ಸಿಂದಗಿ : ತಾಲೂಕಿನ ಸುಕ್ಷೇತ್ರ ಚಿಕ್ಕಸಿಂದಗಿ ಗ್ರಾಮದ ಶ್ರೀ ಸದ್ಗುರು ವೀರೇಶ್ವರ ಮಹಾಶಿವಯೋಗಿಗಳ 82 ನೇ ಪುಣ್ಯಸ್ಮರಣೋತ್ಸವದ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಮಹಾದಾಸೋಹಿ ಅರಳಗುಂಡಗಿ ಶ್ರೀ ಶರಣಬಸವೇಶ್ವರರ ಪುರಾಣ – ಪ್ರವಚನ ಕಾರ್ಯಕ್ರಮ ಅಕ್ಟೋಬರ್ 25 ರವರೆಗೆ ಸಾಗಿಬರುವದು.
ಅಂದು ರಾತ್ರಿ 9=30 ಗಂಟೆಗೆ ದೀಪೋತ್ಸವ , ತದನಂತರ ಅರಳಗುಂಡಗಿ ಶರಣಬಸವೇಶ್ವರರ ಪುರಾಣ ಪ್ರವಚನವನ್ನು ಬಸವನಬಾಗೇವಾಡಿಯ ಸಂಸ್ಥಾನ ಹಿರೇಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯರ ವಾಣಿಯಿಂದ ಸಾಗಿ ಬಂದ ಪುರಾಣ ಮಹಾಮಂಗಲಗೊಳ್ಳುವದು. ರಾತ್ರಿ 10ಗಂಟೆಗೆ ಶಿವಭಜನೆ ಜಾಗರಣೆ, ನಂತರ ರಾತ್ರಿ 12 ಗಂಟೆಗೆ ಅಗ್ಗಿ ಪುಟು ಮಾಡುವುದು. ಅಕ್ಟೋಬರ್ 26 ರಂದು ಬುಧುವಾರ ಬೆಳಿಗ್ಗೆ ಶ್ರೀ ಸದ್ಗುರು ಶ್ರೀ ವೀರೇಶ್ವರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ನಂತರ ಮುಂಜಾನೆ 9:00 ಗಂಟೆಗೆ ಅಗ್ಗಿ ಹಾಯುವುದು. ನಂತರ ಪಲ್ಲಕ್ಕಿ ಮೆರವಣಿಗೆ ಹಾಗೂ ಪುರವಂತರ ಸೇವೆ.ಡೊಳ್ಳು ಕುಣಿತ ಗ್ರಾಮದ ಮುಖ್ಯ ಬೀದಿಗಳಲ್ಲಿ ಹಾದು ಶ್ರೀ ಮಠಕ್ಕೆ ಆಗಮಿಸುವುದು.ಅಂದು ಸಾಯಂಕಾಲ 5:00 ಗಂಟೆಗೆ ರಥೋತ್ಸವ ಜರುಗುವದು. ಕಾರ್ಯಕ್ರಮದಲ್ಲಿ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಮಲಘಾಣ ಹಿರೇಮಠದ ಶ್ರೀ ಜಡೇಶಾಂತಲಿಂಗ ಶಿವಾಚಾರ್ಯರು, ಬಸವನಬಾಗೇವಾಡಿಯ ಸಂಸ್ಥಾನ ಹಿರೇಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯರು, ಪೇಠ ಶಿರೂರದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀ ವೇ.ಶಂಕ್ರಯ್ಯ ಗುರುಲಿಂಗಯ್ಯ ಹಿರೇಮಠ, ಶ್ರೀ ವೇ.ಬಸಯ್ಯ ಈರಯ್ಯ ಮಠಪತಿ, ಶಾಸಕ ರಮೇಶ ಬಾಳಪ್ಪ ಭೂಸನೂರ ಭಾಗವಹಿಸುವರು.
ಕೆರುಟಗಿ ಹಿರೇಮಠದ ಖ್ಯಾತ ಗವಾಯಿ ರೇಣುಕಾಚಾರ್ಯ ಹಾಗೂ ಜೇವರ್ಗಿಯ ಮಹಾಂತೇಶ ಕಾಳಗಿ ಇವರಿಂದ ಸಂಗೀತ ಸೇವೆ ಜರುಗುತ್ತದೆ.
ಶ್ರೀ ಮಠದಲ್ಲಿ ಅನ್ನ ಮಹಾ ಪ್ರಸಾದ ಜರುಗುವದು. ಶ್ರೀ ಗುರು ವೀರೇಶ್ವರ ನಾಟ್ಯ ಸಂಘ ಚಿಕ್ಕಸಿಂದಗಿ ಇವರು ಅರ್ಪಿಸುವ ” ಉತ್ತಮರ ಮನೆತನ ಅರ್ಥಾತ್ ಧರ್ಮವಂತರು ಸುಂದರ ಸಾಮಾಜಿಕ ನಾಟಕವು “1ನೇ ಪ್ರಯೋಗ ಅ 26 ರ ಬುಧವಾರ ರಂದು ಹಾಗೂ ಅ 28 ರಂದು ಶುಕ್ರವಾರ ರಂದು ರಾತ್ರಿ 10=00 ಘಂಟೆಗೆ ನಾಟಕವು ಜರಗುವದು. ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಸದ್ಗುರು ಶ್ರೀ ವೀರೇಶ್ವರ ಜಾತ್ರೆ ಮಹೋತ್ಸವ ಪಲ್ಲಕ್ಕಿ ಮೇರವಣಿಗೆ ಹಾಗೂ ತೇರು ಎಳೆಯುವ ಕಾರ್ಯಕ್ರಮ ಜರಗುವದು ಹಾಗೂ ಬೃಹತ ಆಕಾರದ ಚಿರಕಿ ಘಾಣ ಬಂದು ನೆಲಸಿದೆ ಕಾರಣ ಎಲ್ಲಾ ಭಕ್ತಾದಿಗಳು ಜಾತ್ರೆಗೆ ಆಗಮಿಸಿ ಶೋಭೆ ತರಬೇಕು ಎಂದು ಶ್ರೀಮಠದ ಸಮಸ್ತ ಚಿಕ್ಕಸಿಂದಗಿ,ಬಂದಾಳ, ಆಹೇರಿ ಗ್ರಾಮದ ಸದ್ಭಕ್ತರು ಪರವಾಗಿ ಕಮಿಟಿಯವರು ವಿನಂತಿಸಿಕೊಂಡಿದ್ದಾರೆ.