spot_img
spot_img

ಸಿಂದಗಿಯಲ್ಲಿ ಸಿಸಿ ಚರಂಡಿ ಕಾಮಗಾರಿ ಕಳಪೆ

Must Read

ಸಿಂದಗಿ: ಪಟ್ಟಣದ ಸೌಂದರ್ಯೀಕರಣದ ಮುಕುಟವಾಗಿರುವ ಕೆಇಬಿಯಿಂದ ಡಾ. ಅಂಬೇಡ್ಕರ ವೃತ್ತದವರೆಗೆ ರೂ 5 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಸಿಸಿ ಚರಂಡಿ ಹಾಗೂ ಡಾಂಬರೀಕರಣ ರಸ್ತೆ ಕಾಮಗಾರಿಯ ಮೊದಲ ಭಾಗವಾಗಿರುವ ಸಿಸಿ ಚರಂಡಿ ಕಾಮಗಾರಿಯು ಕಳಪೆಮಟ್ಟದಿಂದ ನಡೆಯುತ್ತಿದ್ದರು ಕೂಡಾ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಜಾರಿರುವುದು ಹೊಂದಾಣಿಕೆ ಅಧಿಕಾರ ನಡೆದಿದೆ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ಹೌದು. ಪಟ್ಟಣದ ಸೌಂದರ್ಯೀಕರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಳೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಸಾಕಷ್ಟು ಅನುದಾನ ಹರಿದು ಬಂದಿದ್ದು ಅದನ್ನು ಬಿಜೆಪಿ ಸರಕಾರ ರಚನೆಯಾದ ಬಳಿಕ ಎಲ್ಲ ಅನುದಾನ ಕಾರಣಾಂತರಗಳಿಂದ ಹಿಂಪಡೆಯಲಾಗಿತ್ತು ಅದರಿಂದ ಕಾಮಗಾರಿಗಳು ನಡೆಯದೇ ಕುಂಟಿತಗೊಂಡು ಎಲ್ಲೆಂದರಲ್ಲಿ ಕೊರಕಲು ರಸ್ತೆಗಳಿಂದ ತುಂಬಿ ತುಳುಕುತ್ತಿತ್ತು ಆ ಕೊರಗನ್ನು ಅಳಿಸಿ ಹಾಕಲು ಉಪ ಚುನಾವಣೆಯ ಬಳುವಳಿಯಾಗಿ ವಾಗ್ದಾನ ನೀಡಿದಂತೆ ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸುತ್ತಿದೆ ಮೊದಲ ಹಂತವಾಗಿ ಕೆಇಬಿಯಿಂದ ಡಾ. ಅಂಬೇಡ್ಕರ ವೃತ್ತದವರೆಗೆ ನಡೆಯುತ್ತಿರುವ ರಸ್ತೆಯ ಎರಡು ಬದಿಯಲ್ಲಿ ನಿರ್ಮಿಸುತ್ತಿರುವ ಸಿಸಿ ಚರಂಡಿ ಕಾಮಗಾರಿಯು ರಸ್ತೆಯ ಮಧ್ಯಬಾಗದಿಂದ 15 ಮೀ ರಸ್ತೆ ಹಾಗೂ ಚರಂಡಿ ಆಗಬೇಕು ಆದರೆ ಯಾವುದೇ ಇಂಜಿಯರಗಳ ಸಹಾಯ ಪಡೆಯದೇ ತಾವು ಮಾಡಿದ್ದೇ ಮಾರ್ಗ ಎನ್ನುವಂತೆ ಗುತ್ತಿಗೆದಾರರು ಕೂಲಿ ಕಾರ್ಮಿಕರ ಮೂಲಕ ಅಳತೆಯ ದಂಡಗೋಲು ಹಿಡಿದಲ್ಲೆ ಮಧ್ಯಬಾಗ ಎನ್ನುವಂತೆ ಅಳತೆ ಹಾಕಿ ಯಾವ ಕಡೆ ನೀರು ಹರಿದುಹೋಗಬೇಕೋ ಆ ಕಡೆಗೆ ತತ್ರಾಂಶ ಹಿಡಿಯದೇ ಯಾವುದೇ ನಿಯಮ ಪಾಲಿಸದೇ ಮನಬಂದಂತೆ ರಾತ್ರೋ ರಾತ್ರಿ ಕಾಮಗಾರಿ ಮುಗಿಸಿ ಕೈ ತೊಳೆದುಕೊಳ್ಳಬೇಕೆನ್ನುವ ಹುನ್ನಾರಕ್ಕೆ ಕೈ ಹಾಕಿದ್ದಾರೆ ಇದಕ್ಕೆ ಅಧಿಕಾರಿಗಳು ಸಾಥ ನೀಡುತ್ತಿದ್ದಾರೆ ಎನ್ನುವುದಕ್ಕೆ ಕಾಮಗಾರಿ ನಡೆದು ಸುಮಾರು 15 ದಿನಗಳು ಕಳೆಯುತ್ತಿದ್ದರು ಇನ್ನೂವರೆಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡದಿರುವುದನ್ನು ನೋಡಿದರೆ ಅಧಿಕಾರಿಗಳ ಹೊಂದಾಣಿಕೆ ಇರಬಹುದು ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಬಹುದಾಗಿದೆ.


