ಮೂಡಲಗಿ: ಕಬ್ಬಿನ ದರ ನಿಗದಿ ಕುರಿತಂತೆ ತಾಲೂಕಿನ ಗುರ್ಲಾಪೂರ ಕ್ರಾಸದಲ್ಲಿ ನಡೆಯುತ್ತಿರುವ ರೈತರ ಹೋರಾಟದ ಸ್ಥಳಕ್ಕೆ ಅಳೆದು ತೂಗಿ ಭೇಟಿಯಾದ ಸಕ್ಕರೆ ಸಚಿವ ಶಿವಾನಂದ ಪಾಟೀಲ ರೈತರ ಬೇಡಿಕೆಯ ದರ ನಿಗದಿಗೆ ಪ್ರಯತ್ನ ಮಾಡುವುದಾಗಿ ಎರಡು ದಿನಗಳ ಗಡುವು ತೆಗೆದುಕೊಂಡಿದ್ದಾರೆ
ಸಕ್ಕರೆ ಸಚಿವರ ಜೊತೆಯಲ್ಲಿ ಡಿಸಿ ಮೊಹಮ್ಮದ್ ರೋಶನ್, ಎಸ್.ಪಿ.ಗುಳೇದ ಇದ್ದರು. ಮೊದಲು ರೈತರನ್ನು ಕ್ಷಮೆಯಾಚಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಎಂಟು ದಿನಗಳಿಂದ ಹೋರಾಟ ಮಾಡುತ್ತಿದ್ದೀರಿ,ಕೇಂದ್ರ ಸರ್ಕಾರ ಮಾಡಿರುವ ತಪ್ಪಿಗೆ ಕ್ಷಮೆ ಕೇಳುತ್ತೇನೆ. ಸಿಟ್ಟಿನ ಕೈಯಲ್ಲಿ ಬುದ್ದಿಕೊಡಬೇಡಿ. ಇದು ನಮಗೂ ಶೋಭೆ ಅಲ್ಲ,ಕೇಂದ್ರಕ್ಕೂ ಸರಿ ಅಲ್ಲ. ಯೋಗ್ಯ ಬೆಲೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮಗೆ ಎರಡು ದಿನ ಅವಕಾಶ ಮಾಡಿಕೊಡಿ. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದನ್ನು ಬಿಟ್ಟು ಬಿಡಿ ಎಂದರು.
ಎರಡು ದಿನದಲ್ಲಿ ನಮಗೆ ಸಿಹಿ ಸುದ್ದಿ ಬರದಿದ್ದರೆ ಮತ್ತೆ ನಾವು ರೈತರು, ಕನ್ನಡ ಪರ ಹೋರಾಟಗಾರು ಹಾಗೂ ಇನ್ನು ಅನೇಕ ಸಂಘಗಳು ಕೂಡಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ರೈತ ಮುಖಂಡು ಸಕ್ಕರೆ ಸಚಿವರಿಗೆ ಹೇಳಿದರು.
ಸರ್ಕಾರದಿಂದ ನಮಗೆ ಒಳ್ಳೆಯ ಸಂದೇಶ ಬರುವವರೆಗೂ ನಮ್ಮ ಹೋರಾಟ ಇರುತ್ತದೆ ಅಂತ ರೈತರು ಸಾಮೂಹಿಕವಾಗಿ ಹೇಳಿದರು. ಸಾನ್ನಿದ್ಯದಲ್ಲಿ ಮುಗಳಖೋಡದ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳು, ರೈತ ಮುಖಂಡರಾದ ಶಶಿಕಾಂತ ಗುರುಜಿ,ಚೂನಪ್ಪ ಪೂಜೇರಿ ಮತ್ತು ಇನ್ನು ಅನೇಕ ಸಾವಿರಾರು ರೈತರು ಭಾಗಿಯಾಗಿದ್ದರು.

