ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರ ಸಂತ – ಹರೇಕಳ ಹಾಜಬ್ಬ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಶಾಲೆಯ ಮುಖವನ್ನೇ ನೋಡದ ಈ ಫಕೀರ- ಮಂಗಳೂರಿನ ಬೀದಿಗಳಲ್ಲಿ ಬಿದಿರಿನ ಬುಟ್ಟಿಹೊತ್ತು ಕೊಂಡು ಕಿತ್ತಳೆ ಹಣ್ಣು ಮಾರಾಟ ಮಾಡುತ್ತ ದುಡಿಮೆಯ ಎಲ್ಲ ಹಣವನ್ನೂ ಸುರಿದು ಶಿಕ್ಷಣ ದೇಗುಲ ಕಟ್ಟಿದ ಅಕ್ಷರ ಸಂತ, ‘ಕನ್ನಡಪ್ರಭ’ ವರ್ಷದ ವ್ಯಕ್ತಿ ಹಾಗೂ ಇತರೆ ನೂರಾರು ಸನ್ಮಾನಗಳಿಗೆ ಪುರಸ್ಕೃತರಾಗಿರುವ ಹರೇಕಳ ಹಾಜಬ್ಬ ಇಂದು ದೇಶದ ಉನ್ನತ ‘ಪದ್ಮಶ್ರೀ’ ಪ್ರಶಸ್ತಿ ಸ್ವೀಕಾರ ಮಾಡಿದರು.

ಶಾಲೆ ಕಟ್ಟಿದ ಬರಿಗೈ ಫಕೀರ

ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೇಕಳ ಎಂಬ ಕುಗ್ರಾಮದವರಾದ ಹಾಜಬ್ಬ, ಪ್ರತಿದಿನ ಮಂಗಳೂರಿಗೆ ಬಂದು ಬಿದಿರಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತು ಕಿತ್ತಳೆ ವ್ಯಾಪಾರ ಮಾರುತ್ತಿದ್ದರು. 1978 ರ ವೇಳೆ – ಒಮ್ಮೆ ವಿದೇಶಿಗರೊಬ್ಬರು ಇಂಗ್ಲಿಷ್‌ನಲ್ಲಿ How Much? ಎಂದು ಕೇಳಿದಾಗ ಅದಕ್ಕೆ ಉತ್ತರಿಸಲಾಗದೆ … ಅಪಮಾನಕ್ಕೊಳಗಾದ.. … ಹಾಜಬ್ಬನವರ ಮನಸ್ಸಿನಲ್ಲಿ “ನಾನಂತೂ ಶಿಕ್ಷಣ ಪಡೆಯಲಾಗಲಿಲ್ಲ; ಕೊನೆಪಕ್ಷ ನಮ್ಮ ಹಳ್ಳಿಯ ಮಕ್ಕಳಾದರು ಶಿಕ್ಷಣ ಪಡೆಯಲಿ; ಅದಕ್ಕಾಗಿ ನಾನೊಂದು ಶಾಲೆಯನ್ನ ಕಟ್ಟಲೇಬೇಕೆಂಬ” ಬೀಜಾಂಕುರ ಹುಟ್ಟಿಕೊಂಡಿತ್ತು. ಅದು ಮನದಲ್ಲೇ …. ಮಂಥನಕ್ಕೊಳಗಾಗಿ 17 ವರ್ಷಗಳ ನಂತರ; ಅಂದರೆ 1995 ರಲ್ಲಿ ಮತ್ತೆ ಚಿಗುರೊಡೆಯಿತು. ಅವರ ಭಗೀರಥ ಪ್ರಯತ್ನದಿಂದ 2000ದ ಜೂ.17 ರಂದು ಹಾಜಬ್ಬದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗೇ ಬಿಟ್ಟಿತು. ಮೊದಲು 1ನೇ ತರಗತಿಯಿಂದ ಆರಂಭವಾದ ಶಾಲೆಯಲ್ಲೀಗ 10ನೇ ತರಗತಿವರೆಗೆ ಮಕ್ಕಳು ಕಲಿಯುತ್ತಿದ್ದಾರೆ. 28 ಮಕ್ಕಳಿಂದ ಆರಂಭವಾದ ಶಾಲೆ ಇದೀಗ 164 ಮಕ್ಕಳಿಗೆ ವಿದ್ಯೆ ನೀಡುತ್ತಿದೆ!

ಮುಂದೆ ಬಡ ಮಕ್ಕಳ ಶಿಕ್ಷಣಕ್ಕೆ ಪೂರಕ ಸರಕಾರಿ ಪದವಿ ಪೂರ್ವ ಕಾಲೇಜು, ಐಟಿಐ ಆರಂಭಿಸುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ದಣಿಯದೆ ಹಗಲಿರುಳು ಶ್ರಮಿಸುತ್ತಿದ್ದಾರೆ ಕೂಡ!

ಹಾಜಬ್ಬ ಅವರಿಗೆ ಸಮಸ್ಯೆಗಳೇ ಇಲ್ಲವೆಂದಲ್ಲ, ಈಗಾಗಲೇ ಅವರಿಗೆ ಅರವತ್ತೇಳು ದಾಟಿದೆ ವಯೋಮಾನಕ್ಕೆ ತಕ್ಕಂತೆ ಅನಾರೋಗ್ಯ, ಕಳೆದ ಇಪ್ಪತ್ತು ವರ್ಷಗಳಿಂದಲೂ ಹಾಸಿಗೆ ಹಿಡಿದ ಪತ್ನಿ, ಮದುವೆಯಾಗದ ಮಕ್ಕಳು ಹೀಗೆ ವೈಯಕ್ತಿಕ ಹಲವು ಸಮಸ್ಯೆಗಳು ಕಾಡುತ್ತಿವೆ. ಈ ಎಲ್ಲಾ ಕಷ್ಟಗಳ ಮಧ್ಯೆಯೂ ತಮ್ಮ ಸಂಕಲ್ಪವನ್ನು ಈಡೇರಿಸಲು ಹಗಲು ರಾತ್ರಿ ದುಡಿಯುತ್ತಿದ್ದಾರೆ ಈ ಸಂತ! ಅವರನ್ನು 2020ರ ಪದ್ಮಶ್ರೀ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ..

