ಸಿಂದಗಿ: ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಜೂನ 12 ರಂದು ಜಗತ್ತಿನಾದ್ಯಂತ 100 ದೇಶಗಳಲ್ಲಿ ಆಚರಿಸಲಾಗುತ್ತಿದೆ ಅಂತಾರಾಷ್ಟೀಯ ಕಾರ್ಮಿಕ ಸಂಸ್ಥೆ ಪ್ರಕಾರ 160 ಮಿಲಿಯನ್ ಮಕ್ಕಳು ಬಾಲ ಕಾರ್ಮಿಕರಿದ್ದಾರೆ. 72 ಮಿಲಿಯನ್ ಮಕ್ಕಳು ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ. 2002 ರಂದು ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ ಮೊಟ್ಟಮೊದಲ ಬಾರಿಗೆ ಆಚರಿಸಲಾಯಿತು ಎಂದು ಶಿಶು ಸಂಗಮ ಸಂಸ್ಥೆ ಸಹನಿರ್ದೇಶಕರಾದ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಹೇಳಿದರು.
ತಾಲೂಕಿನ ಬೇನಕೊಟಗಿ ಏಲ್.ಟಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 2020 ರಿಂದ ಕೋವಿಡ್ ನಂತರ ಬಾಲಕಾರ್ಮಿಕರು ಹೆಚ್ಚಾಗಿದ್ದಾರೆ. 3 ವರ್ಷದ ಹಿಂದಿನ 2019 ವರದಿ ಪ್ರಕಾರ 5-6 ವರ್ಷದ 8 ಲಕ್ಷ ಮಕ್ಕಳು ಬಾಲ ಕಾರ್ಮಿಕರು ಹಾಗೂ 5 ಲಕ್ಷ ಮಕ್ಕಳು ಶಾಲೆಗೆ ಹೋಗುವುದಿಲ್ಲ ಬಹುಪಾಲು ಮಕ್ಕಳು ಕುಟುಂಬ ಆದಾರಿತ ಉದ್ಯೋಗದಲ್ಲಿ ತೊಡಗಿದ್ದಾರೆ. 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ ಮತ್ತು ಶಿಕ್ಷಾರ್ಹ. 14-18 ವರ್ಷದೊಳಗಿನ ಕಿಶೋರಿ/ಕಿಶೋರರು ಕೆಲಸ ಮಾಡಿ ಶಾಲೆಗೆ ಹೋಗಬಹುದು, ಆದರೆ ಅಪಾಯಕಾರಿ ಕೆಲಸ ಮಾಡುವ ಹಾಗಿಲ್ಲ ಉದಾ: ಕಾರ್ಖಾನೆ, ಗಣಿಗಾರಿಕೆ ಹಾಗೂ ಕಲ್ಲು ಒಡೆಯುವ ಕೆಲಸ ಮಾಡುವಂತಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಮಕ್ಕಳನ್ನು ಬಲವಂತ ದುಡಿಮೆಗೆ – ಮಾದಕ ವಸ್ತು, ಕಳ್ಳಸಾಗಣಿಕೆ, ವೇಶ್ಯಾವಾಟಿಕೆ ಮುಂತಾದ ಆಕ್ರಮ ಚಟುವಟಿಕೆಗಳಿಗೆ ತಳ್ಳುವಂತದ್ದು ಇದೆ. 2022 ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನದ ಥೀಮ್ ಸಾರ್ವಜನಿಕ ಸಾಮಾಜಿಕ ರಕ್ಷಣೆ ಬಾಲಕಾರ್ಮಿಕತೆಯನ್ನು ಕೊನೆಗೊಳಿಸುವ. ಬಾಲ ಕಾರ್ಮಿಕತೆಯ ವಿರುದ್ದ ನಾವು ನೀವು ಕೈ ಜೋಡಿಸಿ ಮಕ್ಕಳ ಭವಿಷ್ಯ ಉಜ್ವಲಗೊಳಿಸೋಣ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಲ್.ಎಸ್ ಸೊನ್ನ ಶಿಕ್ಷಕರು ಮಾತನಾಡಿ, ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ 14 ವರ್ಷದ ಒಳಗಿನ ಮಕ್ಕಳನ್ನು ಬಾಲ ಕಾರ್ಮಿಕರು ಎಂದು ಕರೆಯುತ್ತೇವೆ. ಮಕ್ಕಳನ್ನು ದುಡಿಮೆಗೆ ತಳ್ಳುವುದರಿಂದ ಅವರ ಶಿಕ್ಷಣ ಹಾಳು ಆಗುತ್ತದೆ. ನಮ್ಮ ಸ್ವಾರ್ಥಕ್ಕೋಸ್ಕರ ಮಕ್ಕಳನ್ನು ಭವಿಷ್ಯವನ್ನು ಹಾಳು ಮಾಡುತ್ತೇವೆ ಎಂದು ತಿಳಿಸಿದರು.
ಮುಖ್ಯ ಗುರು ಎನ್.ಎಚ್ ಕಲವಂತ ಅಧ್ಯಕ್ಷತೆ ವಹಿಸಿದ್ದರು. ಎಸ.ಎಸ.ಬಿರಾದಾರ ಸ್ವಾಗತಿಸಿದರು, ಬಿ.ಎಂ ಬಾಗೇವಾಡಿ ಸಹ ಶಿಕ್ಷಕರು ನಿರೂಪಿಸಿದರು. ಎಂ. ಸಿ.ಕೆಂಬಾವಿ ಸಹ ಶಿಕ್ಷಕರು ವಂದಿಸಿದರು.