ಸಿಂದಗಿ; ಸ್ವಾಮಿ ವಿವೇಕಾನಂದರ ಚಿಂತನೆ ಸಂದೇಶಗಳು ಎಂದೆಂದಿಗೂ ಪ್ರಸ್ತುತ, ರಾಷ್ಟ್ರಪ್ರೇಮ ಭಾರತೀಯ ಸಂಸ್ಕೃತಿಯ ಆಳವಾದ ಜ್ಞಾನ ಹೊಂದಿದ್ದ ಮಹಾನ ಶಕ್ತಿ ಸ್ವಾಮಿ ವಿವೇಕಾನಂದರು ಎಂದು ಎಚ್ ಜಿ ಕಾಲೇಜಿನ ಪ್ರಾಚಾರ್ಯ ಎ ಆರ್ ಹೆಗ್ಗನದೊಡ್ಡಿ ಹೇಳಿದರು.
ಪಟ್ಟಣದ ಎಲೈಟ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ ಸಪ್ತಾಹ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ತಹಶಿಲ್ದಾರ ಸಂಜೀವಕುಮಾರ ದಾಸರ ಮಾತನಾಡಿ, ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ ಭವ್ಯ ಭಾರತದ ಹೆಮ್ಮೆಯ ಪುತ್ರ ಭಾರತದ ಸನಾತನ ಸಂಸ್ಕೃತಿ, ಅಖಂಡ ಹಿಂದೂ ಧರ್ಮವನ್ನು ವಿಶ್ವದ ತುಂಬಾ ಮೊಳಕೆ ಒಡೆಯುವಂತೆ ಮಾಡಿದ ಸಿಡಿಲ ಸನ್ಯಾಸಿ, ಸ್ವಾಮಿ ವಿವೇಕಾನಂದರು ಅವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿಕೊಳ್ಳುತ್ತಾ ಬಂದಿದೆ, ಪಾಶ್ಚಾತ್ಯ ದೇಶಗಳಲ್ಲಿ, ಅತ್ಯುನ್ನತ ಸ್ಥಾನದಲ್ಲಿದ್ದ ಕ್ರಿಶ್ಚಿಯನ್ ಧರ್ಮ ವಿಶ್ವದಲ್ಲಿ ಶ್ರೇಷ್ಠ ಧರ್ಮವಾದ ಕಾಲದಲ್ಲಿ ಭಾರತ ಅನಕ್ಷರಸ್ಥ ಹಾಗೂ ಹಾವಾಡಿಗರ ದೇಶ ಎಂದೆಲ್ಲ ಕೀಳಾಗಿ ಕಾಣುವ ಸಮಯದಲ್ಲಿ ಭಾರತವು ವಿಶ್ವದ ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ದೇಶ ಅಂತ ವಿಶ್ವ ಧರ್ಮ ಸಂಸತ್ತಿನಲ್ಲಿ ಜಗಕ್ಕೆ ಸಾರಿದ ಮಹಾನ್ ಚೇತನ ಎಂದರು.
ಆಲಮೇಲ ತಾಲೂಕಿನ ತಹಶಿಲ್ದಾರ ಗೋವಿಂದರಾಜ ಮಾತನಾಡಿ, ಕಾಲ್ನಡಿಗೆಯಲ್ಲಿಯೇ ದೇಶದ ಮೂಲೆ ಮೂಲೆ ಸಂಚರಿಸಿ ಎಲ್ಲರಿರೂ ಸ್ಪೂರ್ತಿ ತುಂಬುತ್ತಿದ್ದರು. ಆಧ್ಯಾತ್ಮಿಕ ಲೋಕದ ಮಹಾನ್ ಚೇತನ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳು ಎಂದೆಂದಿಗೂ ಜೀವಂತ ಇದೇ ಕಾರಣಕ್ಕಾಗಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಉಪನ್ಯಾಸಕ ಮಹಿಬೂಬ ಅಸಂತಾಪುರ ಇದ್ದರು ನಾಮನಿರ್ದೇಶನ ಪುರಸಭೆ ಸದಸ್ಯ ಮಲ್ಲು ಪೂಜಾರಿ ಉಪಸ್ಥಿತರಿದ್ದರು.
ತಾಲೂಕಾ ಅಧಿಕಾರಿ ಶಿವಕುಮಾರ ಕಲ್ಲೂರ ಸ್ವಾಗತಿಸಿದರು, ಉಪನ್ಯಾಸಕ ಆಶೋಕ ಬಿರಾದಾರ ನಿರೂಪಿಸಿದರು.