ಹಾಜಬ್ಬ ಅವರಿಗೆ ಸಂದ ಇತರೆ ಗೌರವ/ ಪ್ರಶಸ್ತಿಗಳು

  • ರಾಜ್ಯೋತ್ಸವ ಪ್ರಶಸ್ತಿ
  • 2004 ರಲ್ಲಿ ಕನ್ನಡಪ್ರಭ ಪತ್ರಿಕೆ ಹಾಜಬ್ಬರನ್ನು “ವರ್ಷದ ವ್ಯಕ್ತಿ” ಎಂದು ಪ್ರಶಸ್ತಿ ನೀಡಿದೆ.
  • ಸಿಎನ್ಎನ್-ಐಬಿಎನ್ ಪ್ರಶಸ್ತಿ ನೀಡಿದೆ

ಮಂಗಳೂರು ವಿಶ್ವವಿದ್ಯಾನಿಲಯ, ಹಂಪಿ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ಮತ್ತು ಕೇರಳದ ಕನ್ನಡ ಶಾಲೆಯ ಪಠ್ಯದಲ್ಲಿ ಹಾಜಬ್ಬ ನವರ ಪಾಠಗಳನ್ನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂಬುದು ಅಚ್ಚರಿಯ ಸಂಗತಿಯೇ ಸರಿ !!!

ಹಾಜಬ್ಬ ನವರ ಈ ಸತತ 40 ವರ್ಷಗಳ ದಾರಿ ನೋಡಿದಾಗ ಅನ್ನಿಸುವುದಿಷ್ಟೆ; ಜೀವನ ಸಾರ್ಥಕತೆಯಲ್ಲಿ ನಿಜಕ್ಕೂ ಸಾಕ್ಷರತೆಯ/ ಶಿಕ್ಷಣದ ಪಾಲೇನು ?ಎಷ್ಟೆಲ್ಲಾ… ಕಲಿತು…. ಎಷ್ಟೆಲ್ಲಾ.. … ಗಳಿಸಿದ ಜನ ಶೂನ್ಯ ಸಾಧನೆಯಲ್ಲಿರುವಾಗ. ಅಕ್ಷರವೇ ಕಾಣದ….. ಈ ಸಂತ ಜೀವನವಿಡೀ ಕಡುಬಡತನದಲ್ಲಿ ಜೀವದೂಡಿ, ಮುಗ್ದ ನಡೆಯನ್ನ ಬಿಟ್ಟು ಕೊಡದೇ ಸಮಾಜದ ಹಿತಕ್ಕಾಗಿಯೇ … ಜೀವನ ಸವೆಸಿದ್ದು…. ಸೋಜಿಗವೇ ಸರಿ! ಇಷ್ಟೆಲ್ಲಾ ಪ್ರಶಸ್ತಿ- ಗೌರವಗಳು ಬಂದರೂ ತನ್ನ ಮುಗ್ಧತೆಯನ್ನು ಇನ್ನೂ ಕಾಪಾಡಿಕೊಂಡು ಬಂದಿರುವ ಹಾಜಬ್ಬ ನಲ್ಲಿರುವ ಮತ್ತೊಂದು ವಿಶೇಷತೆಯೆಂದರೆ ಸರಳತೆ, ಬದುಕಿನ ವಿಧಾನ ಮತ್ತು ಅದೇ…ಉಡುಪು. ಯಾರಾದರೂ ಸನ್ಮಾನಿಸಲು ಕಾರು ಕಳಿಸುವುದಾಗಿ ಹೇಳಿದರೆ ಅದನ್ನು ನಯವಾಗಿ ತಿರಸ್ಕರಿಸಿ ಬಸ್ಸಿನಲ್ಲೇ ಪ್ರಯಾಣ ಮಾಡುತ್ತಾರೆ. ಮೂರ್ನಾಲ್ಕು ವಿದೇಶ ಗಳಿಗೆ ಹೋಗಿ ಬಂದಿರುವ ಹಾಜಬ್ಬ ಅವರು ಅಲ್ಲಿನ ವಿಲಾಸಿ ಹೋಟೆಲ್ ಗಳಲ್ಲಿ ತಂಗಲು ಮುಜುಗರಕ್ಕೀಡಾಗುತ್ತಾರೆ! ದುಬಾರಿ ತಿಂಡಿಯ ಬಗ್ಗೆ ತಿಳಿದಾಗಲಂತೂ ತಿನ್ನಲೂ ಹಿಂಜರಿಯುತ್ತಾರೆ!

ಹಾಜಬ್ಬ ಇವರಿಂದ ಇನ್ನಷ್ಟು ಒಳ್ಳೆಯ ಕಾರ್ಯಗಳಾಗಲಿ, ಇವರ ಜೀವನ ಇತರರಿಗೆ ಸ್ಫೂರ್ತಿಯಾಗಲಿ!!

ಅಭಿನಂದನೆಗಳು… ಹರೇಕಳ ಹಾಜಬ್ಬ ನವರೇ….

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!