spot_img
spot_img

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

Must Read

- Advertisement -

ಬೈಲಹೊಂಗಲ: ಬದುಕಿನಲ್ಲಿ ಶಿಸ್ತು, ಸಂಸ್ಕಾರ ಅಳವಡಿಸಿಕೊಂಡರೆ ನೆಮ್ಮದಿಯ ನಾಳೆ ನಿಮ್ಮದಾಗುತ್ತದೆ ಎಂದು ಮುಖ್ಯಶಿಕ್ಷಕರಾದ ಎನ್.ಆರ್ ಠಕ್ಕಾಯಿ ಮಕ್ಕಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. ಮಕ್ಕಳು ದುಶ್ಚಟ ಹಾಗೂ ದುರಭ್ಯಾಸಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಂಡು ಸಮಾಜದಲ್ಲಿ ಘನತೆ, ಗೌರವದಿಂದ ಬದುಕಬೇಕು. ಮಕ್ಕಳು ತಮ್ಮಲ್ಲಿ ಅಡಗಿದ ಪ್ರತಿಭೆಯನ್ನು ಗುರುತಿಸಿಕೊಂಡು ಅದು ಸಾಧನೆಯ ಹೆಮ್ಮರವಾಗಿ ಬೆಳೆಯುವಲ್ಲಿ ಪ್ರಯತ್ನಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಶಾಲಾ ಸಂಸತ್ತಿನ ಮಂತ್ರಿಗಳಿಂದ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

- Advertisement -

ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಗಣೇಶ ಹುಣಶೀಕಟ್ಟಿ, ಗಜೇಂದ್ರ ಹಿರೇಮಠ, ಬಸವೇಶ ಹೂಲಿ, ಸಂಜು ಸೊಗಲದ, ಪೃಥ್ವಿ ಗರಗದ, ಅಕ್ಷತಾ ಚಚಡಿ ವಿದ್ಯಾರ್ಥಿಗಳು  ಮಾತನಾಡಿದರು.

ವೇದಿಕೆ ಮೇಲೆ ಶಾಲಾ ಪ್ರಧಾನಿ ಮಲ್ಲಿಕಾರ್ಜುನ ತಡಸಲೂರ, ಉಪಪ್ರಧಾನಿ ಸಾಕ್ಷಿ ನಾಗಣ್ಣವರ, ಹಣಕಾಸು ಮಂತ್ರಿ ಅಮೂಲ್ಯ ಸೂರ್ಯವಂಶಿ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ ರಾಜೇಶ್ವರಿ ಸೊಗಲದ, ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ ಅಭಿಷೇಕ ಹೊಂಗಲ, ಕ್ರೀಡಾ ಮಂತ್ರಿ ಅಭಿಲಾಷ ಹೊಂಗಲ, ಗ್ರಂಥಾಲಯ ಮಂತ್ರಿ ಐಶ್ವರ್ಯ ಕುಲಕರ್ಣಿ, ಪ್ರವಾಸ ಮಂತ್ರಿ ಸಿದ್ಧನಗೌಡ ಪಾಟೀಲ, ಸಾಂಸ್ಕೃತಿಕ ಮಂತ್ರಿ ಅಕ್ಷಯ ನರೇಂದ್ರಮಠ, ಶಿಕ್ಷಣ ಮಂತ್ರಿ ಅಮೃತಾ ಜೋಗಿಗುಡ್ಡ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸಾಕ್ಷಿ ಹಿರೇಮಠ, ಸಾವಿತ್ರಿ ಹೊಂಗಲ, ಸಹನಾ ಶೀಗಿಹಳ್ಳಿಮಠ, ಕಾವೇರಿ ಬೋಬಡೆ, ಚೈತ್ರಾ ಸೊಗಲದ, ರಾಜೇಶ್ವರಿ ಸೊಗಲದ, ಐಶ್ವರ್ಯ ಕುಲಕರ್ಣಿ, ಸಾಕ್ಷಿ ನಾಗಣ್ಣವರ, ತನುಜಾ ಬಡಿಗೇರ ಶಿಕ್ಷಕಿಯರಾಗಿ ಪಾಠ ಬೋಧನೆ ಮಾಡಿದ್ದು ವಿಶೇಷವಾಗಿತ್ತು.

- Advertisement -

ಮಕ್ಕಳಿಗಾಗಿ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಬಲೂನ್ ಬ್ಯಾಲೆನ್ಸಿಂಗ್, ಬಿಂದಿ ಅಂಟಿಸುವಿಕೆ, ಬುಟ್ಟಿಯಲ್ಲಿ ಚೆಂಡು ಹಾಕುವುದು ಇತ್ಯಾದಿ ವಿವಿಧ ಮನರಂಜನಾ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಮಕ್ಕಳು ಭಾಗವಹಿಸಿ ಖುಷಿ ಪಟ್ಟರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜೆ.ಅರ್.ನರಿ, ಪಿ.ಎಸ್ ಗುರುನಗೌಡರ, ಎಸ್.ಬಿ.ಭಜಂತ್ರಿ, ಎಸ್.ವಿ. ಬಳಿಗಾರ, ಎಸ್.ಟಿ.ಚೌಗಲಾ, ವಿ.ಬಿ.ಪಾಟೀಲ, ಆರ್.ಸಿ.ಸೊರಟೂರ ಉಪಸ್ಥಿತರಿದ್ದರು. ತನುಜಾ ಬಡಿಗೇರ ಪ್ರಾರ್ಥಿಸಿದರು. ಕಾವೇರಿ ಬೋಬಡೆ ಸ್ವಾಗತಿಸಿದರು. ಸಾವಿತ್ರಿ ಹೊಂಗಲ ನಿರೂಪಿಸಿದರು. ಚೈತ್ರಾ ಸೊಗಲದ ವಂದಿಸಿದರು.

- Advertisement -
- Advertisement -

Latest News

ಕವನ: ಹೆಮ್ಮೆ ಪಡು ಭಾರತೀಯ ಮನವೆ

  ಹೆಮ್ಮೆ ಪಡು ಭಾರತೀಯ ಮನವೆ ಹೆಮ್ಮೆ ಪಡು ಭಾರತೀಯ ಮನವೆ ಸ್ವಾಭಿಮಾನದ ಸೌಧ  ತಲೆಯೆತ್ತಿದೆಯೆಂದು ! ಕರ್ತವ್ಯ ಪಥದಲ್ಲಿಂದು ಭಾರತ ಮುನ್ನಡೆಯುತ್ತಿದೆಯೆಂದು ! ತಳ್ಳಿ ಬಿಡು  ಒಣ ಪೂರ್ವಗ್ರಹವ ಜೋತು ಬಿದ್ದ ಆ 'ಮನು' ಮನದ ಬಿಳಲಿನಿಂದ ಕೆಳಗಿಳಿ ಹೆಮ್ಮೆ...
- Advertisement -

More Articles Like This

- Advertisement -
close
error: Content is protected !!
Join WhatsApp Group