ಸಿಂದಗಿ: ಭಾರತೀಯ ಜನ ಸಂಘದ ಸಂಸ್ಥಾಪಕ ಅಧ್ಯಕ್ಷ ಶ್ಯಾಮಾ ಪ್ರಸಾದ ಮುಖರ್ಜಿ ಬಲಿದಾನದ ದಿನವನ್ನು 1976ರ ಜೂ.23 ರಂದು ಪರಿಸರ ದಿನವನ್ನಾಗಿ ಆಚರಣೆ ತಂದು ಪರಿಸರ ಸಂರಕ್ಷಣೆಗೆ ಮುಂದಾಗಿದ್ದು ಇಂದು ನಾವೆಲ್ಲರು ನೆನಪಿಸಿಕೊಳ್ಳುವಂತಾಗಿದೆ ಎಂದು ಬಿಜೆಪಿ ಮುಖಂಡ ಮುತ್ತು ಶಾಬಾದಿ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದ ಆವರಣದಲ್ಲಿ ದಿ:ಶ್ಯಾಮಾ ಪ್ರಸಾದ ಮುಖರ್ಜಿ ಬಲಿದಾನದ ದಿನ ನಿಮಿತ್ತ ಸಿಂದಗಿ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿ 10 ಸಸಿ ನೆಡುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಭಾರತೀಯ ಜನ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಭಾರತದ ರಾಜಕೀಯ ಚಿತ್ರಣ ಬದಲಿಸಿ, ಕಾಶ್ಮೀರ ಭಾರತದ ಅಡಿಯಲ್ಲಿ ಅಜರಾಮರವಾಗಿ ಉಳಿಸಿ, ನೆಹರು-ಶೇಖ್ ಕುತಂತ್ರಕ್ಕೆ ಬಲಿದಾನವಾದ ಶ್ಯಾಮಾ ಪ್ರಸಾದರನ್ನು, ಸ್ಮರಿಸಿ ಸ್ವಚ್ಚ-ಭಾರತ, ಸದೃಢ-ಭಾರತವನ್ನಾಗಿ ಮಾಡಲು ಪರಿಸರ ದಿನವನ್ನಾಗಿ ಆಚರಿಸುವ ನಿಮಿತ್ಯ ಜೂನ್ 23 ರಿಂದ ಜುಲೈ 6ರವರೆಗೆ ಸಸಿ ನೆಡುವ ಅಭಿಯಾನವನ್ನು ಪ್ರಾರಂಭಿಸಿ ನೈಸರ್ಗಿಕ ಆಮ್ಲಜನಕ ಸೃಷ್ಟಿಸುವಂಥ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿದಂತವರು ದಿ:ಶ್ಯಾಮಾ ಪ್ರಸಾದ ಮುಖರ್ಜಿಯವರು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಶಂಭುಲಿಂಗ ಕಕ್ಕಳಮೇಲಿ, ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಚಂದ್ರಶೇಖರ ನಾಗೂರ, ಶ್ರೀಶೈಲ ಯಳಮೇಲಿ, ಶ್ಯಾಮ್ ಪುಜಾರಿ, ಬಾಬು ಬಿರಾದಾರ, ಶ್ರೀಶೈಲ ಶಿರಕನಹಳ್ಳಿ, ಅವಧೂತ ಜೋಶಿ, ಪ್ರದೀಪ ಕುಲಕರ್ಣಿ, ದೇವೇಂದ್ರ ಹಂಚಿನಾಳ, ಶರಣು ರಂಜಣಗಿ, ರಾಹುಲ್ ತಳವಾರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.