ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ: ಚಂದ್ರಶೇಖರ ಕಂಬಾರರು ತಮ್ಮ ಹುಟ್ಟೂರು ಘೋಡಗೇರಿ ಗ್ರಾಮಕ್ಕೆ ಹಿರಿಯ ಸಾಹಿತಿ ಡಾ:ಸರಜೂ ಕಾಟ್ಕರ ಜೊತೆಗೆ ಆಗಮಿಸಿ ತಾವು ಕಲಿತ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.
ಶಾಲಾ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಶಾಲೆಗಳ ಅಭಿವೃದ್ಧಿ ಬಗ್ಗೆ ಗ್ರಾಮಸ್ಥರು ಹಾಗೂ ಪಂಚಾಯತಿ ಅಧಿಕಾರಿಗಳ ಜೊತೆ ಚರ್ಚಿಸಿದರು.
ನಂತರ ಜರುಗಿದ ಘೋಡಗೇರಿ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ಶಿಕ್ಷಕ ಎನ್ ಎಸ್ ದೇವರಮನಿ ಯವರ ದ್ವಿತೀಯ ಕೃತಿ “ಚುಕುಬುಕು ರೈಲು” ಎಂಬ ಕವನ ಸಂಕಲನವನ್ನು ಬಿಡುಗಡೆಮಾಡಿ, ದೇಶವಿದೇಶ ಸುತ್ತಿದರೂ ನನ್ನ ಹುಟ್ಟೂರಿನಂಥ ಊರಿಲ್ಲ ನನಗೆ ನನ್ನ ಘೋಡಗೇರಿ ಸ್ವರ್ಗಕ್ಕೆ ಸಮಾನ ಇಲ್ಲಿಯ ನೆಲ,ಮಣ್ಣು ಜನ,ಗುಡ್ಡ,ನದಿಗಳ ಜೊತೆಯ ಒಡನಾಟ ಅವಿಸ್ಮರಣೀಯ ಎಂದು ತಮ್ಮ ಬಾಲ್ಯದ ಜೀವನವನ್ನು ಕಂಬಾರರು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ನಡೆದ ಸರಳ ಸಮಾರಂಭದಲ್ಲಿ ತಾಲೂಕಾ ಕ.ಸಾ.ಪ.ದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು,ಶಿಕ್ಷಕರು.ಹಲವು ಸಾಹಿತಿಗಳು,ಗ್ರಾ.ಪಂ ಅಧ್ಯಕ್ಷರು,ಸದಸ್ಯರು ಮತ್ತು ಪಂಚಾಯತಿ ಅಧಿಕಾರಿಗಳು ಉಪಸ್ಥಿತರಿದ್ದು ಅವಲಕ್ಕಿ ಸರ್ ನಿರೂಪಿಸಿದರೆ, ಎಲ್ ವಿ ಪಾಟೀಲರು ವಂದನಾರ್ಪಣೆಗೈದರು.