ಕವನ

ಕವನ: ಕರ್ಮದ ಧರ್ಮ

ಕರ್ಮದ ಧರ್ಮ (ಹನುಮನಿಗೆ ಒಂದು ದಿನ ಬಹಳ ಹೊಟ್ಟೆ ಹಸಿದಿತ್ತು.ಗವಿಯಲ್ಲಿ ತಿನ್ನಲು ಏನೂ ಇದ್ದಿರಲಿಲ್ಲ.ಆತ ಹೊರಗೆ ಬಂದು ಅತ್ತ ಇತ್ತ ನೋಡಿದ.ಅಲ್ಲೂ ಏನೂ ಸಿಗಲಿಲ್ಲ.ಮೂಡಣದತ್ತ ಮುಖ ಮಾಡಿದಾಗ ಉದಯಿಸುತ್ತಿರುವ ಸೂರ್ಯ ಹಣ್ಣಿನಂತೆ ಕಂಡನು.ಹಸಿದ ಹನುಮನು ಸಂತಸಗೊಂಡು ಬಾನಿಗೆ ನೆಗೆದನು. ಸೂರ್ಯನನ್ನು ತಿನ್ನಲು ಹೋದ ಹನುಮ ಇಂದ್ರನ ವಜ್ರಾಯುಧಕ್ಕೆ ಮೂಗು ಘಾಸಿಸಿಕೊಂಡು ಬಂದನು. ಹನುಮ ದೇವ ಶೌರ್ಯ ವರ್ಮನ...

ಕವನ: ಗಾಂಧಿ ಸ್ಮರಣೆ

ಗಾಂಧಿ ಸ್ಮರಣೆ  ಗಾಂಧಿ ತಾತಾ ನೀವೊಬ್ಬ  ನನ್ನ ಕಣ್ಣಿನ ಮಾಯಪ್ರಪಂಚ ಇದ್ದಂಗ ನಿನ್ನ ನೋಡಿದ್ರ ಸಾಕ  ನನ್ನ ಎದ್ಯಾಗಿನ ನೋವು ಎಲ್ಲಾ ಮರಿತೀನಿ  ನಮ್ಮ ದೇಶಾದಾಗ ಹುಟ್ಟಿ  ಪರದೇಶದ ಮಂದಿ ಕಷ್ಟಾನ ನನ್ನ ಕಷ್ಟಾ ಅಂತ ಹೇಳಿ ಅವರ ಬದುಕು ಹಸನು ಮಾಡಿಯಲ್ಲೋ ತಾತ  ನಿನ್ನ ಬದುಕಾರ ಹೆಂಗೈತಿ ಅಂತಾ ನೋಡಿದ್ರ  ತೆರೆದಿಟ್ಟ ಪುಸ್ತಕ  ಬಿತ್ತಿ ನಿಂತ ಹೊಲ  ಒಳಗಿರೋದೆಲ್ಲಾ ಕಾಣೋ ಗಾಜಿದ್ದಂಗ  ಹೀಂಗ ಇರಾಕ ಸಾಧ್ಯಾನಾ ಅಂತನಸತೈತಿ  ಊರ ಉಸಾಬರಿ...

ಮರೆಯಲಾಗದ ಮಹಾನುಭಾವರು

ಮರೆಯಲಾಗದ ಮಹಾನುಭಾವರು ಬದುಕಿನ ಭವಣೆಯ ಮೀರಿ ನಿಂತ ಮಹಾನುಭಾವ ತಲ್ಲೂರ ರಾಯನಗೌಡರು ನೆನಪು ಮತ್ತೆ ಮತ್ತೆ ಬರುತಿದೆ ಸ್ವಾತಂತ್ರ್ಯ ಸಮಾಜವಾದಿಗಳ ನೆನಪಿನೊಳಗೆ ಚಿತ್ತಿ ನಕ್ಷತ್ರ ನಾಲ್ಕನೆಯ ಚರಣ ಪೆಬ್ರುವರಿ ೨೮. ೧೯೧೦  ಧರೆಯೊಳು ತಲ್ಲೂರ ಗ್ರಾಮದ ಶರಣ ದಂಪತಿ ಲಿಂಗನಗೌಡ-ಬಸಮ್ಮ ಉದರದೊಳು ಮೂಡಿದ ನಕ್ಷತ್ರವಿದು ಬಾಲ್ಯದೊಳು ತಾಯಿಯ ಅಗಲಿಕೆಯ ನೋವು ಉಂಡು ಅಜ್ಜಿಯ ಆಶ್ರಯದಿ ಬೆಳೆಯುತಲಿ ಶಿಕ್ಷಣ ಪಡೆಯಿತು ಸ್ವಾತಂತ್ರ್ಯದ ದಿನಗಳಲಿ ಮಹಾತ್ಮಾ ಗಾಂಧೀಜಿಯವರ ಪ್ರಭಾವ ವಲಯದಿ ಉಕ್ಕುತ  ಸ್ವಾತಂತ್ರ್ಯ ಹೋರಾಟದ ಕಿಚ್ಚು ಎಲ್.ಎಲ್.ಬಿ.ಕಲಿಕೆಯ ತಿಲಾಂಜಲಿ ದುಮ್ಮಿಕ್ಕಿ ಸ್ವಾತಂತ್ರ್ಯ...

