ಹಾಸನ: ಮಾಣಿಕ್ಯ ಪ್ರಕಾಶನ (ರಿ.) ಹಾಸನ ಸಂಸ್ಥೆಯ ವತಿಯಿಂದ ಮುಂಬರುವ ಆಗಸ್ಟ್ ಅಥವಾ ಸೆಪ್ಟೆಂಬರ್ ಮಾಹೆಯಲ್ಲಿ ಹಮ್ಮಿಕೊಳ್ಳಲಿರುವ ೬ ನೆಯ ವರ್ಷದ ರಾಜ್ಯ ಮಟ್ಟದ ಕವಿ-ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಈ ಸಾಲಿನಿಂದ ಕವಯಿತ್ರಿ ಪದ್ಮಾವತಿ ವೆಂಕಟೇಶ್ ಅವರ ಹೆಸರಿನಲ್ಲಿ ಕೊಡಮಾಡುವ ಪದ್ಮಾವತಿ ವೆಂಕಟೇಶ್ ದತ್ತಿ ಪ್ರಶಸ್ತಿ ೨೦೨೧ ಕ್ಕೆ ೨೦೨೧ ರಲ್ಲಿ ಪ್ರಕಟವಾದ ಕನ್ನಡ ಸ್ವತಂತ್ರ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಥಾ ಸಂಕಲನಗಳ ಕೃತಿಕಾರರು ಸ್ವವಿವರಗಳೊಂದಿಗೆ ೨೦೨೧ ರಲ್ಲಿ ಪ್ರಕಟವಾದ ತಮ್ಮ ಸ್ವತಂತ್ರ ಕಥಾ ಸಂಕಲನದ ಮೂರು ಪ್ರತಿಗಳನ್ನು ೨೦೨೨ ಜುಲೈ ೩೦ ರೊಳಗೆ ದೀಪಾ ಉಪ್ಪಾರ್, ಪ್ರಕಾಶಕರು, ವಿಷ್ಣುಕೃಪ ನಿಲಯ, ಪಾರ್ಕ್ ಹತ್ತಿರ, ಶಾಂತಿನಗರ, ಹಾಸನ – ೫೭೩೨೦೧. ಇಲ್ಲಿಗೆ ಕಳುಹಿಸಿ ಕೊಡಬೇಕು. ಹಿರಿಯ ಸಾಹಿತಿಗಳ ಸಮಿತಿಯು ಆಯ್ಕೆ ಮಾಡಿದ ಅತ್ಯುತ್ತಮ ಕಥಾ ಸಂಕಲನಕ್ಕೆ ೨೦೦೦-೦೦(ಎರಡು ಸಾವಿರ ನಗದು) ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಕಾಶನದ ಗೌರವವನ್ನು ಪ್ರಕಾಶನ ಮುಂದೆ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ನೀಡಲಾಗುವುದು. ಆಯ್ಕೆಯಾಗದ ಕೃತಿಗಳನ್ನು ಲೇಖಕರಿಗೆ ಹಿಂತಿರುಗಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ೯೭೩೯೮೭೮೧೯೭ ಸಂಪರ್ಕಿಸಬಹುದು.