದಕ್ಕಾಗಿಯೇ ನಮ್ಮ ಸಹಕಾರ ಬೇಕು. ರಾಜಕೀಯಕ್ಕೆ ಮನಸ್ಸು ಕೊಟ್ಟು ರಾಜಯೋಗ ಬಿಟ್ಟರೆ ನಷ್ಟ ಯಾರಿಗೆ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group