spot_img
spot_img

ʻಅಡ್ವೈಸರ್‌ ಸಾಹಿತ್ಯ ಪ್ರಶಸ್ತಿʼ ಗೆ ಕೃತಿಗಳ ಆಹ್ವಾನ 

Must Read

spot_img

ಮಂಡ್ಯದ ಅಡ್ವೈಸರ್‌ ಪತ್ರಿಕೆ, 2022ನೇ ಸಾಲಿನ ರಾಜ್ಯಮಟ್ಟದ ಹದಿನಾರನೇಯ ವರ್ಷದ ʻಅಡ್ವೈಸರ್‌ ಸಾಹಿತ್ಯ ಪ್ರಶಸ್ತಿʼಗಾಗಿ ಎಂಟು ವಿಭಾಗಗಳಲ್ಲಿ ಹತ್ತು ಪ್ರಶಸ್ತಿಗಳಿಗಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ.

ಕವನ ಸಂಕಲನ, ಕಥಾ ಸಂಕಲನ, ಚುಟುಕು ಸಂಕಲನ, ವಚನ-ಶರಣ ಸಾಹಿತ್ಯ, ಮಹಿಳಾ ಸಾಹಿತ್ಯ, ಪುಸ್ತಕ ಪ್ರಶಸ್ತಿ, ಮಕ್ಕಳ ಸಾಹಿತ್ಯ, ಅಧ್ಯಾತ್ಮಿಕ ವಿಭಾಗಗಳಲ್ಲಿ ಬರುವ ಕೃತಿಗಳನ್ನು ಕಳುಹಿಸಬಹುದು.

ಕವನ ಸಂಕಲನಕ್ಕೆ ಇರುವ ಎರಡು ಪ್ರಶಸ್ತಿಗಳಲ್ಲಿ ಒಂದು ಮಹಿಳಾ ಕವಿಯತ್ರಿಗೆ ಮೀಸಲಾಗಿರುತ್ತದೆ. ವಚನ-ಶರಣ ಸಾಹಿತ್ಯ ಪ್ರಶಸ್ತಿಗೆ ಸಂಬಂಧಿಸಿದಂತೆ ವಚನ-ಶರಣ ಸಾಹಿತ್ಯಕ್ಕೆ ಸಂಬಂಧ ಪಟ್ಟ ಎಲ್ಲಾ ಪ್ರಕಾರಗಳನ್ನು, ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಮಹಿಳಾ ಪ್ರಶಸ್ತಿಗೆ ಸಂಬಂಧಪಟ್ಟಂತೆ ಮಹಿಳೆಯರು ರಚಿಸಿರುವ ಯಾವುದೇ ಪ್ರಕಾರಗಳಿಗೂ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ.

ಪುಸ್ತಕ ಪ್ರಶಸ್ತಿಯ ಪುಸ್ತಕದ ಯಾವುದೇ ಪ್ರಕಾರವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು, ಜೊತೆಗೆ ಪುಸ್ತಕದ ಅಂದ-ಚಂದ ಗಮನದಲ್ಲಿರುತ್ತದೆ. ಮಕ್ಕಳ ಸಾಹಿತ್ಯಕ್ಕೆ ಮಕ್ಕಳಿಗಾಗಿ ರಚಿಸಿರುವ ಯಾವುದೇ ಪ್ರಕಾರದ ಕೃತಿಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಆಧ್ಯಾತ್ಮಿಕ ಪ್ರಶಸ್ತಿಗೆ ಸಂಬಂಧಪಟ್ಟಂತೆ ಯಾವುದೇ ಪ್ರಕಾರಗಳಿಗೂ ಅವಕಾಶವಿರುತ್ತದೆ.

ಆಸಕ್ತ ಲೇಖಕರು ತಮ್ಮ ಕೃತಿಯ ಮೂರು ಪ್ರತಿಯನ್ನು ಸ್ವಪರಿಚಯ, ಮೊಬೈಲ್‌ ಸಂಖ್ಯೆಗಳೊಂದಿಗೆ ಪತ್ರಿಕೆಯ ಸಂಪಾದಕರ ವಿಳಾಸಕ್ಕೆ ಕಳುಹಿಸಿಕೊಡಲು ತಿಳಿಸಲಾಗಿದೆ. ಕೃತಿಯನ್ನು ಕಳುಹಿಸಲು ಮಾರ್ಚ್ 30 ಅಂತಿಮ ದಿನವಾಗಿರುತ್ತದೆ. ಎಲ್ಲಾ ಹತ್ತು ಪ್ರಶಸ್ತಿಗಳು ಸಮನಾಗಿ ಮೂರು ಸಾವಿರ ರೂ. ನಗದು ಮತ್ತು ಅಭಿನಂದನಾ ಪತ್ರವನ್ನು ಹೊಂದಿರುತ್ತದೆ. ಆಯ್ಕೆಗೊಂಡ ಕೃತಿ ವಿಜೇತರಿಗೆ ನಗದು ಹಾಗೂ ಪ್ರಶಸ್ತಿಗಳನ್ನು ಅಂಚೆಯ ಮೂಲಕ ಕಳುಹಿಸಲಾಗುವುದು.

ಕೃತಿಯನ್ನು ಕಳುಹಿಸಬೇಕಾದ ವಿಳಾಸ: ಸಿ. ಬಸವರಾಜು, ಸಂಪಾದಕರು, ಅಡ್ವೈಸರ್‌ ಮಾಸ ಪತ್ರಿಕೆ, 1455 ಚಂದ್ರಗಿರಿ, ಡಾ.ರಾಜ್‌ಕುಮಾರ್‌ ಬಡಾವಣೆ, ಮಂಡ್ಯ- 571402 ಹೆಚ್ಚಿನ ಮಾಹಿತಿಗಾಗಿ ಮೊ.ನಂ: 7892688670

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!