spot_img
spot_img

ಮುಖ್ಯ ಮಂತ್ರಿಗಳೇ, ಸಚಿವರೆ ಇತ್ತ ಕಡೆ ನೋಡಿ…

Must Read

  • ದುಂದುವೆಚ್ಚದ ಕಾರ್ಯಕ್ರಮಗಳು ಬೇಕೆ ?
  • ಜನತೆಯ ಸಮಸ್ಯೆಗಳ ಪರಿಹಾರ ಎಂದಾಗುವುದು ?

ಬೆಂಗಳೂರು – ಡಿಜಿಟಲ್‌ ಯುಗವನ್ನು ಪ್ರವೇಶಿಸುವ ಮೂಲಕ ಸುಸ್ಥಿರ ಅಭಿವೃದ್ಧಿಯ ಘೋಷಣೆಗಳೊಂದಿಗೇ, ಜನಸಮುದಾಯಗಳ ಅಸ್ಥಿರ ಬದುಕಿನ ಸವಾಲುಗಳನ್ನು ಎದುರಿಸಬೇಕಾದ ಸನ್ನಿವೇಶವನ್ನು ಇಡೀ ಭಾರತೀಯ ಸಮಾಜ ಮುಂಗಾಣಬೇಕಿದೆ. ಏರುತ್ತಿರುವ ನಿತ್ಯಾವಶ್ಯಕ ವಸ್ತುಗಳ ಬೆಲೆಗಳು, ಹಣದುಬ್ಬರ, ನಿರುದ್ಯೋಗ, ಕುಸಿಯುತ್ತಿರುವ ರೂಪಾಯಿ ಮೌಲ್ಯ ಹಾಗೂ ಉದ್ಯೋಗಾವಕಾಶಗಳು ಮತ್ತು ಶ್ರಮಜೀವಿಗಳು ನಿತ್ಯ ಎದುರಿಸುತ್ತಿರುವ ಜೀವನೋಪಾಯದ ಸಮಸ್ಯೆಗಳ ನಡುವೆ ಬಡವ-ಶ್ರೀಮಂತರ ನಡುವಿನ ಕಂದರವೂ ಹೆಚ್ಚಾಗುತ್ತಲೇ ಇದ್ದು, ನೂರಾರು ಕೋಟ್ಯಧಿಪತಿಗಳನ್ನು ಸೃಷ್ಟಿಸುತ್ತಿರುವ ಅರ್ಥವ್ಯವಸ್ಥೆ ಜೊತೆಗೇ ಕೋಟ್ಯಂತರ ಹಸಿದ ಹೊಟ್ಟೆಗಳನ್ನೂ ಸೃಷ್ಟಿಸುತ್ತಿದೆ.

ಹೊಸ ನಗರೀಕರಣ ಮತ್ತು ನಗರಗಳ ಅತ್ಯಾಧುನೀಕರಣದ ಪ್ರಕ್ರಿಯೆಗಳು ಚುರುಕಾಗುತ್ತಿರುವಂತೆಲ್ಲಾ ಗ್ರಾಮೀಣ ಬದುಕು ಪಲ್ಲಟವಾಗುತ್ತಿದ್ದು ವಲಸೆ ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ವಲಸಿಗ ಸಮುದಾಯಗಳ ಜೀವನ ಮತ್ತು ಜೀವನೋಪಾಯದ ಮಾರ್ಗಗಳನ್ನು ಸುಸ್ಥಿರಗೊಳಿಸುವ, ಈ ಬೃಹತ್‌ ಜನಸಂಖ್ಯೆಗೆ ಕನಿಷ್ಠ ಪ್ರಾಥಮಿಕ ಶಿಕ್ಷಣ, ಮೂಲ ಆರೋಗ್ಯ ಮತ್ತು ಯೋಗಕ್ಷೇಮದ ವ್ಯವಸ್ಥೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಿಯಾಶೀಲವಾಗಬೇಕಿತ್ತು.

ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರೇ ಹಾಗೂ ರಾಜ್ಯದ ಮುಖ್ಯಮಂತ್ರಿ ಗಳಾದ ಬಸವರಾಜ ಬೊಮ್ಮಾಯಿ ಅವರೇ ರಾಜ್ಯದಲ್ಲಿ ಇಂದು ಪ್ರಧಾನಿ ನರೇಂದ್ರಮೋದಿ ಅವರು ಪ್ರಗತಿ ಪ್ರತಿಮೆ ಹೆಸರಿನಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿ ಅನಾವರಣ ಮಾಡಿದ್ದು ಸಂತಸವೇ. ಅಂದು 2500 ಸಾವಿರ ಬಿ.ಎಂ.ಟಿ.ಸಿ ಬಸ್ ಬಿಡಲಾಗಿತ್ತು.

ಅದರಲ್ಲಿ ಜನರನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ಸುಸಜ್ಜಿತವಾದ ವ್ಯವಸ್ಥೆ ಮಾಡಲಾಗಿತ್ತು.ಜನತೆಗೆ ಊಟದ ಜೊತೆಗೆ ಗೌರವ ಪೂರ್ವಕವಾಗಿ 300 ರೂಪಾಯಿ, 500 ರೂಪಾಯಿ ಹಾಗೂ 1 ಸಾವಿರ ರೂಪಾಯಿ ಗಳನ್ನು ಕೊಟ್ಟಿದ್ದಾರೆ ನಮಗೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗರೀಕರು ಮಾತನಾಡುತ್ತಾ ಸಾಗುತ್ತಾ ಇದ್ದ ವಿಷಯ ಅಲ್ಲಿಯೇ ರಸ್ತೆ ಬದಿಯಲ್ಲಿ ಬಸ್ ಕಾಯುತ್ತಾ ನಿಂತಿದ್ದ ನನ್ನ ಕಿವಿಗೆ ಬಿದ್ದಿತ್ತು , ಬಸ್ ಕಾದು ಕಾದು ಅನೇಕ ನಾಗರಿಕರು ಸುಸ್ತಾಗಿ ಹೋಗಿದ್ದರು , ಆಗ ನಾನು ಬನಶಂಕರಿ ಬಸ್ ಡಿಪೋ ಗೆ ಕರೆ ಮಾಡಿದಾಗ ಡಿಪೋ ಮ್ಯಾನೇಜರ್ 2500 ಬಸ್ ಗಳನ್ನು ಕಾರ್ಯಕ್ರಮ ಕ್ಕೆ ಬಿಟ್ಟಿದ್ದೇವೆ ಎಂದು ಫೋನ್ ಕಟ್ ಮಾಡಿದರು.

ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆ (Kempegowda Statue) ಅನಾವರಣ ಸಮಾರಂಭದಲ್ಲಿ ಬನಶಂಕರಿ 3 ನೇ ಹಂತದಿಂದ ಭಾಗವಹಿಸಲು ಜನರಿಗೆ ವ್ಯವಸ್ಥೆ ಮಾಡಿದ್ದ ಬಸ್ ನ ಮೇಲೆ ಕಂದಾಯ ಸಚಿವ ಆರ್. ಅಶೋಕ್ ಅವರ ಚಿತ್ರ ಇರುವ ಬ್ಯಾನರ್ ಅನ್ನು ಬಸ್ ನ ಮುಂದೆ ಮತ್ತು ಹಿಂದೆ ಕಟ್ಟಲಾಗಿತ್ತು …ರಸ್ತೆ ತುಂಬಾ ಹೊಂಡ ಗಳು ಪದ್ಮನಾಭ ನಗರ ವಿಧಾನ ಸಭಾ ಕ್ಷೇತ್ರದಲ್ಲಿ …!!

