spot_img
spot_img

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ

Must Read

spot_img

ಹುಬ್ಬಳ್ಳಿ – ನಾಡಿನ ಜನತೆಗೆ ಸರಳ ವಾಸ್ತು ಹಾಗೂ ಅದೃಶ್ಯ ಶಕ್ತಿಯ ಜೊತೆ ಸಂಪರ್ಕ ಮಾಡಿಸುವ ಭರವಸೆ ನೀಡುತ್ತಿದ್ದ ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಇಲ್ಲಿನ ಉಣಕಲ್ ಕೆರೆಯ ಹತ್ತಿರದ ಪ್ರೆಸಿಡೆಂಟ್ ಹೊಟೇಲಿನಲ್ಲಿ ಎರಡು ದಿನಗಳ ಮಟ್ಟಿಗೆ ಉಳಿದುಕೊಂಡಿದ್ದ ಗುರೂಜಿ ಅವರನ್ನು ದುಷ್ಕರ್ಮಿಗಳಿಬ್ಬರು ಅಮಾನುಷವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

೪೦ ಸೆಕೆಂಡ್ ನಲ್ಲಿ ಸುಮಾರು ೬೦ ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು ಪರಾರಿಯಾಗಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿವೆ.

ಚಂದ್ರಶೇಖರ ಗುರೂಜಿಯವರು ಒಂದು ಕಡೆಗೆ ಕುಳಿತಿದ್ದು ಭಕ್ತರ ಸೋಗಿನಲ್ಲಿ ಬಂದ ಹಂತಕರು ಅವರನ್ನು ಎಳೆದು ಹೊರಗೆ ತಂದರಲ್ಲದೆ ಹಲವು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾದರೆಂಬುದಾಗಿ ತಿಳಿದು ಬಂದಿದೆ.

ಸರಳ ವಾಸ್ತು ತತ್ವದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವದಾಗಿ ಅವರು ಹೇಳುತ್ತಿದ್ದರು. ಅವರ ಕೊಲೆಗೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ ಪೊಲೀಸರು ಎಲ್ಲ ಕೋನಗಳಲ್ಲಿ ತನಿಖೆ ನಡೆಸಿದ್ದಾರೆ.

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!