spot_img
spot_img

ಅಹಿತಕರ ಘಟನೆ ಸಂಭವಿಸದಂತೆ ಗಣೇಶ ಹಬ್ಬ ಆಚರಿಸಿ – ಡಿವೈಎಸ್ಪಿ ಚಂದ್ರಕಾಂತ

Must Read

ಸಿಂದಗಿ: ಗಣೇಶ ಹಬ್ಬದಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಮುನ್ನಚ್ಚರಿಕೆ ಕ್ರಮಕೊಳ್ಳಬೇಕಲ್ಲದೆ. ಸರಕಾರದ ಎಲ್ಲ ಆದೇಶಗಳನ್ನು ತಪ್ಪದೆ ಪಾಲಿಸಿ ಶಾಂತಿಯುತವಾಗಿ ಆಚರಿಸಬೇಕು ಅಹಿತಕರ ಘಟನೆ ಸಂಭವಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು  ಇಂಡಿ ಡಿವೈಎಸ್‍ಪಿ ಚಂದ್ರಕಾತ ನಂದರೆಡ್ಡಿ ಖಡಕ್ ವಾರ್ನಿಂಗ್ ನೀಡಿದರು.

ಪಟ್ಟಣದ ಪೊಲಿಸ್ ಠಾಣಾ ಆವರಣದಲ್ಲಿ ಗಣೇಶ ಉತ್ಸವ ನಿಮಿತ್ತ ಹಮ್ಮಿಕೊಂಡ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿ, ಅನುಮತಿ ಇತರ ಇಲಾಖೆಗಳಿಂದ ಪಡೆಯಬೇಕು ಹಾಗೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸಬಾರದು. ಪಟ್ಟಣದಲ್ಲಿ 4 ಕಡೆಯಲ್ಲಿರುವ ಸಿಸಿ ಕ್ಯಾಮರಾಗಳನ್ನು ಪೊಲೀಸ ಇಲಾಖೆಯಿಂದ ಅಳವಡಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರಪ್ಪ ಗಡೇದ ಮಾತನಾಡಿ, ಪುರಸಭೆ ವಾರ್ಡಗಳಲ್ಲಿ ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ಅಡಚಣೆಯಾಗದ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು. ಪ್ರತಿದಿನ ಪೂಜಾ ಸಮಯದಲ್ಲಿ ಹೆಚ್ಚಿನ ಧ್ವನಿವರ್ಧಕ ಹಚ್ಚಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸುವ ಸಂಘಟನೆಗಳು ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಲ್ಲದೆ ಶಾಂತಿಯತ ವಾತಾವರಣಕ್ಕೆ ಸಹಕರಿಸಬೇಕು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿ ಎಂದು ತಿಳಿಸಿದರು.

ತಹಶೀಲ್ದಾರ ನಿಂಗಣ್ಣ ಬಿರಾದಾರ ಮಾತನಾಡಿ, ಆಗಸ್ಟ್ 31ರಂದು ಗಣೇಶೋತ್ಸವವನ್ನು ಆಚರಿಸುವಾಗ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಬೇಡಿ. ಗಣೇಶನ ಪ್ರತಿಷ್ಠಾಪನೆ ಮಾಡುವ ವಿವಿಧ ಸಮಾಜದವರು ಪೊಲೀಸ್ ಇಲಾಖೆ ಸೂಚಿಸುವ ಮಾಹಿತಿಯನ್ನು ತಿಳಿದುಕೊಂಡು ಅದಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಅನುಮತಿ ಪಡೆದು ಗಣೇಶನನ್ನು ಪ್ರತಿಷ್ಠಾಪಿಸಬೇಕು. ವಿಸರ್ಜನೆಯ ಮಾರ್ಗವನ್ನು ವಿವೇಕಾನಂದ ವೃತ್ತದಿಂದ ಜಗದ್ಗುರು ತೊಂಟದಾರ್ಯ ಸ್ವಾಮಿ ರಸ್ತೆ ಟಿಪ್ಪು ಸುಲ್ತಾನ ವೃತ್ತದ ವರೆಗೆ ನಿಷೇಧಿಸಲಾಗಿದೆ. ಇಲಾಖಾ ಅಧಿಕಾರಿಗಳು ಎಲ್ಲ ಸ್ಥಳಗಳಿಗೆ ಬೇಟಿ ನೀಡಲು ಸಾಧ್ಯವಿಲ್ಲ ಕಾರಣ ಮಂಡಳಿಯವರೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ ಇಲಾಖೆಗೆ ಸಹಕರಿಸಬೇಕು ಎಂದರು