ಪ್ರಗತಿ ಪ್ರತಿಮೆ ಹೆಸರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿಯ ಎತ್ತರದ 218ಟನ್‌(120ಟನ್‌ ಉಕ್ಕು ಮತ್ತು 98ಟನ್‌ ಕಂಚು)ತೂಕವಿರುವ ಅದರ ಖಡ್ಗದ ತೂಕವೇ ಸುಮಾರು 4ಟನ್‌ ಇರುವ ಒಟ್ಟು 84 ಕೋಟಿ ರೂಗಳ ವೆಚ್ಚದಲ್ಲಿ, 23 ಎಕರೆ ವಿರ್ಸ್ತೀರ್ಣದ ಥೀಂ ಪಾರ್ಕ್ ನಲ್ಲಿ 11.11.22ರ ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಅನಾವರಣಗೊಳಿಸುವ ಮೂಲಕ ಬೆಂಗಳೂರಿನ ನಿರ್ಮಾತೃರ ಕೀರ್ತಿಪತಾಕೆಯನ್ನು ಮತ್ತೊಮ್ಮೆ ಇಡೀ ವಿಶ್ವಕ್ಕೆ ಪರಿಚಯಿಸಿದ್ದಲ್ಲದೇ, ಅವರಿಗೆ ಸಲ್ಲಬೇಕಾದ ನಿಜವಾದ ಗೌರವವನ್ನು ಸಲ್ಲಿಸಿದ್ದಾರೆ. ಸುಮಾರು 500 ವರ್ಷಗಳ ಹಿಂದೆಯೇ ಬೆಂಗಳೂರನ್ನು ವಿಶ್ವವಿಖ್ಯಾತ ನಗರವನ್ನಾಗಿ ಮಾಡುವ ದೂರದೃಷ್ಟಿಯನ್ನು ಹೊಂದಿದ್ದ ನಾಡಪ್ರಭು ಶ್ರೀ ಕೆಂಪೇಗೌಡರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಆದರೆ 2500 ಸಾವಿರ ಬಿ.ಎಂ.ಟಿ.ಸಿ ಬಸ್ ಗಳನ್ನು ಪ್ರಗತಿ ಪ್ರತಿಮೆ ಕಾರ್ಯಕ್ರಮದ ಹೆಸರಿನಲ್ಲಿ ಓಡಿಸುವ ಅಗತ್ಯವಿತ್ತೇ ಎಂಬುದೊಂದು ಪ್ರಶ್ನೆ.

ಅಷ್ಟು ದೊಡ್ಡ ಪ್ರಮಾಣದಲ್ಲಿ ಬಸ್ ಕಾರ್ಯಕ್ರಮ ಕ್ಕೆ ಬಿಟ್ಟ ಕಾರಣ ಕೆಲಸಕ್ಕೆ ಹೋಗುವ ಉದ್ಯೋಗಿಗಳು ಪರದಾಡುತ್ತಾ , ಬಸ್ ನಲ್ಲಿ ನೇತಾಡುತ್ತಾ , ಒಂದು ಬಸ್ ನಲ್ಲಿ 3 ಬಸ್ ಗೆ ಆಗುವಷ್ಟು ಜನ ಕಛೇರಿ ಗೆ ತಡವಾಗಿ ತಲುಪಿದರು , ರಸ್ತೆಯಲ್ಲಿ ಹೊಂಡ ಬಿದ್ದು ಅನೇಕ ನಾಗರೀಕರು ರಸ್ತೆ ಬದಿಯಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾ ಇದ್ದಾರೆ , ಹಾಗೂ ಅನೇಕ ಜ್ವಲಂತ ಸಮಸ್ಯೆಗಳು ಇವೆ ಸಿಲಿಕಾನ್ ಸಿಟಿಯಲ್ಲಿ.

