spot_img
spot_img

ಅಹಿತಕರ ಘಟನೆಗೆ ಆಸ್ಪದ ಕೊಡದೆ ಬಕ್ರೀದ ಹಬ್ಬ ಆಚರಿಸಿ – ಸಿಪಿಐ ಶ್ರೀಶೈಲ್ ಬ್ಯಾಕೂಡ

Must Read

spot_img

ಮೂಡಲಗಿ: ಯಾವುದೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಕಾನೂನು ಪಾಲನೆಯೊಂದಿಗೆ ಬಕ್ರೀದ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸುವಂತೆ ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೂಡ ಹೇಳಿದರು.

ಗುರುವಾರ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಬಕ್ರೀದ ಹಬ್ಬದ ಶಾಂತಿ ಸಭೆಯಲ್ಲಿ ಅವರು ಸರ್ವಧರ್ಮಗಳ ನಾಗರಿಕರನ್ನುದ್ದೇಶಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶಿಲ್ದಾರ ಡಿ ಜಿ ಮಹಾತ್ ಮಾತನಾಡಿ, ಪಟ್ಟಣ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು ಜುಲೈ 10 ರಂದು ಆಚರಿಸುವ ಬಕ್ರೀದ ಹಬ್ಬವನ್ನು ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಹೇಳಿದರು.

ಸರ್ಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಣೆ ಹಾಗೂ ಕಾನೂನು ಪಾಲನೆ ಎಲ್ಲರ ಹೊಣೆಯಾಗಿದ್ದು ಪರಸ್ಪರರು ಸಹೋದರತೆಯಿಂದ ಬಕ್ರೀದ ಆಚರಿಸಬೇಕೆಂದು ಹೇಳಿದರು.

ಪಶು ವೈದ್ಯಾಧಿಕಾರಿ ಬಿ ಎಸ್ ಗೌಡರ ಸರ್ಕಾರದ ನಿಯಮಾವಳಿಗಳನ್ನು ವಿವರಿಸಿ ಮಾತನಾಡಿದರು.

ಪಿಎಸ್‍ಐ ಎಚ್ ವೈ ಬಾಲದಂಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ವಂದಿಸಿದರು.

ತಾಲೂಕಾ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರಾದ ಎಮ್ ಬಿ ವಿಭೂತಿ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಶಿಕ್ಷಣ ಸಂಯೋಜಕರಾದ ಸತೀಶ ಬಿ ಎಸ್ ವೇದಿಕೆಯಲ್ಲಿದ್ದರು.

ಮುಖಂಡರಾದ ಹಸನಸಾಬ ಮುಗುಟಖಾನ, ರವೀಂದ್ರ ಸಣ್ಣಕ್ಕಿ, ಅಜೀಜ ಡಾಂಗೆ, ಮಲೀಕ ಕಳ್ಳಿಮನಿ, ಮಲೀಕ ಹುಣಶ್ಯಾಳ, ಇರ್ಶಾದ ಪೀರಜಾದೆ, ಸುರೇಶ ಸಣ್ಣಕ್ಕಿ, ಇಮಾಮಹುಸೇನ ಮುಲ್ಲಾ, ಸಲೀಂ ಇನಾಮದಾರ, ಲಾಲಸಾಬ ಸಿದ್ದಾಪೂರ, ಮಲೀಕಸಾಬ ಪಾಶ್ಚಾಪೂರ, ಹುಸೇನಸಾಬ ತುಂಬಗಿ, ಶಕೀಲ ಬೇಪಾರಿ ಸೇರಿದಂತೆ ಮುಸ್ಲಿಂ ಸಮಾಜದ ಅನೇಕ ಮುಖಂಡರು ಇದ್ದರು.

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!