ಸಿಪಿಐ ರವಿ ಉಕ್ಕುಂದ ಮಾತನಾಡಿ, ಹಬ್ಬವನ್ನು ಸರಳ ಮತ್ತು ಶಾಂತಿಯಿಂದ ಆಚರಿಸಬೇಕು. ಮಂಡಳಿ ಸದಸ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಒಂದೇ ಬಾರಿಗೆ ಎಲ್ಲ ಸೌಲಭ್ಯಗಳು ದೊರಕಿಸಿಕೊಡುವ ನಿಟ್ಟಿನಲ್ಲಿ ಏಕಗವಾಕ್ಷಿ ಮಾಡಲಾಗಿದೆ ಪುರಸಭೆ ವತಿಯಿಂದ ಬಾಡಿಗೆ ರೂಪದಲ್ಲಿ ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ ಆಯಾ ಮಂಡಳಿಯು ಕೂಡಾ ಒಂದು ಸಿಸಿ ಕ್ಯಾಮರಾ ಅಳವಡಿಸಿದರೆ ಶಾಂತತೆ ಕಾಪಾಡಲು ಸಹಕರಿಸಿದಂತಾಗುತ್ತದೆ  ಬಸ್ ಡಿಪೋ ಹಿಂದುಗಡೆ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ ಕಾರಣ ಎಲ್ಲ ಮಂಡಳಿಯ ಯುವಕರು ಸ್ವಯಂ ಸೇವಕರ ಹಾಗೆ ಪೊಲೀಸ ಇಲಾಖೆಯ ಜೊತೆಗೆ ಸಹಕರಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗೃತಿ ವಹಿಸಬೇಕು. ಅಹಿತಕರ ಘಟನೆಗಳು ನಡೆದರೆ ಅಂಥವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ  ವಿನೋದ ಬಡಗೇರ. ಮಹಿಬೂಬ ಸಿಂದಗಿಕರ, ಸಂತೋಷ ಬಜಂತ್ರಿ, ಅಶೋಕ ಸುಲ್ಪಿ ಮಾತನಾಡಿ, ಮಂಡಳಿಗಳು ನಡೆಸುವ ಮನರಂಜನಾ ಕಾರ್ಯಕ್ರಮಗಳಿಗೆ  ಇಲಾಖೆ ಸಹಕರಿಸಬೇಕು ವಿಸರ್ಜನೆ ಮಾರ್ಗಕ್ಕೆ ಅವಕಾಶ ಕಲ್ಪಿಸಬೇಕು ಈ ಹಬ್ಬಕ್ಕೆ ಜಾತಿ ಭೇದ ಮರೆತು ಸಹಬಾಳ್ವೆಯಿಂದ ಆಚರಿಸುತ್ತೇವೆ  ಎಂದು ಅಭಿಮತ ವ್ಯಕ್ತ ಪಡಿಸಿದರು.

ಪುರಸಭೆ ಮುಖ್ಯಾಧಿಕಾರಿ ರಾಜೇಶ್ವರಿ ತುಂಗಳ, ಕೆಇಬಿ.ಶಾಂತು ಬಿರಾದಾರ. ಲೋಕೋಪಯೋಗಿ ಇಲಾಖೆ ಎಇಇ ತಾರನಾಥ ರಾಠೋಡ್. ಅಗ್ನಿಶಾಮಕ. ಶಿವುಕುಮಾರ, ತಾಪಂ ಅಧಿಕಾರಿ ನಿತ್ಯಾನಂದ ಯಲಗೋಡ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.

ಪಿಎಸ್‍ಐ ನಿಂಗಣ್ಣ ಪೂಜಾರಿ ಸ್ವಾಗತಿಸಿದರು. ಸಿದ್ದು ಬಿರಾದಾರ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!