ಬನಶಂಕರಿ 3 ನೇ ಹಂತದಲ್ಲಿ ಇಟ್ಟಮಡು ವಿನಲ್ಲಿ ಒಂದು ಸರಿಯಾದ ಬಸ್ ನಿಲ್ದಾಣ ಇಲ್ಲ , ಗ್ರಂಥಾಲಯ ಇಲ್ಲ, ಎಸ್.ಜಿ.ಆಸ್ಪತ್ರೆಯ ಮುಂಭಾಗದಲ್ಲಿ ಒಂದು ಶೌಚಾಲಯ ಇದ್ದು ಅದು ಸಹ ಮುಚ್ಚಿರುತ್ತದೆ , ಅದನ್ನು ಗ್ರಂಥಾಲಯ ಮಾಡುವ ಮನಸ್ಸು ಮಾಡಿ ಕಂದಾಯ ಸಚಿವರೇ – ಬನಶಂಕರಿ 3 ನೇ ಹಂತದಲ್ಲಿ ಇರುವ ಜ್ವಲಂತ ಸಮಸ್ಯೆಗೆ ಪರಿಹಾರ ಯಾವಾಗ?

ಪ್ರಗತಿ ಪ್ರತಿಮೆ ಹೆಸರಿನಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿ ಅನಾವರಣ ಕ್ಕೆ – ಬನಶಂಕರಿ ಬಸ್ ಡಿಪೋ ದ ಮ್ಯಾನೇಜರ್ ಅವರಿಗೆ ಕರೆ ಮಾಡಿದಾಗ 2500 ಸಾವಿರ ಬಿ.ಎಂ.ಟಿ.ಸಿ ಬಸ್ ಬಿಡಲಾಗಿದೆ ಎನ್ನುತ್ತಾರೆ , ಖಾಸಗಿ ಕಛೇರಿ ಗೆ ಕೆಲಸಕ್ಕೆ ಹೋಗುವ ಸಿಬ್ಬಂದಿಗಳು , ಕೊಲಿ ಗೆ ಹೋಗುವ ಕಾರ್ಮಿಕರು ಹಾಗೂ ನಗರದ ವಿವಿಧೆಡೆ ವಿವಿಧ ಬಗೆಯ ಕೆಲಸಕ್ಕೆ ಹೋಗುವ ಜನರು ಬಿ.ಎಂ.ಟಿ.ಸಿ ಬಸ್ ಇಲ್ಲದೆ ಪರಾದಾಡುತ್ತಾ ಇದ್ದ ದೃಶ್ಯಗಳು ಕಂಡು ಬಂತು.

2500 ಸಾವಿರ ಬಸ್ ನಲ್ಲಿ ಕಾರ್ಯಕ್ರಮ ಕ್ಕೆ ಕರೆದು ಕೊಂಡು ಹೋಗುತ್ತಾ ಇದ್ದ ದೃಶ್ಯ ಕಂಡು , ಬಂತು – ಬಸ್ ನಲ್ಲಿ ಕಾರ್ಯಕ್ರಮ ಕ್ಕೆ ಹೋಗುತ್ತಾ ಇದ್ದ ವ್ಯಕ್ತಿ ಒಬ್ಬರು ಹೆಸರು ಹೇಳಲು ಇಚ್ಛಿಸದೆ , ಒಂದು ದಿನ ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದರೆ 300 ರೂಪಾಯಿ, 500 ರೂಪಾಯಿ ಹಾಗೂ 1 ಸಾವಿರ ರೂಪಾಯಿ ಗಳನ್ನು ಕೊಟ್ಟಿದ್ದಾರೆ , ನಮಗೆ ಉಚಿತ ಊಟ ಹಾಗೂ ಉಚಿತ ಪ್ರಯಾಣ ಇದೆ ಎಂದು ತಿಳಿಸಿದ್ದಾರೆ ಅದಕ್ಕೆ ನಾನು ಸಹ ಹೋಗುತ್ತಾ ಇದ್ದೇನೆ , ದುಡ್ಡಿನ ಜೊತೆ ಗೆ ಉಚಿತ ಊಟ ಸಿಗುತ್ತದೆ ಎಂದು ನಕ್ಕರು.