ಕವನ: ಶರಣು ಗುರುವೆ ಶರಣು

ಶರಣು ಗುರುವೆ ಶರಣು ಕರುಣಾಮಯಿ ತಂದೆ ಗುರುವೆ ಕರಮುಗಿಯುವೆ ಶರಣು ಗುರುವೆ ಶರಣು ಕಾನನದಿ ಅಲೆವಂಗೆ ಕಾಣದೇ ಗುರುವಾದವಗೆ ಶರಣು ಕಿನ್ನರರ ಕಿತಾಪತಿಗಳ ಸಹಿಸಿ ದಹಿಸಿದ ಕಿರಣ ಸ್ವರೂಪಿ ಗುರುವೆ ಶರಣು ಕೀಟಲೆಗಳ ಬದಿಗೊತ್ತಿ ಕೀರ್ತಿ ತರುವಂತೆ ಬೆಳಸಿದ ತಮಗೆ ಶರಣು ಕುಣಿಸಿ ನಲಿಸಿ ಕಲಿಸುತ ಕುಶಲಮತಿಗಳಾಗಿಸಿದಾತಗೆ ಶರಣು ಕೂಡಿ ಬಾಳುವ  ನೀತಿ ಕೂಡಿ ನಲಿಯುವ ರೀತಿ ಕಲಿಸಿದಾತಗೆ ಶರಣು ಕೆಸರಿನಲ್ಲಿರುವ ಕಮಲದಂತೆ  ಕೆಸರಿನಲ್ಲಿರುವ ಎರೆಹುಳುವಿನಂತೆ ಬಾಳೆಂದಾತಗೆ ಶರಣು ಕೇದಿಗೆಯ ಘಮಲು ಹೊತ್ತ ಕೇವಿಗೆಯ ಹೊಳಪುಳ್ಳವಗೆ ಶರಣು ಕೈ...

ರಕ್ಷಾ ಬಂಧನ ಕವನ: ಮೆಲುಕು

ಮೆಲುಕು ಬೆಳ್ಳಂ ಬೆಳ್ಗೆ ಅವ್ವನ ಕೂಗು ಕೇಳಿದ್ರೂ ಕೇಳದಂತೆ ಮಲ್ಗೋದು ಇತ್ತ ನಾನುನೂ  ಕಿರುಚಿದೆ ಅವ್ವ ಕರಿತೈತೆ ಎದ್ದೇಳಣ್ಣಯ್ಯ ಜಳಕಾ ಮಾಡಿ ಮಡಿಉಟ್ಕೊ ರಾಕಿ ಕಟ್ಟಸ್ಕೊ ಹಬ್ಬಾ ಐತಿ ಸೋಂಬೇರಿ ಸೋಮಾರಿ ನೀ ಹೊರ್ಗ ಹೋಗಬ್ಯಾಡಾ ಅಣ್ಣಯ್ಯ ಮತ್ತದೇ ಜಗಳಾ ಜಡೆ ಎಳೆದು ರಿಬ್ಬನ್ ಜಗ್ಗಿ ನೂಕಿ ಓಡೋದು ಅವ್ವನ ದನಿಗೆ ಮುದುಡಿಕೊಳ್ಳುವ ಮುದ್ದು ಪೆದ್ದು ಅಣ್ಣಯ್ಯ ರಾಕಿ ಕಟ್ಟಿ ಸಕ್ಕರೆ ಬದಲು  ಉಪ್ಪು ತಿನಿಸಿ ಗೋಳಾಡಿಸಿ ತಲೆಗೂದಲ ಜಗ್ಗಿ ತಿವಿದು ಓಡಿದ ನೆನಪು ಮಾಸಿಲ್ಲ ಅಣ್ಣಯ್ಯ ಅಪ್ಪಂಗೆ...

