spot_img
spot_img

ಒಗ್ಗಟ್ಟಿನ ಹೋರಾಟಕ್ಕೆ ಧ್ರುವತಾರೆ ಕರೆ

Must Read

spot_img
- Advertisement -

ಸರಕಾರಿ ಮಹಿಳಾ ನೌಕರರ ಸಂಘ ಉದ್ಘಾಟನೆ.

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘವು ಒಗ್ಗಟ್ಟಿನಿಂದ ಕೆಲಸ ಮಾಡಿ, ಜಿಲ್ಲೆ ಹಾಗೂ ರಾಜ್ಯದಲ್ಲಿ ಸರಕಾರಿ ಮಹಿಳಾ ನೌಕರರ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಘವು ಸಂಘಟಿತವಾಗಿ ಹೋರಾಟ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಜೆಸ್ಕಾಂ ಸಿಪಿಐ ಧ್ರುವತಾರೆ ಕರೆ ನೀಡಿದರು.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕಲ್ಬುರ್ಗಿ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಕಲ್ಬುರ್ಗಿ ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘವು ಆಯೋಜಿಸಿದ ಕಲಬುರ್ಗಿ ತಾಲೂಕ ಸರ್ಕಾರಿ ಮಹಿಳಾ ನೌಕರರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

- Advertisement -

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಉಪ ನಿರ್ದೇಶಕರು ವೈದ್ಯಕೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಾ.ರವಿಕಾಂತಿ. ಎಸ್ . ಕ್ಯಾತನಾಳ, ಸರ್ಕಾರಿ ಮಹಿಳಾ ನೌಕರರು ತಮ್ಮ ಪ್ರತಿದಿನದ ಕೆಲಸದ ಜೊತೆ ಆರೋಗ್ಯದ ಮೇಲೆಯೂ ಸಹ ಹೆಚ್ಚಿನ ಗಮನವನ್ನು ವಹಿಸಬೇಕಾಗಿದೆ, ಬಾಲ್ಯ ವಿವಾಹ ತಡೆಗಟ್ಟಬೇಕು, ಹೆಚ್ಚುತ್ತಿರುವ ಕ್ಯಾನ್ಸರ್ ರೋಗ ತಡೆಗಟ್ಟಲು ಶಿಬಿರಗಳನ್ನು ನಡೆಸುತ್ತೇವೆ ಎಂದು ಹೇಳಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಲಬುರ್ಗಿ ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೇ ನಂದಿನಿ ಸನಬಾಲ್ ಅವರು, ಸಂಘವು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಕ್ರಿಯಾತ್ಮಕ ಮತ್ತು ಗುಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಜೊತೆಗೆ ಜಿಲ್ಲೆಯಲ್ಲಿ ಯಾವುದೇ ಸರಕಾರಿ ಮಹಿಳಾ ನೌಕರರಿಗೆ ಅನ್ಯಾಯವಾದರೆ ಅದರ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದರು.ಎಲ್ಲ ಇಲಾಖೆಗಳಲ್ಲಿ ಮಹಿಳಾ ನೌಕರರಿಗೆ ಗೌರವ ಕೊಡಬೇಕು, ಹಾಗೂ ಅವರೊಂದಿಗೆ ಸಭ್ಯತೆಯಿಂದ ವ್ಯವರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲ್ಬುರ್ಗಿ ತಾಲೂಕ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಸವಿತಾ ಬಿ. ನಾಶಿ ಅವರು ಮಾತನಾಡಿ, ಸರಕಾರಿ ಮಹಿಳಾ ನೌಕರರು ಯಾವುದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಅವರ ಒಳಿತಿಗಾಗಿ ಸಂಘವು ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಹೇಳಿದರು. 125 ಜನರ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

- Advertisement -

ಸುಮಂಗಲಾ ಸಂಗಾವಿ, ಶಶಿಕಲಾ ನರೋಣಕರ್,ಕವಿತಾ ಮಾಶಾಳ್ಕರ್,ಜಮುನಾ ಟಿಳೆ,ಪ್ರತಿಮಾ ಪರಾಗ್, ಮೋಹಿನಿ, ಅನಿತಾ, ಸುಭದ್ರಮ್ಮ,ದೇವಮ್ಮ ಟಿ ಹುಲಿಮನಿ,ಲತಾ,ಲಲಿತ ಪಾಟೀಲ ಭಾಗವಹಿಸಿದರು.ಕಾರ್ಯಕ್ರಮ ದ ನಿರೂಪಣೆ ಶೋಭಾ ಕುಲಕರ್ಣಿ, ಸ್ವಾಗತ ರಾಜೇಶ್ವರಿ ತಪಲಿ, ಪ್ರಾಸ್ತಾವಿಕ ನುಡಿ ನಾಗರತ್ನ ಇಂಡಿ ಹಾಗೂ ವಂದನಾರ್ಪಣೆಯನ್ನು ಭಾಗ್ಯಶ್ರೀ ಕುಲಕರ್ಣಿ ನಡೆಸಿಕೊಟ್ಟರು.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group