ಮೂಡಲಗಿ – ಮಹಾ ಮಾರಿ ಕರೋನಾ ಎರಡನೆಯ ಅಲೆಯ ರಭಸವು ತುಂಬಾ ಅಪಾಯಕಾರಿ ಮತ್ತು ಹಾನಿಕಾರಕವಾಗಿದೆ ಉದಾಹರಣೆಗೆ ಒಂದನೆಯ ಮತ್ತು ಎರಡನೆಯ ಮಹಾ ಯುದ್ದದ ನಂತರದ ಸಮಯದಲ್ಲಿ ಬಂದ ರೋಗಗಳ ಎರಡನೆಯ ಅಲೆಯನ್ನು ನಾವು ಅವಲೋಕಿಸಬಹುದು ಎಂದು ಮೂಡಲಗಿ ನೂತನ ಪೊಲೀಸ್ ವೃತ್ತ ನಿರೀಕ್ಷಕ ಸತೀಶ ಕಣ್ಣಮೇಶ್ವರ ಹೇಳಿದರು.
ಬುಧವಾರ ಪೋಲಿಸ ಠಾಣೆಯ ಆವರಣದಲ್ಲಿ ಕರೆದ ಹೋಳಿ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಧಾರ್ಮಿಕವಾಗಿ ಆಚರಿಸುತ್ತಾ ಬಂದ ಪದ್ದತಿಗಳನ್ನು ನಾವು ಮನೆಯಲ್ಲಿ ಕುಟುಂಬ ಸಮೇತ ಹೋಳಿ ಆಚರಿಸಿ ಮಹಾ ಮಾರಿಯಿಂದ ದೂರ ಇರುವುದರ ಜೊತೆಗೆ ಇತರರನ್ನೂ ರೋಗದಿಂದ ಬಚಾವು ಮಾಡಬಹುದು, ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಜರ ಬಳಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಪುರಸಭೆಯ ಅಧ್ಯಕ್ಷ ಹನಮಂತ ಗುಡ್ಲಮನಿ ಮಾತನಾಡಿ, ಹಬ್ಬಗಳನ್ನು ಮನೆಯಲ್ಲಿಯೇ ಆಚರಿಸಿ ಎಲ್ಲರೂ ಆರೋಗ್ಯದಿಂದ ಇರೋಣ ಎಂದರು.
ದಲಿತ ಮುಖಂಡ ರಮೇಶ ಸಣ್ಣಕಿ ಮಾತನಾಡಿ, ಹಬ್ಬಗಳನ್ನು ಮೂಡಲಗಿಯ ಎಲ್ಲಾ ಸಮುದಾಯದವರು ಶಾಂತಿ ಸೌಹಾರ್ದ ದಿಂದ ಆಚರಿಸುತ್ತಾ ಬರುತ್ತಿದ್ದೇವೆ ಆದರೂ ಈ ಸಾರಿ ಮತ್ತು ಕಳೆದ ಸಾರಿಯ ಹೋಳಿ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸಲಹೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ರಾಮಪ್ಪ ಹಂದಿಗುಂದ ಮಾತನಾಡಿ, ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುವ ಬದಲು ಸರಳ ಮತ್ತು ಕುಟುಂಬದಲ್ಲಿ ಆಚರಿಸಿದರೆ ಅದಕ್ಕೆ ಹೆಚ್ಚು ಪ್ರಾಧ್ಯಾನ್ಯತೆ ಬರುತ್ತದೆ, ಮಹಾ ಮಾರಿ ದೇಶದಿಂದ ತೂಲಗಿದ ನಂತರ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸೋಣ ಎಂದರು.
ಮೂಡಲಗಿ ಪೋಲಿಸ ಠಾಣೆಯ ಪಿ ಎಸ್ ಐ ಹಾಲಪ್ಪ ಬಾಲದಂಡಿ ಸ್ವಾಗತಿಸಿ, ಕಳೆದ ವರ್ಷದಿಂದ ಮಹಾ ಮಾರಿಯ ಕೊರೊನಾದಿಂದ ದೇಶ ಅಲ್ಲೊಲ ಕಲ್ಲೋಲವಾಗಿದೆ ಹಬ್ಬಗಳನ್ನು ಸರಳ ಮತ್ತು ಶಾಂತಿಯಿಂದ ಮನೆ ಮನೆಗಳಲ್ಲಿಯೇ ಆಚರಿಸಿ ಮತ್ತು ರೋಗದಿಂದ ದೂರ ಇರಿ ಎಂದರು.
ಪುರಸಭೆಯ ಸದಸ್ಯರಾದ ಸಂತೋಷ ಸೋನವಾಲ್ಕರ, ಗಪಾರ ಡಾಂಗೆ, ಅನಂದ ಟಪಾಲದಾರ ಹಾಗೂ ಅನ್ವರ ನದಾಪ, ದಲಿತ ಮುಖಂಡರಾದ ಶಾಬು ಸಣ್ಣಕ್ಕಿ, ವಿಲಾಸ ಸಣ್ಣಕ್ಕಿ ಮತ್ತು ರಾಮು ಝಂಡೆಕುರುಬರ, ಇಸ್ಮಾಯಿಲ್ ಕಳ್ಳಿಮನಿ. ಹುಸೇನಸಾಬ ಶೇಖ ಸೇರಿದಂತೆ ಹಲವರು ಉಪಸ್ಥಿತಿತರಿದ್ದರು, ಡಿ ಜೆ ಕೊಣ್ಣೂರ ನಿರೂಪಿಸಿ ವಂದಿಸಿದರು