spot_img
spot_img

ಜಿಲ್ಲಾಸ್ಪತ್ರೆಯಲ್ಲಿ ಮಗು ಸಾವು ; ವೈದ್ಯರ ನಿರ್ಲಕ್ಷ್ಯ ಆರೋಪ

Must Read

ಬೀದರ ಜಿಲ್ಲಾಸ್ಪತ್ರೆಯಲ್ಲಿ ೭ ತಿಂಗಳ ಮಗುವಿನ ಸಾವು ಸಂಭವಿಸಿದ್ದು ಸಾವಿಗೆ ಯಾರು ಕಾರಣ ಎಂಬ ಪ್ರಶ್ನೆ ಎದ್ದಿದೆ. ಜಿಲ್ಲಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ.

ಹಾಗೆ ನೋಡಿದರೆ ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಬಹುದು.

ಚಾಂದಪಾಶಾ ಎಮ್.ಮಿರ್ಜಾ ಪೂರ ಗ್ರಾಮದ ನಿವಾಸಿ ಮಗುವಿಗೆ ಹುಷಾರಿಲ್ಲ ಎಂದು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ ಆದರೆ ಆಸ್ಪತ್ರೆಯಲ್ಲಿ ಮಗುವಿನ ಸಾವು ಆಗುತ್ತದೆ ಈ ಸಾವಿಗೆ ಜಿಲ್ಲಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆಸ್ಪತ್ರೆ ಆವರಣದಲ್ಲಿ ಕುಟುಂಬದ ಸದಸ್ಯರು ಪ್ರತಿಭಟನೆ ಮಾಡಿದರು.

ಮಗುವಿನ ಕುಟುಂಬ ಸದಸ್ಯರು ಆರೋಪ ಮಾಡುವಂತೆ, ನನ್ನ ಮಗುವಿಗೆ ಒಂಬತ್ತು ಗಂಟೆಗೆ ಸಮಯದಲ್ಲಿ ಆಸ್ಪತ್ರೆ ದಾಖಲೆ ಮಾಡಿದ್ದೆವು. ಆಗಿನಿಂದಲೂ ನನ್ನ ಮಗುವನ್ನು ನೋಡಲು ಒಬ್ಬ ವೈದ್ಯಾಧಿಕಾರಿ ಕೂಡಾ ಮುಂದೆ ಬಂದಿಲ್ಲ . ಆ ಟೆಸ್ಟ್ ಈ ಟೆಸ್ಟ್ ನೆಪ ಹೂಡಿ ಕುಟುಂಬ ಸದಸ್ಯರಿಗೆ ಟೆಸ್ಟ್ ಮಾಡಿಕೊಂಡು ಬನ್ನಿ ಎಂದು ಹೇಳುತ್ತಾರೆ ಆದರೆ ಸರಿಯಾಗಿ ಟ್ರೀಟ್ ಮೆಂಟ್ ನೀಡೋದಿಲ್ಲ ಎಂದು ಜಿಲ್ಲಾ ಆಸ್ಪತ್ರೆ ಡಾಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದು ಕಡೆ ಮಗುವಿಗೆ ಆಕ್ಸಿಜನ್ ಹಚ್ಚಲು ಒಬ್ಬ ಸಿಬ್ಬಂದಿ ಇರಲಿಲ್ಲ ಎಂದು ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯನ್ನು ತೆರೆದಿಟ್ಟರು.

ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ಮುಂದೆ ಈ ರೀತಿ ಮತ್ತೊಮ್ಮೆ ಈ ಘಟನೆ ನಡೆಯದ ಹಾಗೆ ನೋಡಿಕೊಂಡು ಆಸ್ಪತ್ರೆಯಲ್ಲಿ ಯಾವ ಡಾಕ್ಟರ್ ಸರಿಯಾಗಿ ಕರ್ತವ್ಯ ಮಾಡುತ್ತಿಲ್ಲ ಎಂಬುದರ ತನಿಖೆ ಮಾಡಿಸಿ ಮಗುವನ್ನು ಕಳೆದುಕೊಂಡ ಆ ಬಡಕುಟಂಬಕ್ಕೆ ನ್ಯಾಯ ಒದಗಿಸಬೇಕೆಂದು ಬೀದರ್ ಜಿಲ್ಲೆಯ ಜನರ ಅಭಿಪ್ರಾಯವಾಗಿದೆ.


ವರದಿ: ನಂದಕುಮಾರ ಕರಂಜೆ,ಬೀದರ

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!