ಮೂಡಲಗಿ: ಸೌಹಾರ್ದತೆಯ ಪ್ರತೀಕವಾದ ಪವಿತ್ರ ಈದ್ ಮಿಲಾದ ಹಬ್ಬವನ್ನು ಮೂಡಲಗಿಯಲ್ಲಿ ಮುಸ್ಲಿಂ ಸಮಾಜದವರು ರವಿವಾರದಂದು ಸಂಭ್ರಮದಿಂದ ಆಚರಿಸಿದರು.
ಈದ್ ಮಿಲಾದ ಹಬ್ಬದ ಪ್ರಯುಕ್ತ ಮೂಡಲಗಿ ಪಟ್ಟಣದ ಜಾಮಿಯಾ ಮಸೀದಿಯಿಂದ ಪ್ರಾರಂಭವಾದ ಮೆರವಣಿಗೆಯು ಕರೆಮ್ಮಾದೇವಿ ವೃತ್ತ, ಬಸವೇಶ್ವರ ವೃತ್ತ, ಸಂಗಪ್ಪಣ್ಣ ವೃತ್ತ, ಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ ಮುಖಾಂತರ ಮಸೀದಿಯವರೆಗೆ ಮುಸ್ಲಿಂ ಸಮಾಜದ ಅಪಾರ ಜನಸ್ತೋಮದ ಮಧ್ಯೆ ಮೆರವಣಿಗೆಯು ಜರುಗಿತು.
ಮೆರವಣಿಗೆ ಸಂದರ್ಭದಲ್ಲಿ ಸಿಹಿ ವಿತರಿಸಿ ಪರಸ್ಪರ ಈದ್ ಮಿಲಾದ ಹಬ್ಬದ ಶುಭ ಕೋರಿದರು.
ಈ ಸಮಯದಲ್ಲಿ ಮೌಲಾನಾ ಕೌಸರ ರಜಾ, ಮೌಲಾನಾ ಅಮೀರ ಹಮ್ಜಾ ಥರಥರಿ, ಹಾಪೀಜ ನಿಜಾಮುದ್ದೀನ, ಹಾಪೀಜ ಶೋಹೆಬ ಅಲಿ, ಬಿಟಿಟಿ ಕಮೀಟಿಯ ಅಧ್ಯಕ್ಷ ಶರೀಪ್ ಪಟೇಲ್, ಮಲ್ಲಿಕ ಕಳ್ಳಿಮನಿ, ಸಲಿಂಮ್ ಇನಾಮದಾರ, ಸಾಹೇಬ ಪೀರಜಾದೆ, ದಾದುಸಾಬ ಮುಗಟಖಾನ, ಇಮಾಮಹುಸೇನ ಮುಲ್ಲಾ, ಹಸನಸಾಬ ಮುಗಟಖಾನ, ಮಲೀಕ ಅತ್ತಾರ, ದಸ್ತಗೀರ ನದಾಫ್ ಸೇರಿದಂತೆ ಸಮಾಜ ಭಾಂಧವರು ಇದ್ದರು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.