ಬರ್ಲಿನ್ – ಕೊರೋನಾ ಮಹಾಮಾರಿಗೆ ಲಸಿಕೆ ಕಂಡುಹಿಡಿದಿರುವ ಜರ್ಮನಿಯ ಬಯೋಎನ್ಟೆಕ್ ಕಂಪನಿಯು ಇನ್ನು ಮುಂದೆ ಕ್ಯಾನ್ಸರ್ ರೋಗಕ್ಕೂ ಲಸಿಕೆ ತಯಾರಿಸುವುದಾಗಿ ಹೇಳಿಕೊಂಡಿದೆ.
ಜರ್ಮನಿಯ ಬಯೋಎನ್ಟೆಕ್ ಕಂಪನಿಯೂ ಅಮೇರಿಕದ ಫೈಜರ್ ಜೊತೆಗೂಡಿ ಈಗಾಗಲೇ ಕೊರೋನಾಕ್ಕೆ ಲಸಿಕೆ ಸಿದ್ಧಪಡಿಸಿದೆ.
ಈ ಎರಡೂ ಕಂಪನಿಗಳ ಲಸಿಕೆಯು ಈಗ ಜಗತ್ತಿನಾದ್ಯಂತ ಪ್ರಸಿದ್ಧವಾಗಿದ್ದು ನಮ್ಮ ಮುಂದಿನ ಗುರಿ ಕ್ಯಾನ್ಸರ್ ಗೆ ಲಸಿಕೆ ಸಿದ್ಧಪಡಿಸುವುದಾಗಿದೆ ಎಂದು ಬಯೋಎನ್ಟೆಕ್ ಕಂಪನಿಯ ಸಹಸಂಸ್ಥಾಪಕ ಡಾ. ಓಜಲೆಮ್ ಟ್ಯುರೆನ್ಸಿ ಹೇಳಿದ್ದಾರೆ.