ಶಿಕ್ಷಣ ಸಚಿವರೇ ಇತ್ತ ನೋಡಿ:

ಪದ್ಮನಾಭ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಇರುವ ಬನಶಂಕರಿ 3 ನೇ ಹಂತದ ದತ್ತಾತ್ರೇಯ ದೇವಾಲಯದ ಮುಂಭಾಗದಲ್ಲಿ ಇದೆ ಖಾಸಗಿ ಶಾಲೆ. ನರಗುಂದ ಇಂಟರ್ ನ್ಯಾಷನಲ್ (ನರಗುಂದ ಅಂತಾರಾಷ್ಟ್ರೀಯ ಶಾಲೆ ) – ಇಲ್ಲಿ ಶಾಲೆ ಇದೆ , ವಾಹನ ಗಳನ್ನು ನಿಧಾನವಾಗಿ ಚಲಾಯಿಸಿ ಎಂಬ ಸೂಚನಾ ಫಲಕವು ಇಲ್ಲ. ಈ ರೀತಿ ಸಿಲಿಕಾನ್ ಸಿಟಿಯಲ್ಲಿ ಎಷ್ಟು ಶಾಲೆಗಳಿರಬಹುದು ಎಂದು ಶಿಕ್ಷಣ ಸಚಿವರೇ ನೋಡಿ ?! ಪೋಷಕರು ಮಕ್ಕಳ್ಳನ್ನು ಭವ್ಯ ಭಾರತದ ಪ್ರಜೆಗಳನ್ನಾಗಿ ಮಾಡಲು ಶಾಲೆ ಗೆ ಕಳುಹಿಸುತ್ತಾರೆ , ಶಾಲಾ ಆಡಳಿತ ಮಂಡಳಿ ಸೂಚಿಸಿದ ಶುಲ್ಕ ಪಾವತಿಸಿ.

(ಡೊನೇಶನ್ ಕಟ್ಟಿ) ಆದರೆ ಅನೇಕ ಶಾಲಾ ಆಡಳಿತ ಮಂಡಳಿಗಳು ಶುಲ್ಕ — ಡೊನೇಶನ್ ವಸೂಲಿ ಮಾಡುವದರಲ್ಲಿ ತಲ್ಲೀನ ರಾಗಿ ಶಾಲೆಯ ಹೊರಗೆ ಮತ್ತು ಒಳಗೆ ಮಕ್ಕಳಿಗೆ ಮಾಡಬೇಕಾದ ಮೂಲಭೂತ ಸೌಕರ್ಯವನ್ನು ನೀಡಿರುವುದಿಲ್ಲ, ಶಾಲೆಯಲ್ಲಿ ಒಂದು ಸೂಕ್ತ ಆಟದ ಮೈದಾನವು ಇಲ್ಲದೆ ಇರುವ ಅವ್ಯವಸ್ಥೆ ಯಲ್ಲಿ ಶಾಲೆ ಸಾಗುತ್ತ ಇರುತ್ತದೆ ಹಾಗು ಶಾಲೆಯ ಸಮೀಪ ಇರುವ ಜಾಗದಲ್ಲಿ ಜನರು ಕಸ , ಹಾಸಿಗೆ ಹಾಗೂ ಗಲೀಜು ತಂದು ಎಸೆಯುವ ಮೂಲಕ ಭವ್ಯ ಭಾರತದ ಭವ್ಯ ಪ್ರಜೆಗಳು ಎಂದು ಸಾರುತ್ತಾ ಇದ್ದರೆ ಇತ್ತ ಶಾಲೆಯ ಅಡಳಿತ ಮಂಡಳಿ ಅದರ ಬಗ್ಗೆ ಬಿ.ಬಿ.ಎಂ.ಪಿ ಗೆ ಕಂಪ್ಲೇಂಟ್ ಮಾಡದೆ ಶಾಲೆಯ ಆವರಣದಲ್ಲಿ ಗಬ್ಬು ನಾರುತ್ತಾ ಇದ್ದರೂ ಅದರ ಬಗ್ಗೆ ಅವರಿಗೆ ತಲೆ ಬಿಸಿ ಇರುವುದಿಲ್ಲ ,ಇತ್ತೀಚೆಗೆ ಶಾಲೆಯಲ್ಲಿ ವಿಷ ಸರ್ಪ ಬಂದಿತ್ತು ಅದನ್ನು ಹಿಡಿದು ತೆಗೆದು ಕೊಂಡು ಹೋಗಿದ್ದಾರೆ ಎಂದು ಶಾಲೆಯ ವಿದ್ಯಾರ್ಥಿಗಳು ಮಾತನಾಡುತ್ತ ರಸ್ತೆಯಲ್ಲಿ ಹೋಗುತ್ತ ಇದ್ದ ವಿಷಯ ನನ್ನ ಕಿವಿಗೆ ಬಿದ್ದಿತ್ತು.