ಭಾರತೀಯರ ಹಬ್ಬ

ಭಾರತೀಯರ ಹಬ್ಬ ಮರೆಯದಿರಿ ಭಾರತದ, ಪ್ರಜೆಗಳೇ ಸ್ವಾತಂತ್ರ್ಯವ, ತಂದಕೊಟ್ಟವರ ಕಹಳೆ ತ್ಯಾಗ ಬಲಿದಾನದ ವೀರರವರು ಅಮರರಾಗಿ ಕೈಗಿತ್ತರು ದೇಶದ ತೇರು ವ್ಯರ್ಥವಾಗದಿರಲಿ, ವೀರರ ಹನಿಹನಿ ರಕ್ತ ಸಂಕೋಲೆಯಿಂದ ನಮ್ಮ, ದೇಶವಾದ ಮುಕ್ತ ಸ್ವಾತಂತ್ರ್ಯಕೆ ಹೋರಾಡಿದ ದೇಶ ಭಕ್ತರವರು  ‌ಅವರ ದಿಟ್ಟ ಹೆಜ್ಜೆಯೇ ನಮಗಾದ ಉಸಿರು ಶಾಂತಿ ಅಹಿಂಸೆಯವ ಅವರೇರಿದ ಮೆಟ್ಟಿಲು ಈ ದಿನತೂಗುತಿವೆ, ಭಾರತದ ಮನೆತೊಟ್ಟಿಲು ೧೫ ಅಗಷ್ಟ ನಮ್ಮೆಲ್ಲರ, ಹರ್ಷತುಂಬಿದ ಹಬ್ಬ ಭಾರತೀಯರ ಸಹನೆಗೆ ಬ್ರಿಟಿಷರಾದರು ಸ್ತಬ್ಧ  ಅಖಂಡ ಭಾರತಕೆ ಪಣತೊಟ್ಟ...

ಮಕ್ಕಳ ಕವಿತೆ

ಮಕ್ಕಳ ಕವಿತೆ ಒಂದು ಎರಡು ತಿನ್ನಲು ಬೇಕು ಲಡ್ಡು ಮೂರು ನಾಲ್ಕು ಇಡ್ಲಿ ಚಟ್ನಿ ಸಾಕು ಐದು ಆರು ತಿಳಿ ಬದುಕಿನ ಸಾರ ಏಳು ಎಂಟು ಶ್ರಮದೊಂದಿಗೆ ನಂಟು ಒಂಬತ್ತು ಹತ್ತು ಯಶದ ಮೆಟ್ಟಿಲು ಹತ್ತು ಲೀಲಾ ರಜಪೂತ ಹುಕ್ಕೇರಿ

ಕವನ: ಪ್ರೇಮಾಂತರಂಗ

ಪ್ರೇಮಾಂತರಂಗ ನಿನ್ನ ಸೆಳೆತ ಕಲಾತ್ಮಕ ಸಂವೇದನೆ ಬಯಸಬಹುದು ಎನಿಸಿರಲಿಲ್ಲ ನಿನ್ನ ನಾ ಅಂದು ಆದರೂ ನಿನ್ನ ನುಡಿಗಳಲ್ಲೇನೋ ಸೆಳೆತ ಸೌಂದರ್ಯ ಕಪ್ಪು ಬಿಳುಪಿನಲ್ಲಿಲ್ಲ ಸುಂದರವಾದ ಆಲೋಚನೆ, ಸುಂದರವಾದ ಕ್ರಿಯೆ,  ಭೌತಿಕವು ದೈವಿಕತೆಯ ಕುರುಹು ಬರೀ ಭ್ರಾಂತಿ ಇರದ ಲೋಕ ಬೇಕುಬೇಡಗಳ ಪೂರೈಸುವ ಬಂಧನ ಹೃದಯಾಂತರದ ಮಿಡಿತ ಬಾಹ್ಯ ಕಣ್ಣು ನೋಡದ ಆಂತರಿಕ ಸ್ಪಂದನೆ ಬರೀ ಮಾತುಗಳು ಮನೆ ಕಟ್ಟಲಾಗದ ಸ್ಥಿತಿ ಆತ್ಮ ಮತ್ತು ಆತ್ಮಗಳ ಮಿಲನ ಸ್ಥಿತಿ ಮೇಲ್ಮೈ ದೃಷ್ಟಿಗೆ ಗೋಚರಿಸದ ಆಂತರ್ಯ ಎರಡು ಜೀವಗಳ ಮನದಾಳದ...