ಪಟ್ಟಣದ ಸೌಂದರ್ಯೀಕರಣದ ಕನಸು ಕಂಡ ದಿ.ಎಂ.ಸಿ.ಮನಗೂಳಿ ಅವರು ಕಳೆದ ಸಮ್ಮಿಶ್ರ ಸರಕಾರದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಕಷ್ಟು ಅನುದಾನ ತಂದಿದ್ದಾರೆ ಅವರು ಗತಿಸಿಹೋದ ಕಾಲದಲ್ಲಿ ಅವರ   ಕನಸಿಗೆ ಎಳ್ಳು ನೀರು ಎರಚುವಂತೆ ಕಳಪೆ ಕಾಮಗಾರಿಗಳನ್ನು ಕೈಕೊಂಡು ಅನುದಾನವೆಲ್ಲ ಪೋಲಾಗಿ ಹೋಗಿ ಅವರ ಹೆಸರಿಗೆ ಗಾಸಿ ತರುವಂತಾಗುತ್ತಿದೆ.

ಷಣ್ಮುಖಯ್ಯ ಹಿರೇಮಠ
ಸಾಮಾಜಿಕ ಕಾರ್ಯಕರ್ತ, ಯಂಕಂಚಿ


ಪಟ್ಟಣದ ಕೆಇಬಿಯಿಂದ ಡಾ. ಅಂಬೆಡ್ಕರ ವೃತ್ತದವರೆಗೆ ರೂ 5 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಸುಧಾರಣೆ ಕಾಮಗಾರಿ ಮೊದಲ ಭಾಗವಾಗಿ ಸಿಸಿ ಚರಂಡಿ ಕಾಮಗಾರಿ ನಡೆದಿದ್ದು ಅದು ಎನ್.ವ್ಹಿ.ಕುಲಕರ್ಣಿ ಗುತ್ತಿಗೆದಾರರು ಕಾಮಗಾರಿ ನಡೆಸುತ್ತಿದ್ದು ಅದರ ನಿರ್ವಹಣೆಗೆ ನಾಗರಾಜ ಆಚಾರ್ಯ ಅಭಿಯಂತರರು ಇದ್ದು ಕಳಪೆಮಟ್ಟದಿಂದ ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕಿಲ್ಲ ಅದನ್ನು ಸರಕಾರದ ನಿಯಮದಂತೆ ಕಾಮಗಾರಿ ಕೈಗೊಳ್ಳುವಂತೆ ಸೂಚಿಸುತ್ತೇನೆ.


ತಾರಾನಾಥ ನಾಯಕ
ಎಇಇ
ಲೋಕೋಪಯೋಗಿ ಇಲಾಖೆ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!