spot_img
spot_img

ಬಿಜೆಪಿಯ ಅರಭಾವಿ ಮಂಡಲದ ಮಾಧ್ಯಮ ಪ್ರಮುಖರಾಗಿ ಚಂದ್ರಶೇಖರ ಪತ್ತಾರ ನೇಮಕ

Must Read

spot_img

ಮೂಡಲಗಿ : ಸೋಮವಾರದಂದು ಪಟ್ಟಣದ ಬಸವ ಮಂಟಪದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಅರಭಾವಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷಕ್ಕೆ ಸಲ್ಲಿಸಿದ ಕಾರ್ಯವನ್ನು ಪರಿಗಣಿಸಿ ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಲ, ಜಾರಕಿಹೊಳಿ, ಇವರ ನಿರ್ದೇಶನದ ಮೇರೆಗೆ ಚಂದ್ರಶೇಖರ.ಅ.ಪತ್ತಾರ್ ಇವರನ್ನು ಅರಭಾವಿ ಮಂಡಲದ ಮಾಧ್ಯಮ ಪ್ರಮುಖರನ್ನಾಗಿ ನೇಮಕ ಮಾಡಿ ಆದೇಶ ಪತ್ರವನ್ನು ಕೊಡಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಕರಾಗಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಮುಖ್ಯ ಅತಿಥಿಯಾಗಿ ಸಾಹಿತಿ ವಿ.ಎಸ್.ಮಾಳಿ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲದ ಅಧ್ಯಕ್ಷ ಮಹಾದೇವ ಶೆಕ್ಕಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಿಜೆಪಿಯ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ್, ಬಾಲಚಂದ್ರ ಜಾರಕೀಹೊಳಿಯವರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ್, ಬಿಜೆಪಿ ಹಿರಿಯ ಮುಖಂಡ ಪ್ರಕಾಶ್ ಮಾದರ,ರವಿ ಸಣ್ಣಕ್ಕಿ, ಜಯಾನಂದ ಪಾಟೀಲ್, ಗಫಾರ್ ಡಾಂಗೆ, ಯಲ್ಲಾಲಿಂಗ ವಾಳದ, ಲಕ್ಷಣ ಅಡಿಹುಡಿ, ಶಂಕರ ತುಕ್ಕನ್ನವರ, ಬಿಜೆಪಿಯ ವಿವಿಧ ಪದಾಧಿಕಾರಿಗಳಾದ ಪಾಂಡುರಂಗ ಮಹೇಂದ್ರಕರ್, ಈರಪ್ಪ ಢವಳೇಶ್ವರ್, ಕೇದಾರಿ ಭಸ್ಮೆ,ಚಂದ್ರಶೇಖರ್ ಪತ್ತಾರ್, ಮಲ್ಲು ಬೋಳನ್ನವರ್, ಸುಭಾಸ ಗುಡ್ಯಾಗೊಳ್, ಲಕ್ಷಣ ಮೆಳ್ಳಿಗೇರಿ,ವಿಠ್ಠಲ್ ಶೀಲನವರ, ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿದ್ದಣ್ಣ ದುರದುಂಡಿ ನಿರೂಪಿಸಿದರು, ಪರಸಪ್ಪ ಬಬಲಿ ಸ್ವಾಗತಿಸಿದರು,ಮಹಾಂತೇಶ ಕುಡಚಿ ವಂದಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!