ಕವನ: ನಾ ನಿನಗೆ- ನೀ ನನಗೆ

ನಾ ನಿನಗೆ- ನೀ  ನನಗೆ ಎಲ್ಲೋ ಹುಟ್ಟಿ ಎಲ್ಲಿಯೋ ಹರಿದು ನದಿ ಸಾಗರವ ಸೇರುವ ಹಾಗೆ ಎಲ್ಲಿಯೋ ಇರುವ ನಾವು ಪ್ರೀತಿಯ ಅಲೆಯಲ್ಲಿ ಸೇರಿ ಭಾವನಾತ್ಮಕ ಬಂಧದಲ್ಲಿ ಜೀವನ ಕಳೆಯುತಿರುವೆವು ನಿನಗೆ ಅಲ್ಲಿ ನೋವಾದರೆ ನನಗೆ ಇಲ್ಲಿ ವ್ಯಥೆ ಹೇಗೆ ನಿನ್ನ ಸಲುಹಲಿ  ಚಿಂತೆ ಕಾಡುತಲಿ ನೋವ ಅನುಭವಿಸುತಿರುವೆ ಹೃದಯವು ಅಷ್ಟು ಹಚ್ಚಿಕೊಂಡಿದೆ ನಿನ್ನ ನಾನು ನನ್ನದೆಂಬ ಭಾವಗಳ ಸೆಳೆತ ಬಂಧಿಸಿಹುದು ಪ್ರೀತಿಯಲಿ ನಮ್ಮನು ಬಿಟ್ಟೆನೆಂದರೂ ಬಿಡದೀ ಬೇಗುದಿಯ ಛಾಯೆ. ಪ್ರೀತಿ ಯೆಂದರೆ ಹೀಗೇನೇ ಬಿಡದ ನಂಟನು ಮೂಡಿಸಿಹುದು ಪ್ರೀತಿ ಪ್ರೇಮಕೆ...

ಕವನ: ತುಂತುರು ಮಳೆ

  ತುಂತುರು ಮಳೆ ವರುಣನಾಗಮನದಿ ಭುವಿಗೆ ಕಳೆ ಬಾಣಂಚಿನ ಮಡಿಲಿನಿಂದ  ಜಾರಿ  ಭೂಮಾತೆಯ ಒಡಲ ಸೇರಿ  ತಂಪೆರಗಿತು ಸುತ್ತಲೂ ಹರಡಿ ಮೈ ಜಾಡಿಸುವ ಗುಬ್ಬಚ್ಚಿಗಳು ಗರಿಗೆದರುವ ಸುಂದರ ನವಿಲುಗಳು  ಎಲೆಗಳಿಂದ ಜಾರುವ ನೀರ ಬಿಂದುಗಳು  ಆ ಬಿಂದುಗಳ ಹೊತ್ತು ನಿಂತ ಸುಮಗಳು ತಂಪಾದ ಗಾಳಿಯ ಇಂಪಿನ ಒಡನಾಟ  ಗಾಳಿಯಲ್ಲಿ ತುಂತುರು ಹನಿಗಳ ಚೆಲ್ಲಾಟ  ರೋಮಾಂಚನಗೊಳಿಸುವ ವಾತಾವರಣ  ಮುಂಗಾರಿನ ಮಳೆಯ ಈ ಸಂಚಲನ ಸದ್ದು ಗದ್ದಲಗಳಿಗೆ ಕೊಂಚ ವಿರಾಮ  ಸಂಚಾರ ವಿಹಾರಕ್ಕೆ ಹಾಕುವ ಕಡಿವಾಣ ತುಂತುರು ಮಳೆಯ ಆಸ್ವಾದಿಸೋಣ ಮಳೆ...
- Advertisement -

Latest News

ಬಿಜೆಪಿ ಕಾರ್ಯಕರ್ತರ ಸಭೆ

ಸಿಂದಗಿ: ಭಾರತೀಯ ಜನತಾ ಪಾರ್ಟಿಯ ಲೋಕಸಭಾ ಚುನಾವಣೆ 2024ರ ಪ್ರಚಾರಾರ್ಥವಾಗಿ ಯಂಕಂಚಿ ಮಹಾಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರ ಸಭೆ ಜರುಗಿತು..ಈ ಸಂದರ್ಭದಲ್ಲಿ ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ...
- Advertisement -
close
error: Content is protected !!
Join WhatsApp Group