ಸಿಂದಗಿ: ರಾಣಿ ಚೆನ್ನಮ್ಮ ಭಾರತದ ಮೊದಲ ಮಹಿಳಾ ಸ್ವಾತಂತ್ರ‍್ಯ ಹೋರಾಟಗಾರ್ತಿ, ಕರ್ನಾಟಕದ ಕಿತ್ತೂರಿನ ರಾಜಮನೆತನದ ಚೆನ್ನಮ್ಮ ರಾಣಿ. ಇಂದು ಕಿತ್ತೂರು ರಾಣಿ ಚೆನ್ನಮ್ಮ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ೧೭೭೮ ರಲ್ಲಿ ಬೆಳಗಾವಿ ಜಿಲ್ಲೆಯ ಒಂದು ಪುಟ್ಟ ಗ್ರಾಮವಾದ ಕಾಕತಿಯಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಕುದುರೆ ಸವಾರಿ, ಕತ್ತಿ ವರಸೆ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದ ಮಹಾನ್ ತಾಯಿ, ಬ್ರಿಟೀಷರ ವಿರುದ್ಧ ಅವಳ ಕೆಚ್ಚೆದೆಯ ಪ್ರತಿರೋಧ ನಾಟಕ, ಜಾನಪದ ಹಾಡಾಗಿ ಜನಪದರ ನಾಲಿಗೆಯ ಮೇಲೆ ಚೆನ್ನಮ್ಮ ನೆಲೆಸಿದ್ದಾಳೆ ಎಂದು ಚಿತ್ತಾಪೂರ ತಾಲೂಕಿನ ಖರದಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪಂಡಿತ ನೆಲ್ಲಗಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಬ್ರಿಟೀಷರು ಈ ದೇಶಕ್ಕೆ ವ್ಯಾಪಾರಕ್ಕಾಗಿ ಬಂದವರು ಆದರೆ ನಮ್ಮ ರಾಜಕೀಯ ವ್ಯವಸ್ಥೆ ಮತ್ತು ೫೫೬ ಸಂಸ್ಥಾನಗಳು ಒಗ್ಗಟಿಲ್ಲದನ್ನು ಅಲ್ಲದೆ ಬೌಗೋಳಿಕ ಹಿನ್ನೆಲೆಯನ್ನು ಪರಿಗಣಿಸಿ ಈಷ್ಟ ಇಂಡಿಯಾ ಕಂಪನಿಯ ತೆರೆದು ಅದರ ಮೂಲಕ ಆಡಳಿತ ನಡೆಸಿದರು. ಅಂಥವರ ವಿರುದ್ದ ಬಂಡೆದ್ದು ನಿಂತವಳು ಚೆನ್ನಮ್ಮಾಜಿ ಅವರು ೧೮೫೭ರ ಸ್ವತಂತ್ರ ಸಂಗ್ರಾಮ ಹೋರಾಟದ ಪ್ರೇರಣೆ ನೀಡಿದ ಚೆನ್ನಮ್ಮಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಾರತ ದೇಶದ ಪರಂಪರೆಯನ್ನು ಮೆರೆಯಬೇಕಾಗಿರುವುದು ಅತ್ಯವಶ್ಯಕವಾಗಿದೆ. ಎಲ್ಲೆಲ್ಲಿ ಹೋರಾಟಗಳು ನಡೆದಿದೆಯೋ ಅಲ್ಲಿ ಸೈನಿಕರು ಸತ್ತಿದ್ದು ಇತಿಹಾಸ ಆದರೆ ಒಬ್ಬ ಆಯ್‌ಎಎಸ್ ಅಧಿಕಾರಿ ಸತ್ತಿದ್ದು ಇತಿಹಾಸ ಸೃಷ್ಠಿಸಿದೆ. ಅಂತಹ ಮಹಾನ್ ತಾಯಿ ತ್ಯಾಗ, ಹೋರಾಟ, ತತ್ವಾದರ್ಶ, ಜೀವನ ಚರಿತ್ರೆ ಇಂದಿನ ಯುವಕರಲ್ಲಿ ತಿಳಿಸುವುದು ಕಾರ್ಯ ಮಹತ್ವದಾಗಿದೆ ಎಂದರು.
ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹAಗರಗಿ ಮಾತನಾಡಿ, ಹೋರಾಟ, ದೈರ್ಯ, ಸ್ವಾತಂತ್ರ, ಸ್ವಾಭಿಮಾನ ಎಂದರೆ ಏನು ಎಂಬುದನ್ನು ೨೪೬ ವರ್ಷಗಳ ಹಿಂದೆಯೇ ತಿಳಿಸಿಕೊಟ್ಟ ಮಹಾನ್ ತಾಯಿ, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಮಾಡಿದ ಸಾಧನೆ, ಸಾಹಸ, ತ್ಯಾಗ, ಹೋರಾಟದ ಕುರಿತು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಿದೆ ಎಂದು ಹೇಳಿದರು.
ಕೃಷಿಕ ಸಮಾಜದ ಅದ್ಯಕ್ಷ ಶಿವಪ್ಪಗೌಡ ಬಿರಾದಾರ ಮಾತನಾಡಿ, ವೀರವನಿತೆ ಚೆನ್ನಮ್ಮಾಜಿ ಅವರು ತಮ್ಮ ಸಾಮ್ರಾಜ್ಯದ ಉಳಿವಿಗೆ ಯುದ್ದ ಮಾಡುವಲ್ಲಿ ಅವರ ಒಬ್ಬರ ಸಾಧನೆಯಲ್ಲ ಸೈನಿಕರ ಪರಿಶ್ರಮವು ಅತ್ಯಗತ್ಯವಾಗಿದ್ದು ಅವರನ್ನು ನೆನೆವಂಥ ಕಾರ್ಯ ನಡೆಯಬೇಕು ಅಂದಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದ ಅವರು ಮುಂದಿನ ಜಯಂತಿ ಸಂದರ್ಭದೊಳಗೆ ೧೦೧ ಚೆನ್ನಮ್ಮಾಜಿ ಅವರ ಭಾವಚಿತ್ರ ನೀಡುವ ವಾಗ್ದಾನ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಅಧ್ಯಕ್ಷತೆ ವಹಿಸಿದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ, ಗ್ರೇಡ್ ೨ ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ ವೇದಿಕೆ ಮೇಲಿದ್ದರು.
ಸರಕಾರಿ ಅಪರ ವಕೀಲರಾದ ಭೀಮಾಶಂಕರ ನೆಲ್ಲಗಿ ಸ್ವಾಗತಿಸಿದರು. ಪ್ರತಿಭಾ ಚಳ್ಳಗಿ ವಚನಾಮೃತ ಹೇಳಿದರು. ಶಿಕ್ಷಕ ರಾಠೋಡ ನಿರೂಪಿಸಿದರು. ಸಮಾಜದ ಪ್ರ.ಕಾರ್ಯದರ್ಶಿ ಆನಂದ ಶಾಬಾದಿ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಧ್ವಜಾರೋಹಣ ಮಾಡುವ ಮೂಲಕ ಕಿತ್ತೂರರಾಣಿ ಚೆನ್ನಮ್ಮಳ ೨೪೬ನೆಯ ಜಯಂತ್ಯುತ್ಸವ ಹಾಗೂ ೨೦೦ನೇ ವಿಜಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ವಕೀಲರ ಸಂಘದ ಅದ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ನಿಂಗನಗೌಡ ಪಾಟೀಲ, ಸಿ.ಎಂ.ದೇವರಡ್ಡಿ, ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆ, ಡಾ. ಅರವಿಂದ ಮನಗೂಳಿ, ನಿತ್ಯಾನಂದ ಯಲಗೋಡ, ಕಂದಾಯ ನಿರೀಕ್ಷಕ ಆರ್.ಎ ಮಕಾಂದಾರ, ನಿಖಿಲಅಹ್ಮದ್ ಖಾನಾಪುರ ಸೇರಿದಂತೆ ಸಮಾಜದ ಹಿರಿಯರು, ಪ್ರಮುಖರು ಸೇರಿದಂತೆ ಅನೇಕರಿದ್ದರು.