ಬೆಂಗಳೂರು – ಸಿಡಿ ಯುವತಿಯ ಆರೋಗ್ಯ ತಪಾಸಣೆಗೆ ನಗರದ ಬೌರಿಂಗ್ ಆಸ್ಪತ್ರೆಗೆ ಕರೆ ತಂದ ಹಿನ್ನೆಲೆಯಲ್ಲಿ ಹೊರ ರೋಗಿಗಳು ಬೇಗನೆ ಚಿಕಿತ್ಸೆ ಸಿಗದೆ ಪರದಾಡಿದ ಪ್ರಕರಣ ನಡೆದಿದೆ.
ಆಕೆಗೆ ಕೋವಿಡ್ ಟೆಸ್ಟ್ ಹಾಗೂ ಆಂಟಿಜೆನ್ ಟೆಸ್ಟ್ ಮಾಡಿದ್ದು ಅದು ನೆಗೆಟಿವ್ ಬಂದಿದ್ದು ಇನ್ನುಳಿದ ಕೆಲವು ವೈದ್ಯಕೀಯ ತಪಾಸಣೆ ಕೈಗೊಳ್ಳುವ ಸಲುವಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು ಹೀಗಾಗಿ ಬೌರಿಂಗ್ ಆಸ್ಪತ್ರೆಗೆ ಬಂದಿದ್ದ ಹೊರರೋಗಿಗಳಿಗೆ ತುರ್ತು ಸಿಗದೆ ಪರದಾಡುವಂತಾಯಿತು.