ಬೀದರ: ಬೀದರ ಜಿಲ್ಲೆಯ ಹೊನ್ನೇಕೆರಿ ದೇವಸ್ಥಾನದ ಮುಖ್ಯರಸ್ತೆಯ ಕಮಾನ ಬಳಿ ಸರ್ವಿಸಿಂಗ ಮಾಡಿದ ಕಾರನ್ನು ಮೆಕಾನಿಕ್ ಟ್ರೈಲ್ ಗಾಗಿ ರಸ್ತೆಗೆ ತಂದಿದ್ದಾಗ ಅಗ್ನಿಗೆ ಆಹುತಿಯಾದ ಘಟನೆ ನಡೆದಿದೆ.
ಪ್ರತಿಯೊಂದು ಕಾರು ಸರ್ವಿಸ್ ಆದ ಮೇಲೆ ಕಾರು ಟ್ರಯಲ್ ಮಾಡಿ ಕಾರ ಮಾಲೀಕನ ಕೈಗೆ ಕೀ ಕೊಡುವುದು ವಾಡಿಕೆ. ಆದರೆ ಬೀದರ್ ನಲ್ಲಿ ಒಂದು ಕಾರು ಮೆಕಾನಿಕ್ ಟ್ರಯಲ್ ಮಾಡುವ ಸಂದರ್ಭದಲ್ಲಿ ದುರಂತಕ್ಕೆ ಈಡಾಗಿದೆ.
ಮಷೀನ್ನಲ್ಲಿ ಅವಘಢ ಸಂಭವಿಸಿದ ಕಾರಣ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ದುರಂತದಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ಸ್ಥಳೀಯ ಸಾರ್ವಜನಿಕ ರಿಂದ ಮೂಲಗಳಿಂದ ತಿಳಿದು ಬಂದಿದೆ.
ವರದಿ: ನಂದಕುಮಾರ ಕರಂಜೆ, ಬೀದರ