Homeಸುದ್ದಿಗಳುಚಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ ನಿಧನ-ಸಂಸದ ಈರಣ್ಣ ಕಡಾಡಿ ಸಂತಾಪ

ಚಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ ನಿಧನ-ಸಂಸದ ಈರಣ್ಣ ಕಡಾಡಿ ಸಂತಾಪ

ಮೂಡಲಗಿ: ಚಂಬೆಳಕಿನ ಕವಿ ಎಂದೇ ಹೆಸರಾಗಿದ್ದ, ಹಿರಿಯ ಸಾಹಿತಿ ನಾಡೋಜ ಡಾ. ಚೆನ್ನವೀರ ಕಣವಿ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಂತಾಪ ವ್ಯಕ್ತಪಡಿಸಿದರು.

ಬುಧವಾರ ಫೆ-16 ರಂದು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಈರಣ್ಣ ಕಡಾಡಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಕ್ಕೆ ಡಾ. ಚೆನ್ನವೀರ ಕಣವಿ ಅವರು ನೀಡಿದ ಕೊಡುಗೆ ಅಪಾರ. ಜನಸಾಮಾನ್ಯರಿಗೆ ಸರಳವಾಗಿ ಕಾವ್ಯದ ರುಚಿ ಉಣಬಡಿಸಿದ ಶ್ರೇಷ್ಠಕವಿ ಮತ್ತು ವಿಮರ್ಶಕರಾಗಿದ್ದರು, ಕರುನಾಡು ಓರ್ವ ಶ್ರೇಷ್ಠ ಸಾಹಿತಿಯನ್ನು ಕಳೆದುಕೊಂಡಿದ್ದು, ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

RELATED ARTICLES

Most Popular

error: Content is protected !!
Join WhatsApp Group