ಬಾಗಲಕೋಟೆ: ತಾಲೂಕಿನ ತುಳಸಿಗಿರಿಯ ಶ್ರೀ ಪೂರ್ಣಾನಂದ ಮುನಿ ಆಶ್ರಮದಲ್ಲಿ 23-10-2025 ರಂದು ಗುರುವಾರ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಎಲ್ಐಸಿ ಪ್ರತಿನಿಧಿ ಎಂ ವೈ ಹುಲ್ಲಿಕೇರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ವೀರರಾಣಿ ಚನ್ನಮ್ಮ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದಳು ಅವಳ ಧ್ಯೇಯ ಆದರ್ಶಗಳು ಇಂದಿಗೂ ಅಜರಾಮರ. ಭಾರತದ ಸ್ವಾತಂತ್ರಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ಚೆನ್ನಮ್ಮಾಜಿ ಎಂದು ವರ್ಣಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಮಾನಂದ ಅಜ್ಜನವರು ಮಾತನಾಡಿ ಚೆನ್ನಮ್ಮಾಜಿಯ ಧೈರ್ಯ, ಸಾಹಸ, ದೇಶಭಕ್ತಿಯಂತ ಆದರ್ಶ್ ಗುಣಗಳನ್ನು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಪ್ರಮುಖರಾದ ಶಿವಪುತ್ರಪ್ಪ ದಾಸನ್ನವರ, ಎಸ್ ಎಸ್ ಪಾಟೀಲ, ಶ್ರೀಶೈಲ ದಾಸನ್ನವರ, ಶ್ರೀಶೈಲ ಪಾಟೀಲ ಮುಂತಾದವರು ಹಾಜರಿದ್ದರು ಸಮಾಜ ಬಾಂಧವರು ಊರಿನ ಯುವಕರು ಹಿರಿಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು

