spot_img
spot_img

ಕಲಿಕೆಯನ್ನು ವಿಭಿನ್ನವಾಗಿ ಆಚರಿಸಿ; ಟಕ್ಕೆ

Must Read

- Advertisement -

ಸಿಂದಗಿ: ಮಕ್ಕಳ ಕಲಿಕೆಯನ್ನು ವಿಭಿನ್ನವಾಗಿ ರೂಪಿಸುವ ಉದ್ದೇಶದಿಂದ ಕಲಿಕಾ ಹಬ್ಬವನ್ನು ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ ಎಂದು ಸಿಂದಗಿ ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ ಹೇಳಿದರು.

ತಾಲೂಕಿನ ದೇವಣಗಾಂವ ಗ್ರಾಮದಲ್ಲಿನ ಸಮೂಹ ಸಂಪನ್ಮೂಲ ಕೇಂದ್ರ ಸರಕಾರಿ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಾಗಲಿ, ಕಲಿಕೆಯಿಂದ ಮಕ್ಕಳು ದೂರಾಗಬಾರದು, ಕಲಿಕೆಯ ಜೊತೆಗೆ ಹಾಡು ಆಡು, ಕಾಗದ ಕತ್ತರಿ, ಊರು ಸುತ್ತೋಣ, ಇಂಥಹ ವಿಶಿಷ್ಟ ಕಾರ್ಯಗಳು ಇದರಲ್ಲಿ ಬೆರೆಸಿ ಮಕ್ಕಳಗೆ ಚಟುವಟಿಕೆಗೆ ಹಚ್ಚುವ ಉದ್ದೇಶವೇ ಕಲಿಕಾ ಹಬ್ಬ ಎಂದು ವಿವರಿಸಿದರು.

ಬಿಇಓ ಎಚ್.ಎಂ.ಹರನಾಳ, ಬಿಆರ್‍ಪಿ ಎಫ್.ಆರ್.ಕಾಚೂರ, ಎಸ್.ಎಎಂ.ಪಾಟೀಲ, ಸಿಆರ್‍ಪಿ ಎಸ್.ಆರ್.ಮುಲ್ಲಾ, ಸಾನಿದ್ಯವನ್ನು ವೇ.ಈರಯ್ಯ ಮಠ, ಜಿಪಂ ಮಾಜಿಸದಸ್ಯ ಕಾಶಿನಾಥ ಗಂಗನಳ್ಳಿ, ತಳವಾರ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಕಣಮೇಶ್ವರ, ತಾಪಂ ಮಾಜಿಸದಸ್ಯ ಶಂಕರಲಿಂಗ ಕಡ್ಲೇವಾಡ, ದವಲಪ್ಪ ಸೊನ್ನ, ಗ್ರಾಪಂ ಅಧ್ಯಕ್ಷ ಬಸವರಾಜ ಹೀರಾಪೂರ, ಪ್ರಗತಿಪರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕೇಶವ ಜೋಶಿ, ಪ್ರಾಚಾರ್ಯ ಸುರೇಶ ಗಂಗನಳ್ಳಿ, ರಮೇಶ ಗಂಗನಳ್ಳಿ, ಸಿದ್ದಾರಾಮ ಹಂಗರಗಿ, ವಿಠ್ಠಲ ಯರಗಲ್, ಎಸ್‍ಡಿಎಂಸಿ ಅಧ್ಯಕ್ಷ ರಮೇಶ ನಾಗಠಾಣ, ವಿಠೋಬಾ ಕಲಬಾ, ರಾಜಹಮ್ಮದ ನಾಗಾವಿ, ಎಸ್.ಎಸ್.ಚಂಡಕಿ, ಸಿದ್ದಾರ್ಥ ಮೇಲಿನಕೇರಿ, ಸಿದ್ದು ಹೀರಾಪೂರ, ಚಂದ್ರಕಾಂತ ಸಿಂಪಿ, ವಿರುಪಾಕ್ಷಿ ಯಂಕಂಚಿ, ಷಣ್ಮುಕಪ್ಪ ಸೋಮನಾಯಕ, ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ, ಉಪಾಧ್ಯಕ್ಷ ಲಕ್ಷ್ಮಣ ಸೊನ್ನ, ಮುತ್ತುರಾಜ ಕಲಶೆಟ್ಟಿ ವೇದಿಕೆಯಲ್ಲಿದ್ದರು.

- Advertisement -

ಶಿಕ್ಷಕ ವಿ.ಸಿ.ಬಿರಾದಾರ ಸ್ವಾಗತಿಸಿದರು, ಪ್ರಾಚಾರ್ಯ ಆರ್.ಎಸ್.ಗಂಗನಳ್ಳಿ ನಿರೂಪಿಸಿದರು, ಎನ್.ವಿ.ನಿಂಬರ್ಗಿ ವಂದಿಸಿದರು.

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group