spot_img
spot_img

ಕೆನರಾ ಬ್ಯಾಂಕಿನ ಸಾಮಾಜಿಕ ಕಾಳಜಿ ಶ್ಲಾಘನೀಯ : ಪ್ರೊ. ಎಂ. ರಾಮಚಂದ್ರಗೌಡ

Must Read

- Advertisement -

ಬೆಳಗಾವಿ – ದಿ. 10ರಂದು ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದಲ್ಲಿ ಬೆಳಗಾವಿ ಜಿಲ್ಲೆಯ ಕೆನರಾ ಬ್ಯಾಂಕಿನ ಕ್ಷೇತ್ರೀಯ ಕಾರ್ಯಾಲಯವು ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಮಹಾವಿದ್ಯಾಲಯಕ್ಕೆ ಕಾಣಿಕೆಯಾಗಿ ನೀಡಿದ ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡ ಅವರು ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಆರೋಗ್ಯವು ಉತ್ತಮವಾಗಿರಲು ಶುದ್ಧ ನೀರು ತುಂಬಾ ಅವಶ್ಯಕವಾಗಿರುತ್ತದೆ. ವಿದ್ಯಾರ್ಥಿಗಳು ಭವ್ಯಭಾರತದ ನಿರ್ಮಾತೃ. ವಿದ್ಯಾರ್ಥಿಗಳ ಆರೋಗ್ಯದ ಕುರಿತು ಬ್ಯಾಂಕಿನವರು ನಿರ್ವಹಿಸುತ್ತಿರುವ ಕಾಳಜಿಯನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಕೆನರಾ ಬ್ಯಾಂಕಿನವರು ಈಗಾಗಲೇ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮುಖ್ಯ ಆವರಣ ಮತ್ತು ವಿಶ್ವವಿದ್ಯಾಲಯದ ಜಮಖಂಡಿ ಸ್ನಾತಕೋತ್ತರ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಿರುವುದನ್ನು ಸ್ಮರಿಸುತ್ತ, ಕೆನರಾ ಬ್ಯಾಂಕಿನ ಸಾಮಾಜಿಕ ಕಾಳಜಿಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಕುಲಸಚಿವರಾದ ಪ್ರೊ. ವೀರನಗೌಡ ಪಾಟೀಲ, ಹಣಕಾಸು ಅಧಿಕಾರಿಗಳಾದ ಪ್ರೊ. ಡಿ. ಎನ್. ಪಾಟೀಲ್, ಬೆಳಗಾವಿ ಜಿಲ್ಲೆಯ ಕೆನರಾ ಬ್ಯಾಂಕಿನ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕರಾದ ಅಶೋಕ ಕುಂಬಾರ, ಭೂತರಾಮನ ಹಟ್ಟಿ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ವಿರೇಶ ಗಣಾಚಾರಿ, ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯರಾದ ಆಧಿನಾಥ ಉಪಾಧ್ಯೆ ಹಾಗೂ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಹನುಮಂತಪ್ಪ ಸಂಜೀವಣ್ಣನವರು ನಡೆಸಿಕೊಟ್ಟರು.

- Advertisement -
- Advertisement -

Latest News

ಬಡವರ ಮನೆ ಊಟ ಚಂದ ಸ್ಥಿತಿವಂತರ ಮನೇಲಿ ಆಟ ಚಂದ ಆದರೂ ಯಾರ ನೆಮ್ಮದಿ ಎಲ್ಲಿ ಅಡಗಿದೆಯೋ ಬಲ್ಲವರಾರು?

ಅಮ್ಮ ನಿನಗ್ ಎಷ್ಟ ಸಲ ಹೇಳಿದಿನಿ ಪಕ್ಕದ ಮನೆಗೆ ಹೋಗಬೇಡಾ ಅಂತ.ನಿನಗೆ ಬೇಜಾರಾದ್ರೆ ಟಿವಿ ನೋಡು,ನಿದ್ದೆ ಮಾಡು, ಬೇಕಿದ್ರೆ ಮನೇಲೆ ಭಜನೆ, ದೇವರ ನಾಮಸ್ಮರಣೆ ಇಂತದ್ದೇನೋ...
- Advertisement -

More Articles Like This

- Advertisement -
close
error: Content is protected !!
Join WhatsApp Group