ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಜಾತಿ ರಾಜಕಾರಣವೇ ಸರ್ವಸ್ವ

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಬೀದರ – ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ತಮ್ಮ ಪ್ರಾಮಾಣಿಕತೆ, ಪಕ್ಷ ನಿಷ್ಠೆ ಮತ್ತು ಸರಳ ಜೀವನಕ್ಕೆ ಹೆಸರಾಗಿದ್ದ ಕಾಂಗ್ರೆಸ್ ಶಾಸಕ ಬಿ ನಾರಾಯಣರಾವ್ ಕೋವಿಡ್ ಬಲಿಯಾದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ.

ಕರ್ನಾಟಕದ ಮೂರೂ ಪ್ರಮುಖ ಪಕ್ಷಗಳು ಈಗಾಗಲೇ ಜಾತಿ ರಾಜಕಾರಣದ ಕೂಪದಲ್ಲಿ ಮಿಂದು ತೇಲುತ್ತಿದ್ದು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರ ಈ ಜಾತಿ ರಾಜಕಾರಣದ ಪ್ರಾತ್ಯಕ್ಷಿಕೆಯಾಗಿಯೇ ಕಾಣುತ್ತಿದೆ.

- Advertisement -

35 ವರ್ಷಗಳ ನಂತರ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಾತಿನಿಧ್ಯ ಒದಗಿಸಿದ್ದ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ನಾರಾಯಣರಾವ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಜೆಡಿಎಸ್‍ನಿಂದ ಸೈಯದ್ ಅಲಿ ಖಾದ್ರಿ, ಬಿಜೆಪಿಯ ಶರಣು ಸಲಗರ ಮತ್ತು ಬಿಜೆಪಿಯಿಂದ ಬಂಡಾಯ ಎದ್ದು ಹೊರಬಂದಿರುವ ಮಲ್ಲಿಕಾರ್ಜುನ ಖೂಬಾ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಮುಸ್ಲಿಂ ಮತಗಳೇ ಹೆಚ್ಚಾಗಿರುವುದರಿಂದ ಬಿಜೆಪಿಯಲ್ಲಿನ ಬಂಡಾಯ ಪಕ್ಷಕ್ಕೆ ಕಂಟಕವಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ.

ಮುಸ್ಲಿಂ ಮತದಾರರಿಗೆ ಆಪ್ತರಾಗಿದ್ದ ನಾರಾಯಣರಾವ್ ಅವರ ಜನಪ್ರಿಯತೆಯೇ ಕಾಂಗ್ರೆಸ್ ಪಕ್ಷದ ಜೀವಾಳವಾಗಿದೆ. ಈ ಮುಸ್ಲಿಂ ಮತದಾರರನ್ನು ಸೆಳೆಯುವ ಉದ್ದೇಶದಿಂದ ಜೆಡಿಎಸ್, ಕಾಂಗ್ರೆಸ್‍ನಿಂದ ಪಕ್ಷಾಂತರ ಮಾಡಿರುವ ಸೈಯದ್ ಖಾದ್ರಿ ಅವರನ್ನು ಕಣಕ್ಕಿಳಿಸಿದೆ. ಈಗ ಚುನಾವಣೆ ಹತ್ತಿರ ಬರುತ್ತಿರುವಂತೆ ಪ್ರಕಾಶ್ ಖಂಡ್ರೆ ಜೆಡಿಎಸ್ ತೊರೆದು ಪುನಃ ಬಿಜೆಪಿ ಸೇರಿರುವುದು ಜೆಡಿಎಸ್ ಪಕ್ಷಕ್ಕೆ ದೊಡ್ಡ ಹೊಡೆತವಾಗಲಿದೆ. ಎಂದಿನಂತೆ ಹಣ ಹೆಂಡ ಚುನಾವಣಾ ಪ್ರಚಾರದಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದು ಎಲ್ಲ ಪಕ್ಷಗಳೂ ಹಣದ ಹೊಳೆ ಹರಿಸುತ್ತಿರುವುದು ಪರಸ್ಪರ ಆರೋಪ ಪ್ರತ್ಯಾರೋಪಗಳಿಂದಲೇ ಸಾಬೀತಾಗುತ್ತದೆ.

ರಾಜ್ಯ ರಾಜಕಾರಣದಲ್ಲಿ ಈ ಕ್ಷೇತ್ರ ಹೆಚ್ಚು ನಿರ್ಣಾಯಕ ಅಥವಾ ಪ್ರತಿಷ್ಠಿತ ಅಲ್ಲದೆ ಹೋದರೂ ಕಾಂಗ್ರೆಸ್ ಪಡೆದಿದ್ದ ಸ್ಥಾನವನ್ನು ಕಸಿದುಕೊಳ್ಳಲು ಬಿಜೆಪಿ ಶತಾಯಗತಾಯ ಯತ್ನಿಸುತ್ತಿದೆ.

ಜೆಡಿಎಸ್ ತನ್ನ ಪ್ರಭಾವವನ್ನು ವಿಸ್ತರಿಸಲು ಈ ಚುನಾವಣೆಗಳ ಮೇಲೆ ಕಣ್ಣಿರಿಸಿದೆ. ಅನುಕಂಪದ ಮತಗಳನ್ನೇ ಅವಲಂಬಿಸಿರುವ ಕಾಂಗ್ರೆಸ್, ಲಿಂಗಾಯತ ಮತಗಳನ್ನೇ ನೆಚ್ಚಿಕೊಂಡಿರುವ ಬಿಜೆಪಿ ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಮತಗಳನ್ನೇ ನಂಬಿರುವ ಜೆಡಿಎಸ್ ಚುನಾವಣಾ ಕಣವನ್ನು ಅಕ್ಷರಶಃ ಜಾತಿ ರಾಜಕಾರಣದ ಕೂಪವನ್ನಾಗಿ ಮಾಡಿರುವುದಂತೂ ಸತ್ಯ.ಬಸವಣ್ಣನವರು ನಡೆದು ಆಡಿದ ಬಸವಕಲ್ಯಾಣ ಯಾರ ಪಾಲಿಗೆ ಕಲ್ಯಾಣ ನಾಡು ಮಾಡುವ ಅಭ್ಯರ್ಥಿ ಗೆ ಆಯ್ಕೆ ಮಾಡುತ್ತಾರೆ ಎಂಬುದು ಬಸವಕಲ್ಯಾಣ ಮತದಾರರು ಕೈಯಲ್ಲಿ ಇದೆ.ಯಾರು ಜಯಗಳಿಸಿ ಬಸವಕಲ್ಯಾಣ ತನ್ನ ತೆಕ್ಕೆಗೆ ತೆಗೆದುಕೊಂಡು ಅಭಿವೃದ್ಧಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!