ಮಾಳಿ ಸಮಾಜ ಜನಗಣತಿ ಅವೈಜ್ಞಾನಿಕ ; ಮರು ಪರಿಶೀಲಿಸಿ – ಮುರಿಗೆಪ್ಪ ಮಾಲಗಾರ

0
193

ಹಳ್ಳೂರ: ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯು ಅವೈಜ್ಞಾನಿಕವಾಗಿದೆ ಜಾತಿ ಗಣತಿ ವರದಿಯ ಅಧ್ಯಯನ ಮಾಡಿ ಮಾಳಿ, ಮಾಲಗಾರ ಸಮಾಜದ ಸೂಕ್ತ ಜನಸಂಖ್ಯೆ ವರದಿ ನೀಡಬೇಕೆಂದು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪತ್ರಕರ್ತ ಮುರಿಗೆಪ್ಪ ಮಾಲಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಹಿಂದುಳಿದ ವರ್ಗದವರ ಮನೆ ಮನೆಗೆ ತೆರಳಿ ಸರಿಯಾಗಿ ಸಮೀಕ್ಷೆ ಮಾಡದೇ ವರದಿ ನೀಡಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟ, ಕಲಬುರ್ಗಿ ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಸಂಖ್ಯೆಯಿದ್ದು ರಾಜ್ಯದಲ್ಲಿ ಮಾಳಿ, ಮಾಲಗಾರ ಸಮಾಜವು ಸುಮಾರು 40 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆದರೆ ಪತ್ರಿಕಾ ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರುವ ಮಾಹಿತಿಗಳ ಪ್ರಕಾರ ಮಾಳಿ, ಮಾಲಗಾರ ಸಮಾಜವು ಕೇವಲ 83296 ಎಂಬ ಅಂಕಿ ಸಂಖ್ಯೆ ಜಾತಿಗಣತಿ ಸಮೀಕ್ಷೆಯ ವರದಿ ಕಂಡು ಬರುತ್ತಿದೆ ಪ್ರವರ್ಗ 1ಬಿ ತೋರಿಸಿ ಗದ್ದಲವುಂಟು ಮಾಡಿದೆ.ಜಾತಿ ಗಣತಿ ಸರಿಯಾಗಿಲ್ಲ ಮತ್ತೊಮ್ಮೆ ಜಾತಿ ಗಣತಿ ವರದಿ ಅಧ್ಯಯನ ಮಾಡಿ ಸೂಕ್ತ ಜನಸಂಖ್ಯೆ ವರದಿ ನೀಡಬೇಕು. ಇದರಿಂದ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿವಾಗಿ ಮತ್ತು ರಾಜಕೀಯವಾಗಿ ಅತೀ ಹಿಂದುಳದ ಕರ್ನಾಟಕ ರಾಜ್ಯದ ಮಾಳಿ,ಮಾಲಗಾರ ಸಮುದಾಯಕ್ಕೆ ಅನ್ಯಾಯವಾದಂತಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಮುಖ್ಯ ಮಂತ್ರಿಗಳು ಈ ವರದಿಯನ್ನು ಕುಲಂಖುಷವಾಗಿ ಪರಿಶೀಲನೆ ಮಾಡದೇ ಅಂಗೀಕರಿಸಬಾರದು. ಒಂದು ವೇಳೆ ಸದರಿ ವರದಿಯನ್ನು ಅಂಗೀಕರಿಸಿದ್ದಲ್ಲಿ ರಾಜ್ಯಾದ್ಯಂತ ಮಾಳಿ, ಮಾಲಗಾರ ಸಮಾಜದವರು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here