spot_img
spot_img

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸವಿನೆನಪಿಗಾಗಿ ೭೫ ಸಸಿ ನೆಟ್ಟು ಸಂಭ್ರಮಾಚರಣೆ

Must Read

spot_img

ಕಿತ್ತೂರ ಸಮೀಪದ ಬಸರಕೋಡ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಇಂದು ಜಂಟಿಯಾಗಿ ೭೫ ಗಿಡಗಳನ್ನು ನೆಡುವದರ ಮೂಲಕ ಅಮೃತ ಮಹೋತ್ಸವ ಸಂಭ್ರಮಾಚರಣೆ ಆಚರಿಸಿದರು.

ಇರುವುದೊಂದೇ ಭೂಮಿಯನ್ನು ಸುಸ್ಥಿರವಾಗಿ ಇಟ್ಟುಕೊಳ್ಳುವದು ನಮ್ಮೆಲ್ಲರ ಜವಾಬ್ದಾರಿ ಸುಂದರ ನಾಳೆಗಾಗಿ ನಾವು ಭೂಮಿಗೆ ಹಾನಿ ಮಾಡದೇ ಪರಿಸರ ಪೂರಕ ಜೀವನ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಅದರ ಜೊತೆಗೆ ಸ್ಕೌಟ್ ಮಕ್ಕಳನ್ನು ಉದ್ದೇಶಿಸಿ ಇಂದಿನ ಮಕ್ಕಳಿಗೆ ಸಹಕಾರ, ಸಹಬಾಳ್ವೆ ,ಬಹುಮುಖ್ಯವಾಗಿ ಬೇಕಿದ್ದು ಅದು ನಮ್ಮ ಸ್ಕೌಟ್ಸ ಸಂಸ್ಕಾರವನ್ನು ನೀಡುತ್ತದೆ ಎಂದು ಕಿತ್ತೂರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ.ಟಿ.ಬಳಿಗಾರ ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿತ್ತೂರ ವಲಯ ಅರಣ್ಯಾಧಿಕಾರಿಗಳಾದ ಮಗದುಮ್ಮ ಮಾತನಾಡಿ, ಅರಣ್ಯ ಹಲವು ಜೀವವೈವಿಧ್ಯಗಳ ತಾಣ ಆದ್ದರಿಂದ ಅರಣ್ಯದ ಬಗ್ಗೆ ಪ್ರತಿಯೊಬ್ಬರು ಮಹತ್ವ ಅರಿತು ಅದಕ್ಕೆ ಪೂರಕ ಜೀವನ ಶೈಲಿಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಅಕ್ಷರದಾಸೋಹ ತಾಲೂಕಾ ಅಧಿಕಾರಿಗಳಾದ  ಪ್ರಕಾಶ ಮೆಳವಂಕಿ ಮಾತನಾಡಿ ಶಾಲೆಯಲ್ಲಿ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಕಿಚನ್ ಗಾರ್ಡನ್ ಮಹತ್ವವನ್ನು ಹೇಳಿದರು

ಸಭೆಯಲ್ಲಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ ಘಟಕಗಳನ್ನು ಉದ್ಘಾಟಿಸಲಾಯಿತು. ಶಾಲೆಯ ಮುಖ್ಯಗುರುಗಳಾದ ಎಮ್.ಕೆ ಬುಲಬುಲೆ, ಬಿ.ಆರ.ಪಿ ಗಳಾದ ಅಶೋಕ ಪಾಗಾದ ತಾಲೂಕಾ ಸ್ಕೌಟ ಅಧಿಕಾರಿಗಳಾದ ಡಿ.ಎಚ್ ಪಾಟೀಲ,ಸಿ.ಆರ.ಪಿ ಸಂಜೀವ ಹುಬ್ಬಳ್ಳಿ,ಶಾಲೆಯ ಸ್ಕೌಟ್ ಶಿಕ್ಷಕರಾದ ಬಸವರಾಜ ಗಡೆನ್ನವರ,ಊರನಾಗರಿಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!