ಕಿಟ್ ಪಡೆದು ಸಂಭ್ರಮದಿಂದ ರಂಜಾನ್ ಆಚರಿಸಿ – ಮಲೀಕ ಹುಣಶ್ಯಾಳ

0
318

ಮೂಡಲಗಿ: ಪ್ರತಿ ವರ್ಷ ರಂಜಾನ್ ಹಬ್ಬದ ಸಂದರ್ಭದಲ್ಲಿ ನಮ್ಮ ಅಂಜುಮನ್ ಸಂಸ್ಥೆಯಿಂದ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವಂತೆ ಈ ವರ್ಷ ಕೂಡ ವಿತರಣೆ ಮಾಡುತ್ತಿದ್ದು ಈ ಕಿಟ್ ಪಡೆದ ತಾವೆಲ್ಲರೂ ಸಂಭ್ರಮದಿಂದ ರಂಜಾನ್ ಆಚರಿಸಿ ಎಂದು ಅಂಜುಮನ್ ಏ ಇಸ್ಲಾಂ ಸೊಸೈಟಿಯ ಅಧ್ಯಕ್ಷ ಮಲೀಕ ಹುಣಶ್ಯಾಳ ಹೇಳಿದರು.

ಇಲ್ಲಿನ ಅಂಜುಮನ್ ಕಮೀಟಿ ಕಚೇರಿಯಲ್ಲಿ ಶುಕ್ರವಾರ ರಂಜಾನ್ ಹಬ್ಬಕ್ಕಾಗಿ ಕಡು ಬಡ ಬಾಂಧವರಿಗೆ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಅಂಜುಮನ್ ಸಂಸ್ಥೆಯಿಂದ ಬಡ ಕುಟುಂಬಗಳಿಗೆ ನೆರವು ನೀಡುವುದರ ಜೊತೆಗೆ ಅನೇಕ ಜನಪರ ಕಾರ್ಯಗಳನ್ನು ಕೂಡ ನಮ್ಮ ಈ ಕಮಿಟಿ ವತಿಯಿಂದ ಮಾಡಲಾಗುತ್ತಿದೆ ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.

ಬಿ ಆರ್ ಟಿ ಕಮಿಟಿ ಅಧ್ಯಕ್ಷ ಇರ್ಶಾದ್ ಪೀರಜಾದೆ ಮಾತನಾಡಿ, ಈ ಹಿಂದೆ ನಮ್ಮ ಮಸೀದಿಯಲ್ಲಿ ಕಾರ್ಯ ನಿರ್ವಹಿಸಿ ಅನಾರೋಗ್ಯದಿಂದ ನಿಧನ ಹೊಂದಿದ ಹಾಫೀಜ ಮಹಮ್ಮದ ಅಲಿ ಅವರ ಕುಟುಂಬಕ್ಕೆ ಐದು ಸಾವಿರ ರೂಪಾಯಿ ನೆರವು ನೀಡಲಾಗಿದೆ ಎಂದರು .

ಈ ಸಂದರ್ಭದಲ್ಲಿ ಬಷೀರ್ ಆಹ್ಮದ್ ಬೆಲಗಾಮಿ, ರಸೂಲ ಮೆಟಗೂಡ, ಮಗತುಮ್ ಹುಣಶ್ಯಾಳ ಇದ್ದರು .