spot_img
spot_img

ಸೈನಿಕರೊಂದಿಗೆ ಸಂಭ್ರಮದ ಸ್ವಾತಂತ್ರ‍್ಯೋತ್ಸವ ಆಚರಣೆ

Must Read

spot_img
- Advertisement -

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸೈನಿಕರೊಂದಿಗೆ ಸ್ವಾತಂತ್ರ‍್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಅಚರಿಸಲಾಯಿತು.

ಧ್ವಜಾರೋಹಣದ ನಂತರ ಗ್ರಾಮದಲ್ಲಿ ನಡೆದ ಪ್ರಭಾತಪೇರಿಯಲ್ಲಿ ವಿವಿಧ ಸ್ವಾತಂತ್ರ‍್ಯ ಹೋರಾಟಗಾರರ ವೇಷದಲ್ಲಿನ ಮಕ್ಕಳು ಎಲ್ಲರ ಗಮನ ಸೆಳೆದರು. ಗ್ರಾಮದ ಮಾಜಿ ಯೋಧರಾದ ವೆಂಕಣ್ಣ ಬಡಿಗೇರ, ಅರ್ಜುನ ನಿಂಬಾಳಕರ, ಸೋಮನಿಂಗ ಕಡಬಿ, ದುಂಡಪ್ಪ ಮಡಿವಾಳರ, ರವೀಂದ್ರ ಮನಗುತ್ತಿ, ಹನುಮಂತ ಯರಗೊಪ್ಪ, ಗಂಗಪ್ಪ ಅರವಟಗಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. 

     ದುಂಡಯ್ಯ ನರೇಂದ್ರಮಠ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಇತಿಹಾಸದ ಕುರಿತು ಮಾಹಿತಿ ನೀಡಿದರು. ಶಿಕ್ಷಕರಾದ ಸುನಿಲ ಭಜಂತ್ರಿ ಮಾತನಾಡಿ, ದೇಶದ ಪರಂಪರೆ, ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.

- Advertisement -

ಮಾಜಿ ಯೋಧರಾದ ದುಂಡಪ್ಪ ಮಡಿವಾಳರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಎಲ್ಲ ಭಾರತೀಯರು ಅಭಿಮಾನದಿಂದ ನೆನೆಯಬೇಕು ಎಂದರು. 

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಶಿಕ್ಷಕರಾದ ಎನ್.ಆರ್. ಠಕ್ಕಾಯಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ದೇಶದ ಅಭಿವೃದ್ಧಿಗಾಗಿ ದುಡಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. 

     ಸ್ವಾವಲಂಬನೆ ಹಾಗೂ ಸ್ವಾಭಿಮಾನ ಸ್ವಾತಂತ್ರ್ಯದ ಮೌಲ್ಯವನ್ನು ತಿಳಿಸಿಕೊಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.     ಭಾಷಣ ಹಾಗೂ ದೇಶಭಕ್ತಿ ಗೀತೆಗಳ ಮೂಲಕ ವಿದ್ಯಾರ್ಥಿಗಳು ಭಾರತದ ಹಿರಿಮೆಯನ್ನು ತಿಳಿಸಿಕೊಟ್ಟರು.

- Advertisement -

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ವಿನಾಯಕ ಬಡಿಗೇರ, ಮಹಾಂತೇಶ ಸೊಗಲದ, ನಿಂಗಪ್ಪ ಅಳಗೋಡಿ, ರಮೇಶ ಸೂರ್ಯವಂಶಿ, ವಿಠ್ಠಲ ಕಂಬಳಿ, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ ಹುಣಶೀಕಟ್ಟಿ,  ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಶಿವಾನಂದ ಬಳಿಗಾರ, ವೀರೇಂದ್ರ ಪಾಟೀಲ, ರೇಖಾ ಸೊರಟೂರ, ಹೇಮಲತಾ ಪುರಾಣಿಕ, ಎಂ.ಬಿ ಹೊಂಗಲ, ಸೈನಿಕರಾದ ಉಮೇಶ ಕಾರಿಮನಿ, ವಿದ್ಯಾರ್ಥಿಗಳು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. ನಿರ್ಮಲಾ ಸೊಗಲದ ನಿರೂಪಿಸಿದರು. ಮಲ್ಲಮ್ಮ ವಂದಿಸಿದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group