spot_img
spot_img

ಮುಖ್ಯಮಂತ್ರಿ, ಬೆಳಗಾವಿ ಜಿಲ್ಲಾಡಳಿತ ಇತ್ತ ಗಮನ ಹರಿಸಿ

Must Read

- Advertisement -

ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಘದ ಠೇವಣಿ ಎಂದು ದೊರೆಯುವುದು?

ಹಲವು ಹಗರಣಗಳ ತಾಯಿ, ಬಡವ ಮಧ್ಯಮ ವರ್ಗದವರನ್ನ ಕೊಲ್ಲುವ ಅತ್ಯಂತ ನೀಚ ವ್ಯವಸ್ಥೆ ಹುಟ್ಟು ಹಾಕಿದ ಆನಂದ ಅಪ್ಪುಗೋಳ ಎಂಬ ದುರುಳನ ಒಡೆತನದ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಘದ ಅವ್ಯವಹಾರ ತನಿಖೆಗೆ, ರಾಜ್ಯ ಸರ್ಕಾರದ ಕ್ರಮಕ್ಕೆ ಜನರು ಬೇಸತ್ತಿದ್ದಾರೆ.

ಬಡವರ ಮಧ್ಯಮ ವರ್ಗದ ಜನರ ಠೇವಣಿ ಮುಳುಗಿಸಿ ತಾನು ಐಷಾರಾಮಿ ಜೀವನ ನಡೆಸುತ್ತಿರುವ ಕಳ್ಳ ಆನಂದ ಅಪ್ಪುಗೋಳ ಇವನ ಆಸ್ತಿ ಹೊಲ, ಗದ್ದೆ, ಮನೆ, ಪ್ಲಾಟ್ ಎಲ್ಲವನ್ನೂ ಮಾರಿ ಠೇವಣಿ ಇಟ್ಟವರ ಹಣವನ್ನು ಬಡ್ಡಿ ಸಮೇತ ಕೊಡಬೇಕೆಂದು ನ್ಯಾಯಾಲಯ ಆದೇಶ ಹೊರಡಿಸಿದೆ.

- Advertisement -

ಆದರೂ ಬೆಳಗಾವಿ ಜಿಲ್ಲಾ ಆಡಳಿತ ಸಂಪೂರ್ಣ ಮಲಗಿದೆ. ಅನೇಕರು ಈಗಾಗಲೇ ಸತ್ತೂ ಹೋಗಿದ್ದಾರೆ. ಜನರು ಐದು ವರ್ಷಗಳ ವೇದನೆ ಯಾತನೆ ಅನುಭವಿಸುತ್ತಿದ್ದಾರೆ. ಯಾವುದೇ ತಪ್ಪು ಮಾಡದ ಜನರಿಗೆ ಈ ಶಿಕ್ಷೆ ಯಾಕೆ ? ಬೆವರು ಸುರಿಸಿ ಗಳಿಸಿದ ಹಣ ಜನಸಾಮಾನ್ಯರಿಗೆ ಸಿಗುವುದು ಯಾವಾಗ ?

ಠೇವಣಿ ಗುಳುಂ ಪ್ರಕರಣ ನಡೆದು ಐದು ವರ್ಷ ಕಳೆದರೂ ಎಚ್ಚತ್ತು ಕೊಳ್ಳದ ಕರ್ನಾಟಕ ಸರಕಾರ ಪರೋಕ್ಷವಾಗಿ ಆನಂದ ಅಪ್ಪುಗೋಳನಿಗೆ ಬೆಂಬಲ ನೀಡುತ್ತಿದೆಯೇ ಎಂಬ ಸಂದೇಹ ಬರುತ್ತಿದೆ. ಜನರ ಅಳಲು ಸರ್ಕಾರದ ಕಿವಿಗೆ ಕೇಳುತ್ತಿಲ್ಲವೆ ?

ಈ ಕೂಡಲೇ ಅವನ ಜಪ್ತಿ ಮಾಡಿದ ಆಸ್ತಿ ಲಿಲಾವ ಹರಾಜು ಮಾಡಿ ಅವರವರ ಹಣ ಅವರಿಗೆ ಮುಟ್ಟಿಸದಿದ್ದರೆ ಜನರು ಬೀದಿಗೆ ಬಂದು ಸರ್ಕಾರ ಮತ್ತು ಬೆಳಗಾವಿ ಜಿಲ್ಲೆಯ ಆಡಳಿತದ ವಿರುದ್ಧ ತೀವ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.

- Advertisement -

ನೊಂದ ಠೇವಣಿದಾರರು ಗ್ರಾಹಕರು

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group