spot_img
spot_img

ಮಾಸ್ತ ಮರಡಿ ಯಲ್ಲಿ ಯಶಸ್ವಿ ಯಾಗಿ ಜರುಗಿದ ಕೇಂದ್ರ ಮಟ್ಟದ ಪ್ರತಿಭಾ ಕಾರಂಜಿ

Must Read

spot_img

ಬೆಳಗಾವಿ – ತಾಲೂಕಿನ ಹಲಗಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಮಾಸ್ತಮರಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಆಯೋಜನೆಗೊಂಡು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ .ಪಿ. ಜುಟ್ಟನವರ ಜ್ಯೋತಿ ಬೆಳಗಿಸಿ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ, ಮಕ್ಕಳಲ್ಲಿ ಶೈಕ್ಷಣಿಕ ಹಾಗೂ ಇತರೆ ಸೃಜನಾತ್ಮಕ ಕಲೆ ಚಟುವಟಿಕೆಗಳಲ್ಲಿ ಅಸಕ್ತಿ ಬೆಳೆಸಲು ಶ್ರಮಿಸಲು ಶಿಕ್ಷಕರಿಗೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿ ಆರ್ ಸಿ ಸಮನ್ವಯಾಧಿಕಾರಿ ಗಳಾದ ಡಾ,ಎಮ್.ಎಸ್ . ಮೇದಾರ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶಗೌಡ ಪಾಟೀಲ ಮಾತನಾಡಿ, ಮಾಸ್ತಮರಡಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ಶೈಕ್ಷಣಿಕ ಕಾರ್ಯಚಟುವಟಿಕೆ ಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು, ಶಾಲಾ ವಾತಾವರಣ ಖುಷಿ ನೀಡುತ್ತದೆ, ಪ್ರಗತಿಪಥದತ್ತ ಸಾಗಲೆಂದರು.

ಪ್ರತಿಭಾ ಕಾರಂಜಿಯ ಸ್ಪರ್ಧೆಗಳ ದಾಖಲೆಗಳನ್ನು ಅತಿಥಿಗಳು ಬಿಡುಗಡೆ ಮಾಡಿದರು,ಮುಖ್ಯ ಅತಿಥಿಗಳನ್ನು, ಗ್ರಾಮಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಸದಸ್ಯರಾದ ಶ್ರೀಮತಿ ಮಹಾನಂದ ಮರಕಟ್ಟಿ, ಸಾಗರ ಕುರಂಗಿ, ಶ್ರೀಮತಿ ಅನ್ನಪೂರ್ಣ ಬುರಾಣಿ, ಎಸ್ ಡಿ ಎಮ್ ಸಿ ಎಮ್ ಸಿ ಸದಸ್ಯರಾದ ಈರಪ್ಪ ಮಾತಾರಿ, ಅನಿತಾ ತಾರೇಕಾರ, ಸಿದ್ದಪ್ಪ ಕುರಂಗಿ, ಶ್ರೀಮತಿ ಸುನೀತಾ ಕುರಂಗಿ, ಹಾಗೂ ಗ್ರಾಮಸ್ಥರಾದ ಶಂಕರ ಅಂಬೋಜಿ, ರಾಘವೇಂದ್ರಮಾವಿನಕಟ್ಟಿ, ಬಸವರಾಜ ಪಾಟೀಲ,ಶಿಕ್ಷಣ ಸಂಯೋಜಕ ಬಿ ಎಮ್ ಬಡಿಗೇರ, ಬಿ ಆರ್ ಪಿ ಶಂಕರ ತಾರಾಪುರ, ಆಯ,ಆರ್,ಮೇಟ್ಯಾಳಮಠ, ಶಿಕ್ಷಕರ, ಸಂಘದಅನ್ವರಲಂಗೋಟಿ,ಆಯ್ ಬಿ ಗೂಳಪ್ಪನವರ ಸೇರಿದಂತೆ ಕೇಂದ್ರ ಶಾಲೆಗಳ ಮುಖ್ಯ್ಯೊಪಾಧ್ಯಾಯರು, ಶಿಕ್ಷಕರು ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮ ಯಶಸ್ವಿಗೆ ಶಿಕ್ಷಕರಾದ ಆನಂದ ಢಗೆ, ರಾಜು ಅರಳಿಕಟ್ಟಿ,ಪಿ ಎನ್.ಪಾಟೀಲ, ಆರ್ ಎಮ್ ಪಾಟೀಲ, ಎ ಸಿ ಮಾಡಿಗರ, ಲಕ್ಷ್ಮಣ ತಳವಾರ, ಅರುಣ ಬಸವಂತ ಸಾವಕಾರ ಸಂತೋಷ ಸಂತಿ ಬಸ್ತವಾಡ, ವಿ ಎಸ್ ಚವಾಣ್, ಗೋಪಾಲ ಕೋಲಕಾರ, ಶ್ರೀಮತಿ ಬಿ ಎಸ್ ಇಂಗನಹಳ್ಳಿ, ಶ್ರೀಮತಿ ವಿ ಸಿ ಕೊಷ್ಠಿ, ಶ್ರೀಮತಿ ಮಹಾಲಕ್ಷ್ಮೀ ಪಾಟೀಲ ಶ್ರಮಿಸಿದರು.

ದಿನಪೂರ್ತಿ ವಿವಿಧ ಸ್ಪರ್ಧೆಗಳು ನಡೆದವು, ಸಂಜೆ ವಿಜೇತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ಪ್ರಮಾಣಪತ್ರ ವಿತರಿಸಲಾಯಿತು.

ಕಾರ್ಯಕ್ರಮ ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ, ಸ್ವಾಗತಗೀತೆ ಪ್ರಸ್ತುತ ಪಡಿಸಿದರು.

ಮಾಸ್ತ ಮರಡಿಯ ಶಾಲಾ ಹಿರಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ ಸ್ವಾಗತಿಸಿದರು, ಸಿ ಆರ್ ಪಿ ಶ್ರೀಮತಿ ಎಫ್ ಎಸ್ ಮುಲ್ಲಾ ಪ್ರಾಸ್ತಾವಿಕ ವಾಗಿ ಮಾತನಾಡಿದರು, ಶಿಕ್ಷಕರಾದ ಬಸವರಾಜ ಪಾಟೀಲ ವಂದಿಸಿದರು ಶಿಕ್ಷಕಿಯರಾದ ಶ್ರೀಮತಿ ಸುನೀತಾ ಮಹಾವೀರ ಚೌಗಲೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!