ಅದರಿಂದ ಸಿಲಿಕಾನ್ ಸಿಟಿಯಲ್ಲಿ ಇರುವ ಎಲ್ಲ ಶಾಲೆಗಳ ಅಕ್ಕ – ಪಕ್ಕ ಸೂಚನಾ ಫಲಕ ಇದೆಯೇ , ಶಾಲೆಯಲ್ಲಿ ಸೂಕ್ತವಾದ ಆಟದ ಮೈದಾನ ಇದೆಯೇ , ಶಾಲೆಯ ಅಕ್ಕ – ಪಕ್ಕ ಸ್ವಚ್ಛತೆ ಇದೆಯೇ ಎಂದು ನೋಡಿ. ಶಿಕ್ಷಣ ಸಚಿವರೇ ಇತ್ತ ನೋಡಿ ಶಾಲೆಯ ಸುತ್ತ ಮುತ್ತಲಿನ ಪ್ರದೇಶ ಸ್ವಚ್ಛತೆ ಇಂದ ಇರಬೇಕು , ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು ಎಂಬುದು ನರೇಂದ್ರ ಮೋದಿಯವರ ಆಶಯ ಅಲ್ಲವೇ?

ನೀವೇ ಲೆಕ್ಕ ಹಾಕಿ ಕೊಳ್ಳಿ 2500 ಸಾವಿರ ಬಸ್ ನ ತುಂಬಾ ಜನರು ಒಬ್ಬರಿಗೆ 300 ರೂಪಾಯಿ ಹಾಗು ಹಲವೆಡೆ ಐನೂರು ರೂಪಾಯಿ ಮತ್ತು ಕೆಲವು ಕಡೆ ಒಂದು ಸಾವಿರ ರೂಪಾಯಿ , ಉಚಿತ ಊಟ, ಹಾಗಾದರೆ ಪ್ರತಿಮೆ ಅನಾವರಣ ಮಾಡಲು ಸರ್ಕಾರ ಖರ್ಚು ಮಾಡುತ್ತಿರುವ ಹಣ ಎಷ್ಟು ? ಅದು ಜನರ ದುಡ್ಡೇ ? ಅಥವಾ ಸರ್ಕಾರದ ದುಡ್ಡೇ, ಅಥವಾ ಬಿ.ಜೆ ಪಿ ಪಕ್ಷದ ಹಣವೇ? ರಸ್ತೆಯ ತುಂಬಾ ಹೊಂಡಗಳು, ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲದ ಸರ್ಕಾರಕ್ಕೆ ಅಷ್ಟು ಖರ್ಚು ಮಾಡಿ ಕಾರ್ಯಕ್ರಮ ಮಾಡುವ ಅವಶ್ಯಕತೆ ಇತ್ತೇ ? ಕಡಿಮೆ ಖರ್ಚಿನಲ್ಲಿ ಕಾರ್ಯಕ್ರಮ ಮಾಡಬಹುದಿತ್ತು ಅಲ್ಲವೇ ? ಏನಂತೀರಿ? ಪ್ರಜಾಪ್ರಭುತ್ವದ ಪ್ರಜೆಗಳೇ…!


ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ
9480129458

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!